ತುಮಕೂರು: ಸತತವಾಗಿ ಸುರಿದ ಮಳೆಯಿಂದಾಗಿ ನಗರದ ಅಮಾನಿಕೆರೆಯು ಹಲವು ದಶಕಗಳ ನಂತರ ತುಂಬಿ, ಕೋಡಿ ಹರಿದ ಕಾರಣ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬಾಗಿನ ಅರ್ಪಣೆ ಮಾಡಿದರು.
ನಂತರ ಶಾಸಕರು ಮಾತನಾಡಿ, ಬಾಗಿನ ಅರ್ಪಣೆ ಮಾಡುತ್ತಿರುವುದು ಸಂತಸದ ವಿಷಯ, ಇನ್ನೊಂದೆಡೆ ರಾಜಗಾಲುವೆ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಮಳೆಯಿಂದಾಗಿ ಹಾನಿ ಉಂಟಾಗಿದೆ, ಹಾಗಾಗಿ ರಾಜಗಾಲುವೆ ಅಕ್ಕಪಕ್ಕದಲ್ಲಿರುವ ಮನೆಯವರು ಖಾಲಿ ಮಾಡಬೇಕೆಂದು ಹಾಗೂ ಮಳೆ ಕಮ್ಮಿಯಾಗುವವರೆಗೂ ಸಾರ್ವಜನಿಕರು ಹೊರಗೆ ಹೋಗದೆ ಮನೆಯಲ್ಲಿರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮಹಾನಗರ ಪಾಲಿಕೆಯ ಸದಸ್ಯರಾದ ನಳಿನ ಇಂದ್ರಕುಮಾರ್, ಮಂಜುನಾಥ್, ಲಕ್ಷ್ಮೀನರಸಿಂಹರಾಜು, ದೀಪಶ್ರೀ ಮಹೇಶ್‌ಬಾಬು, ಗಿರಿಜಾ ಧನಿಯಾಕುಮಾರ್, ಮಲ್ಲಿಕಾರ್ಜುನಯ್ಯ, ವಿಷ್ಣುವರ್ಧನ, ಪಾಲಿಕೆ ನಾಮಿನಿ ಸದಸ್ಯರಾದ ಶಿವರಾಜು, ನರಸಿಂಹಸ್ವಾಮಿ, ಮೋಹನ್, ತ್ಯಾಗರಾಜಸ್ವಾಮಿ, ಟೂಡಾ ಸದಸ್ಯರಾದ ಎಂ.ಎನ್.ವೀಣಾ ಶಿವಕುಮಾರ್, ಜಗದೀಶ್, ಪ್ರತಾಪ್, ಆಶ್ರಯ ಸಮಿತಿ ಸದಸ್ಯರಾದ ಸಿದ್ಧಗಂಗಯ್ಯ, ಮಾಜಿ ನಗರಸಭಾ ಸದಸ್ಯ ಶ್ರೀನಿವಾಸ್ ಅಣೆತೋಟ ಹಾಜರಿದ್ದರು.
ತುಮಕೂರಿನ ಅಮಾನಿಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ
Get real time updates directly on you device, subscribe now.
Comments are closed.