ದೇವಸ್ಥಾನದ ಹುಂಡಿ ಹಣ ಕಳವು

296

Get real time updates directly on you device, subscribe now.

ಹುಳಿಯಾರು: ಹುಳಿಯಾರು ಸಮೀಪದ ದಾಸೇಗೌಡನಹಟ್ಟಿಯ ಭೂತೇಶ್ವರಸ್ವಾಮಿ ದೇವಸ್ಥಾನದ ಹುಂಡಿ ಹಣ ಕಳುವಾಗಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
ದೇವಸ್ಥಾನದ ಬಾಗಿಲಿನ ಬೀಗ ಹೊಡೆದು ಒಳ ನುಗ್ಗಿದ ಕಳ್ಳಲು ಹುಂಡಿಯನ್ನು ದೇವಸ್ಥಾನದಿಂದ ನೂರು ಮೀಟರ್‌ ದೂರಕ್ಕೆ ಕೊಂಡೊಯ್ದು. ಅಲ್ಲಿ ಹುಂಡಿ ಹೊಡೆದು ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ.
ಪ್ರತಿ ವರ್ಷ ನವೆಂಬರ್‌ ಮಾಹೆಯಲ್ಲಿ ನಡೆಯುವ ದೇವಸ್ಥಾನದ ಧಾರ್ಮಿಕ ಕೈಂಕರ್ಯದ ಸಂದರ್ಭದಲ್ಲಿ ಹುಂಡಿ ಹಣ ಹೊಡೆಯುವುದು ವಾಡಿಕೆಯಾಗಿದೆ. ಈ ವರ್ಷದ ಇನ್ನೆರಡು ದಿನಗಳಲ್ಲಿ ಹುಂಡಿ ಹೊಡೆದು ಧಾರ್ಮಿಕ ಆಚರಣೆ ಮಾಡಲು ಸಮಿತಿ ನಿರ್ಧರಿಸಿತ್ತು.
ಅಷ್ಟರಲ್ಲಿ ಕಳ್ಳರು ಹುಂಡಿ ಹಣ ದೋಚಿದ್ದಾರೆ. ಪ್ರತಿ ವರ್ಷ ಇಪ್ಪತ್ತೈದು ಸಾವಿರ ರೂ.ಗೂ ಹೆಚ್ಚು ಹಣ ಸಂಗ್ರಹವಾಗುತ್ತಿದ್ದರಿಂದ ಈ ವರ್ಷವೂ ಅಷ್ಟೇ ಹಣ ಸಂಗ್ರಹವಾಗಿರಬಹುದೆಂದು ಊಹಿಸಲಾಗಿದೆ.
ಅಲ್ಲದೆ ಶುಕ್ರವಾರ ರಾತ್ರಿಯೇ ಗ್ರಾಮದ ಬೇವನಹಳ್ಳಿ ಅಮ್ಮನ ದೇವಸ್ಥಾನದ ಬೀಗ ಸಹ ಹೊಡೆದಿದ್ದಾರೆ. ಆದರೆ ದೇವಸ್ಥಾನದಲ್ಲಿ ಹುಂಡಿಯಿಲ್ಲದ ಕಾರಣ ಬರಿಗೈಯಲ್ಲಿ ಕಳ್ಳರು ಹಿಂದಿರುಗಿದ್ದಾರೆ. ಹುಳಿಯಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!