ರೈತರು ಕೃಷಿಯಲ್ಲಿ ಸಾವಯವ ಗೊಬ್ಬರ ಬಳಸಲಿ

146

Get real time updates directly on you device, subscribe now.

ತುಮಕೂರು: ವಿಷಮುಕ್ತ ಆಹಾರ, ಸಮೃದ್ದ ರೈತ ನಮ್ಮ ಕಂಪನಿಯ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಇಡೀ ದೇಶದಾದ್ಯಂತ ಸಾವಯವ ಗೊಬ್ಬರವನ್ನು ರೈತರಿಗೆ ನೀಡುವ ಕೆಲಸವನ್ನು ಆಡ್ ಶಾಫ್‌ ಇ ರಿಟೇಲ್‌ ಲಿ ಮಾಡುತ್ತಿದೆ ಎಂದು ಕಂಪನಿಯ ಸಾಧಕರಲ್ಲಿ ಒಬ್ಬರಾದ ದಿನೇಶ್‌ ಪಾಂಡ್ಯ ತಿಳಿಸಿದ್ದಾರೆ.
ನಗರದ ಅರ್ಬನ್‌ ರೆರ್ಸಾಟ್ ನಲ್ಲಿ ಆಡ್ ಶಾಫ್‌ ಇ ರಿಟೇಲ್‌ ಲಿ. ವತಿಯಿಂದ ಆಯೋಜಿಸಿದ್ದ ರೈತ ಸಭೆಯಲ್ಲಿ ಮಾತನಾಡಿ, ಪ್ರಮೋಟಿಂಗ್‌, ಮಾರ್ಕೇಟಿಂಗ್‌ ಮತ್ತು ಫಾರ್ಮಿಂಗ್‌ ಎಂಬ ಮೂರು ಉದ್ದೇಶಗಳನ್ನು ಇಟ್ಟುಕೊಂಡು ನಮ್ಮ ಕಂಪನಿ ಹಗಲಿರುಳು, ದೇಶದ ಜನರಿಗೆ ವಿಷ ಮುಕ್ತ ಅಹಾರ ಮತ್ತು ರೈತರ ಲಾಭ ಹೆಚ್ಚಿಸುವ ಉದ್ದೇಶದಿಂದ ದುಡಿಯುತ್ತಿದೆ, ಇದುವರೆಗೂ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಕಂಪನಿಯ ಸದಸ್ಯತ್ವ ಪಡೆದಿದ್ದು, ಇದನ್ನು ಒಂದು ಕೋಟಿಗೆ ಹೆಚ್ಚಿಸುವುದು ಮತ್ತು ಒಂದು ಕೋಟಿ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ದೊರಕಿಸುವ ಗುರಿಯನ್ನು ಕಂಪನಿ ಹೊಂದಿದೆ ಎಂದರು.
ಕೃಷಿಯಲ್ಲಿ ಹೆಚ್ಚು ರಾಸಾಯನಿಕ ಬಳಕೆಯಾಗುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದರ ಜೊತೆಗೆ ವಿಷಯುಕ್ತ ಆಹಾರ ತಿಂದು ಜನರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿಷಮುಕ್ತ ಆಹಾರ ಮತ್ತು ಸಮೃದ್ಧ ರೈತ ಎಂಬ ಘೋಷ ವ್ಯಾಕದೊಂದಿಗೆ ಸಾವಯವ ಕೃಷಿಯನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತಿದೆ. ಬೆಳಗಾವಿ, ಹುಬ್ಬಳಿ, ಹಾಸನ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಈಗಾಗಲೇ ರೈತರ ಸಭೆ ನಡೆಸಿ ಸಾವಯವ ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ. ಕನಿಷ್ಠ ಒಂದು ಕೋಟಿ ರೈತರನ್ನು ಈ ಸಾವಯವ ಕೃಷಿಗೆ ಒಳಪಡಿಸುವುದು ಕಂಪನಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಪಟ್ಟು ದುಡಿಯುತ್ತಿದ್ದಾರೆ ಎಂದು ದಿನೇಶ್‌ ಪಾಂಡ್ಯ ತಿಳಿಸಿದರು.
ಆಡ್ ಶಾಫ್‌ ಇ ರಿಟೇಲ್‌ ಲಿ ನ ಕ್ರೌನ್‌ ಅಚೀವರ್‌ ಮೈಸೂರಿನ ಕೆ.ಎಂ.ಸುರೇಶ್‌ ಮಾತನಾಡಿ, ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುವುದಲ್ಲದೆ, ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿದೆ. ಇದರ ಪರಿಣಾಮ ಋತುಮಾನಗಳಲ್ಲಿ ವ್ಯತ್ಯಾಸವಾಗಿ ಪ್ರಾಕೃತಿಕ ವಿಕೋಪ ಹೆಚ್ಚಾಗಿವೆ. ಇದನ್ನು ತಡೆಯಲು ಇರುವ ಏಕೈಕ ಮಾರ್ಗವೆಂದರೆ ಸಾವಯವ ಕೃಷಿ, ಈ ನಿಟ್ಟಿನಲ್ಲಿ ರೈತರನ್ನು ಜಾಗೃತಿಗೊಳಿಸಿ, ಅವರನ್ನು ಸಾವಯವ ಕೃಷಿ ಮಾಡುವಂತೆ ಪ್ರೇರೆಪಿಸುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರೈತರ ಸಭೆ ಆಯೋಜಿಸಲಾಗುತ್ತಿದೆ, ತುಮಕೂರು ಜಿಲ್ಲೆಯಲ್ಲಿ ನಮ್ಮ ಕಂಪನಿಯ ಸಾವಯವ ಗೊಬ್ಬರಕ್ಕೆ ಬೇಡಿಕೆ ಇದೆ, ಇಡೀ ದೇಶದಲ್ಲಿಯೇ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾವಯವ ಗೊಬ್ಬರ ಉತ್ಪಾಧಿಸುವ ಘಟಕವನ್ನು ಇತ್ತೀಚೆಗೆ ತೆರೆಯಲಾಗಿದೆ ಎಂದರು.
ಆಡ್ ಶಾಫ್‌ ಇ ರಿಟೇಲ್‌ ಕಂಪನಿಯ ಪ್ಲಾಟಿನಂ ಆಚೀವರ್‌ ತ್ರಿಮೂರ್ತಿ ಮಾತನಾಡಿ, ತುಮಕೂರು ಜಿಲ್ಲೆಯ ಪ್ರತಿ ಮನೆ ಮನೆಗೂ ನಮ್ಮ ಕಂಪನಿಯ ಸಾವಯುವ, ರಾಸಾಯನಿಕ ಮುಕ್ತ ಗೊಬ್ಬರ ತಲುಪುವಂತೆ ಮಾಡುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ. ಸುಮಾರು 500ಕ್ಕೂ ಹೆಚ್ಚು ರೈತರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಂಪನಿಯ ವಿವಿಧ ಸಾಧಕರಾದ ಡಾ.ತಿಮ್ಮಾರೆಡ್ಡಿ, ಲೋಕೇಶ್‌, ಧನಂಜಯ್‌, ತ್ರಿಮೂರ್ತಿ, ರಮೇಶ್‌ಬಾಬು, ವೆಂಕಟೇಶ್‌, ಪರಮೇಶ್‌, ಶೇಖರ್‌, ಬಾಲಕೃಷ್ಣ, ಶಿವಕುಮಾರ್‌, ಶಾಂತಮ್ಮ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!