ಬೆಳೆ ಕಳೆಡುಕೊಂಡ ರೈತರಿಗೆ ಪರಿಹಾರ ಕೊಡಿ: ರಂಗನಾಥ್

ಮಳೆಯ ಆರ್ಭಟಕ್ಕೆ ರಾಗಿ ಬೆಳೆ ಹಾನಿ

266

Get real time updates directly on you device, subscribe now.

ಕುಣಿಗಲ್‌: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಕೆ ರಾಜ್ಯಸರ್ಕಾರ ನೀಡುತ್ತಿರುವ ಪರಿಹಾರ ಧನ ಅತ್ಯಲ್ಪವಾಗಿದೆ. ಸಮರ್ಪಕ ಪರಿಹಾರ ಧನ ನೀಡುವಂತೆ ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಇತ್ತೀಚೆಗೆ ಕಳೆದ ಕೆಲದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಕಸಬಾ ಹೋಬಳಿಯ ಭೈರನಾಯಕನಹಳ್ಳಿ ಇತರೆ ಸುತ್ತಮುತ್ತಲ ಗ್ರಾಮಗಳಲ್ಲಿ ರಾಗಿಬೆಳೆ ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿ ಧೈರ್ಯ ತುಂಬಿದ ಅವರು, ಒಟ್ಟಾರೆ ನಷ್ಟವಾಗಿರುವ ಬೆಳೆಯ ಬಗ್ಗೆ ಕೃಷಿ ಇಲಾಖೆಯ ಫೂಟ್‌ ತಂತ್ರಜ್ಞಾನದಲ್ಲಿ ನೋಂದಣಿ ಮಾಡಿಸಿ, ರಾಜ್ಯ ಸರ್ಕಾರ ಪ್ರತಿ ಎಕರೆ ರಾಗಿ ಬೆಳೆಗೆ ನೀಡುವ ಪರಿಹಾರ ಧನ 6200 ರೂ. ಆಗಿದೆ, ಇದು ಅತ್ಯಲ್ಪವಾಗಿದ್ದು ಇನ್ನು ಹೆಚ್ಚಿನ ಹಣ ನೀಡುವ ಮೂಲಕ ಅನ್ನದಾತನ ನೆರವಿಗೆ ನಿಲ್ಲಬೇಕು, ತಾಲೂಕಿನಾದ್ಯಂತ ಒಟ್ಟಾರೆ 50 ಸಾವಿರ ಹೆಕ್ಟೇರ್ ನಲ್ಲಿ ರಾಗಿ ಬೆಳೆ ಇಡಲಾಗಿದ್ದು, ಈ ಪೈಕಿ ಶೇ.50 ರಷ್ಟು ಬೆಳೆ ಅತಿವೃಷ್ಟಿಗೆ ಹಾಳಾಗಿದೆ. ರೈತರು ಸೂಕ್ತ ದಾಖಲೆಗಳೊಂದಿಗೆ ಬೆಳೆಹಾನಿ ಅರ್ಜಿ ಸಲ್ಲಿಸಬೇಕು, ಯಾವುದೇ ಇಲಾಖೆಯ ಅಧಿಕಾರಿಗಳು ಬೆಳೆಹಾನಿಯಿಂದ ಅತಂತ್ರಕ್ಕೊಳಗಾಗಿರುವ ರೈತರಿಗೆ ಪೂಕರ ನೆರವು ನೀಡಬೇಕು, ಮುಂದಿನ ದಿನಗಳಲ್ಲಿ ತಾಲೂಕಿನ ವಿವಿಧ ಹೋಬಳಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದರು.
ಒಂದುವಾರದಿಂದ ಸುರಿದ ಮಳೆಗೆ ಭೈರನಾಯಕನಹಳ್ಳಿ ರೈತರೊಬ್ಬರ ಒಂದು ಎಕರೆ ರಾಗಿಬೆಳೆ ನೀರು ನಿಂತು ಪೂರ್ಣ ಹಾಳಾಗಿದ್ದನ್ನು ಕಂಡು ಶಾಸಕರು ಮರುಕಪಟ್ಟು ಸರ್ಕಾರದಿಂದ ಸಾಧ್ಯವಿರುವ ನೆರವು ಕೊಡಿಸುವ ಭರವಸೆ ನೀಡಿದರು. ರಾಜಸ್ವ ನಿರೀಕ್ಷಕ ಮಲ್ಲಿಕಾರ್ಜುನ್‌ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!