ನೀರಿನಲ್ಲಿ ಕೊಚ್ಚಿ ಹೋದ ಕಾರು- ಇಬ್ಬರ ರಕ್ಷಣೆ

484

Get real time updates directly on you device, subscribe now.

ಕುಣಿಗಲ್‌: ಮಾರ್ಕೋನಹಳ್ಳಿ ಜಲಾಶಯದಿಂದ ಶಿಂಷಾ ನದಿಗೆ ಹರಿಯುತ್ತಿರುವ ನೀರಿನಲ್ಲಿ ನಡುರಾತ್ರಿಯಲ್ಲಿ ಸಿಲುಕಿದ ಇಬ್ಬರು ಯುವಕರನ್ನು ಅಗ್ನಿಶಾಮಕ ಇಲಾಖಾ ಸಿಬ್ಬಂದಿ ಸತತ ಎರಡು ತಾಸು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ಹಾಲಿ ಬೆಂಗಳೂರಿನಲ್ಲಿ ವಾಸವಿರುವ, ಮೂಲತಃ ತಾಲೂಕಿನ ಸಂತೇಮಾವತ್ತೂರು ಗ್ರಾಮದವರಾದ ವಿನಯ್‌, ಸ್ನೇಹಿತ ಯೋಗೀಶ್‌ ಬೆಂಗಳೂರಿನಿಂದ ನಾಗಮಂಗಲದ ಜಕ್ಕನಹಳ್ಳಿಗೆ ತೆರಳಲು ಸಮೀಪದ ರಸ್ತೆಯಾದ ಮಾರ್ಕೋನಹಳ್ಳಿ ಜಲಾಶಯದ ಮುಂಭಾಗದಲ್ಲಿರುವ ಮುಳುಗು ಸೇತುವೆಯ ರಸ್ತೆಯ ಮೂಲಕ ಇಂಡಿಕಾ ಕಾರಿನಲ್ಲಿ ಬುಧವಾರ ನಡುರಾತ್ರಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿರುವುದನ್ನು ಗಮನಿಸದೆ ಮುಳುಗು ಸೇತುವೆ ರಸ್ತೆಯಲ್ಲಿ ವಾಹನ ಚಲಾಯಿಸಿದ್ದಾರೆ, ಆದರೆ ನೀರಿನ ಸೆಳೆತಕ್ಕೆ ಸಿಕ್ಕ ಕಾರು ಶಿಂಷಾ ನದಿಗೆ ಜಾರಿ, ನದಿಯಲ್ಲಿದ್ದ ಬಂಡೆಗೆ ತಗುಲಿ ಹಾಗೆ ನಿಂತಿದೆ. ಸಹಾಯಕ್ಕಾಗಿ ಕೂಗಿಕೊಂಡಾಗ ಜಲಾಶಯದ ಗಾರ್ಡ್ ಗಮನಿಸಿ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಕುಣಿಗಲ್‌ ಅಗ್ನಿ ಶಾಮಕ ಠಾಣಾಧಿಕಾರಿ ಗೋವಿಂದಯ್ಯ, ಸಿಬ್ಬಂದಿ ರಾಧಾಕೃಷ್ಣ, ಧರಣೇಶ, ಪ್ರೀತಮ್‌, ತಿಪ್ಪೇಶ್‌ ಬೆಳಗಿನ ಜಾವ ಎರಡು ಗಂಟೆಗೆ ತೆರಳಿ ಸತತ ಎರಡು ಗಂಟೆ ಕಾರ್ಯಾಚರಣೆ ಮಾಡಿ ಕಾರಿನಲ್ಲಿದ್ದ ಯುವಕರನ್ನು ರಕ್ಷಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!