ಪ್ರಾಣದ ಹಂಗು ಬಿಟ್ಟು ಮಕ್ಕಳ ರಕ್ಷಣೆ ಮಾಡಿದ ಯುವಕರ ತಂಡ

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವರ ರಕ್ಷಣೆ

475

Get real time updates directly on you device, subscribe now.

ಕೊರಟಗೆರೆ: ತುಂಬಾಡಿ ಹೊಸಕೆರೆಯ ಕೋಡಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮೂರು ಜನರನ್ನು ಸ್ಥಳೀಯ ಯುವಕರ ತಂಡ ತಮ್ಮ ಪ್ರಾಣದ ಹಂಗನ್ನು ತೊರೆದು ಹಗ್ಗದ ಸಹಾಯದಿಂದ ಬಿರುಸಾಗಿ ಹರಿಯುತ್ತಿದ್ದ ನೀರಿಗಿಳಿದು ರಕ್ಷಣೆ ಮಾಡಿದ್ದಾರೆ.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ವ್ಯಾಪ್ತಿಯ ತುಂಬಾಡಿಯ ಹೊಸಕೆರೆಯ ಕೋಡಿಯ ನೀರಿನ ದೃಶ್ಯದ ಸೊಬಗು ನೋಡಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ, ಅದರಲ್ಲೂ ಗ್ರಾಮೀಣ ಪ್ರದೇಶದ ಯುವಕರ ದಂಡೇ ಪ್ರತಿನಿತ್ಯ ತುಂಬಾಡಿ ಕೆರೆಯ ಸೊಬಗು ನೋಡಲು ಆಗಮಿಸುತ್ತಿದೆ.
ಮಳೆರಾಯನ ಆರ್ಭಟದಿಂದ ತುಂಬಾಡಿ ಕೆರೆಯ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಕೋಡಿಯ ನೀರು ರಭಸವಾಗಿ ಹರಿಯುತ್ತಿದೆ, ಕೆರೆ ನೋಡಲು ಸೇತುವೆ ದಾಟಿ ಹೋಗಬೇಕಿದೆ, ಸೇತುವೆಯ ಮೇಲೆ ನೀರು ರಭಸವಾಗಿ ಹರಿಯುತ್ತಿರುವ ಪರಿಣಾಮ ಅಪಾಯವೇ ಹೆಚ್ಚಾಗಿದೆ.
ಹೊರ ಹರಿವು ನೀರಿನ ಪ್ರಮಾಣದ ಅಪಾಯ ಅರಿಯದೆ ಕೊರಟಗೆರೆ ತಾಲೂಕಿನ ಸೀಗೆಪಾಳ್ಯದ ಕುಟುಂಬವೊಂದು ಸೇತುವೆ ದಾಟಲು ಪ್ರಯತ್ನ ಮಾಡಿದ್ದಾರೆ. ತಂದೆಯ ಜೊತೆಯಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳು ನೀರಿನ ರಭಸಕ್ಕೆ ಸೇತುವೆಯಿಂದ ಕೆಳಗೆ ಬಿದ್ದು ಕೊಚ್ಚಿ ಹೋಗುತ್ತಿದ್ದ ವೇಳೆ ಹಿಂಬದಿ ಬರುತ್ತಿದ್ದ ಯುವಕನು ರಕ್ಷಣೆ ಧುಮುಕಿದ್ದಾನೆ.
ತುಂಬಾಡಿ ಕೆರೆಯ ನೀರಿನ ರಭಸಕ್ಕೆ ಮೂರು ಜನರು ಕೊಚ್ಚಿ ಹೋಗುತ್ತಿದ್ದ ವೇಳೆ ತುಂಬಾಡಿ ಗ್ರಾಮದ ರಾಜಣ್ಣ, ರಂಗನಾಥ, ನಟರಾಜು, ಅರುಣ್‌ ಹಾಗೂ ಸಂತೋಷ್‌ ಸೇರಿದಂತೆ ಸ್ಥಳೀಯರು ಮೂರು ಜನರನ್ನು ತಡೆದು ಹಗ್ಗದ ಸಹಾಯದಿಂದ ರಕ್ಷಣೆ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!