ಎಂ ಎಲ್ ಸಿ ಚುನಾವಣೆಯಲ್ಲಿ ಬಿಜೆಪಿ 14 ಕ್ಷೇತ್ರಗಳಲ್ಲಿ ಗೆಲ್ಲಲಿದೆ: ಮಾಧುಸ್ವಾಮಿ

ಅಭಿವೃದ್ಧಿ ಕಾರ್ಯಗಳಿಗಾಗಿ ಬಿಜೆಪಿಗೆ ಮತ ನೀಡಿ

338

Get real time updates directly on you device, subscribe now.

ತುರುವೇಕೆರೆ: ವಿಧಾನಪರಿಷತ್‌ ಚುನಾವಣೆ ಅತ್ಯಂತ ಪ್ರಮುಖವಾಗಿದ್ದು, ತುಮಕೂರು ಸೇರಿದಂತೆ 14 ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್‌ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ಗುರುಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದ 20 ಕ್ಷೇತ್ರದಲ್ಲಿ ವಿಧಾನಪರಿಷತ್‌ ಚುನಾವಣಾ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಸದಸ್ಯ 14 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ವಿಧಾನಪರಿಷತ್ ನಲ್ಲಿ ಸರಳ ಬಹುಮತ ಹೊಂದುವ ಗುರಿಯನ್ನು ಪಕ್ಷ ಹೊಂದಿದೆ, ತುಮಕೂರು ಜಿಲ್ಲೆಯ 5 ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರಿದ್ದು ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ, ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಸರಕಾರವನ್ನು ಬೆಂಬಲಿಸುವ ನಿಟ್ಟಿನಲ್ಲಿ ನಮ್ಮ ಪಕ್ಷದ ವಿಧಾನಪರಿಷತ್‌ ಅಭ್ಯರ್ಥಿಯನ್ನು ಪಕ್ಷ ಭೇದ ಮರೆತು ಗ್ರಾಪಂ ಸದಸ್ಯರು ಮತ ಹಾಕುವಂತೆ ಮನವಿ ಮಾಡಿದರು.
ಶಾಸಕ ಮಸಾಲ ಜಯರಾಮ್‌ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸುವಲ್ಲಿ ಸರಕಾರವು ಸ್ಪಂದಿಸಿದೆ. ಶೀಘ್ರದಲ್ಲಿ ಕ್ಷೇತ್ರದ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನವನ್ನು ಸರಕಾರ ನೀಡಲಿದೆ, ದಬ್ಬೇಘಟ್ಟ ಹೋಬಳಿಯ ಅಭಿವೃದ್ಧಿಗೆ 70 ಕೋಟಿ ಅನುದಾನ ಮೀಸಲಿರಿಸಲಾಗಿದೆ, ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನಮ್ಮ ಪಕ್ಷದಿಂದ ವಿಧಾನ ಪರಿಷತ್‌ ಅಭ್ಯರ್ಥಿಯಾಗಿರುವ ಲೋಕೇಶ್ ಗೌಡರಿಗೆ ಗ್ರಾಪಂ ಸದಸ್ಯರು ಮತ ನೀಡಬೇಕು, ಕ್ಷೇತ್ರ ವ್ಯಾಪ್ತಿಯ 525 ಮತಗಳ ಪೈಕಿ 400 ಕ್ಕೂ ಹೆಚ್ಚು ಮತಗಳ ಬಿಜೆಪಿ ಅಭ್ಯರ್ಥಿ ಪರ ಚಲಾವಣೆಯಾಗಲಿವೆ ಎಂದರು.
ಶಾಸಕ ಡಾ.ರಾಜೇಶ್ ಗೌಡ ಮಾತನಾಡಿ ಅಭಿವೃದ್ಧಿ ಪರ ಚಿಂತನೆಯುಳ್ಳ ಸರಕಾರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಗ್ರಾಪಂ ಸದಸ್ಯರು ಅತ್ಯಂತ ಜಾಗರೂಕತೆಯಿಂದ ಮತದಾನ ಮಾಡಬೇಕಿದೆ, ನಮ್ಮ ಜಿಲ್ಲೆಯವೇ ಆದ ಲೋಕೇಶ್ ಗೌಡರಿಗೆ ಗ್ರಾಪಂ ಸದಸ್ಯರು ಮತ ಹಾಕುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಿ ಎಂದರು.
ವಿಧಾನಪರಿಷತ್‌ ಅಭ್ಯರ್ಥಿ ಲೋಕೇಶ್ ಗೌಡ ಮಾತನಾಡಿ, ನಾನು ಸಹ ಇದೇ ಜಿಲ್ಲೆಯ ಕೊರಟಗೆರೆಯವನು, ಪಕ್ಷವು ನನ್ನ ಮೇಲೆ ಭರವಸೆ ಇರಿಸಿ ವಿಧಾನಪರಿಷತ್‌ ಅಭ್ಯರ್ಥಿಯನ್ನಾಗಿಸಿದೆ, ಅಭಿವೃದ್ಧಿ ಪರ ಚಿಂತನೆಯುಳ್ಳ ನಮ್ಮ ಸರಕಾರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಗ್ರಾಪಂ ಸದಸ್ಯರು ನನ್ನನ್ನು ಆಶೀರ್ವದಿಸಿ, ತುಮಕೂರಿನಲ್ಲಿಯೇ ವಾಸ್ತವ್ಯ ಹೂಡಿ ನಿಮ್ಮ ಮನೆ ಮಗನಾಗಿ ನಿಮ್ಮ ಋಣ ತೀರಿಸುವೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಉಪಾಧ್ಯಕ್ಷ ನಾಗೇಶ್‌, ಪಪಂ ಅಧ್ಯಕ್ಷ ಅಂಜನ್ ಕುಮಾರ್‌, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್‌, ಚುನಾವಣಾ ಉಸ್ತುವಾರಿ ಚಂದ್ರಶೇಖರ್‌, ನಿಕಟಪೂರ್ವ ಮಂಡಲಾಧ್ಯಕ್ಷ ದುಂಡರೇಣುಕಯ್ಯ, ಪೀಕಾರ್ಡ್‌ ಬ್ಯಾಂಕ್‌ ಸದಸ್ಯರಾದ ವಿ.ಬಿ.ಸುರೇಶ್‌, ವಿ.ಟಿ.ವೆಂಕಟರಾಮ್‌ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!