ಮನೆ ಗೋಡೆ ಕುಸಿದು ವ್ಯಕ್ತಿ ಸಾವು

191

Get real time updates directly on you device, subscribe now.

ಕುಣಿಗಲ್‌: ತಾಲೂಕಿನಲ್ಲಿ ಮಳೆಯ ಅವಾಂತರ ಮುಂದುವರೆದಿದ್ದು ಶುಕ್ರವಾರ ರಾತ್ರಿ ಮಳೆಗೆ ನೆಂದ ಮನೆಗೋಡೆ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟರೆ, ಪಟ್ಟಣದ ನ್ಯಾಯಾಲಯ ಕಟ್ಟಡ ಸೋರಿಕೆ ಹೆಚ್ಚಾದ ಕಾರಣ ವಕೀಲರು ಕಲಾಪದಿಂದ ಹೊರಗುಳಿದ ಘಟನೆ ನಡೆದಿದೆ.
ಹುಲಿಯೂರುದುರ್ಗ ಹೋಬಳಿಯ ಮೆಣಸಿನಕೆರೆ ದೊಡ್ಡಿಯ ನಾಗಣ್ಣ (55) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ನಾಗಣ್ಣ ಶುಕ್ರವಾರ ರಾತ್ರಿ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿದ್ದ ಹಸುಗಳಿಗೆ ಮೇವು ಹಾಕಿ ಬರುವಾಗ, ಕಳೆದ ಕೆಲವಾರು ದಿನಗಳಿಂದ ಸುರಿದಿದ್ದ ಮಳೆಗೆ ನೆಂದಿದ್ದ ಮನೆಯ ಮಣ್ಣಿನ ಗೋಡೆ ಕುಸಿದು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಹುಲಿಯೂರು ದುರ್ಗ ಪಿಎಸೈ ಚೇತನ್ ಕುಮಾರ್‌, ತಹಶೀಲ್ದಾರ್‌ ಮಹಾಬಲೇಶ್ವರ್‌ ತಡರಾತ್ರಿಯೇ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರದಿಂದ ಸೂಕ್ತ ನೆರವು ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ.
ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಪಟ್ಟಣದ ನ್ಯಾಯಾಲಯದ ಕಟ್ಟಡದ ಮೇಲ್ಚಾವಣಿಯಲ್ಲಿ ತೀವ್ರ ಸೋರಿಕೆ ಕಂಡುಬಂದಿದ್ದು ನ್ಯಾಯಾಲಯ ಕಲಾಪಗಳಿಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ವಕೀಲರು ಸಂಘದ ಅಧ್ಯಕ್ಷ ಹುಚ್ಚೇಗೌಡ ಅಧ್ಯಕ್ಷತೆಯಲ್ಲಿ ಸಭೆ ಸೇರಿ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಶನಿವಾರ ಕಲಾಪಗಳಿಂದ ಹೊಗುಳಿದರು. ಹೊಸಹಳ್ಳಿ ಗ್ರಾಮದಲ್ಲಿ ಶಂಕರ ಎಂಬುವರಿಗೆ ಸೇರಿದ ಮನೆಯೊಂದು ಮಳೆಯಿಂದ ಹಾನಿಯಾಗಿದ್ದು, ಕೆಲವಡೆಗಳಲ್ಲಿ ವಾಸವಿಲ್ಲದ ಹಳೆಯ ಕಪ್ಪು ಹೆಂಚಿನ ಮನೆಯ ಮಣ್ಣಿನ ಗೋಡೆಗಳು ನೆಲಕ್ಕುರುಳಿವೆ. ವಿವಿಧೆಡೆಗಳಲ್ಲಿ ರಾಗಿ ಬೆಳೆಯ ಹಾನಿ ಮುಂದುವರೆದಿದ್ದು ಕೆಲವೆಡೆಗಳಲ್ಲಿ ಮಳೆಗೆ ತೆನೆಯಲ್ಲೆ ಬೂಜು ಬಂದಿದ್ದು ರೈತರು ಕಂಗಾಲಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!