ಮದಲೂರು ಕೆರೆ ಶೀಘ್ರ ತುಂಬಲಿದೆ: ಚಿದಾನಂದ್

207

Get real time updates directly on you device, subscribe now.

ಶಿರಾ: ಮದಲೂರುಕೆರೆ ಶಿರಾ ತಾಲ್ಲೂಕಿನ ಜನರ ಜೀವನಾಡಿ, ವರುಣನ ಕೃಪೆ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ಈ ಬಾರಿ ಮದಲೂರು ಕೆರೆ ತುಂಬುವ ಹಂತದಲ್ಲಿದೆ ಎಂದು ವಿಧಾನಪರಿಷತ್‌ ಸದಸ್ಯಚಿದಾನಂದ ಎಂ. ಗೌಡ ಹರ್ಷ ವ್ಯಕ್ತಪಡಿಸಿದರು.
ಮದಲೂರು ಕೆರೆಗೆ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿ, ತಾಲ್ಲೂಕಿನ ರಾಜಕೀಯ ಮದಲೂರಿನ ಕೆರೆಯ ಮೇಲೆ ನಿಂತಿದ್ದು, ಇಲ್ಲಿ ವರೆಗೆ ನಮ್ಮ ಪಕ್ಷವೂ ಸೇರಿಎಲ್ಲರೂ ಈ ವಿಚಾರ ಬಳಸಿಕೊಂಡು ರಾಜಕೀಯ ನಡೆಸಿದ್ದೇವೆ, ಹಿಂದೆ ಇದ್ದ ರಾಜಕಾರಣಿಗಳಿಗೂ ಮದಲೂರು ಕೆರೆಗೆ ನೀರು ಹರಿಸಬೇಕು ಎನ್ನುವ ಅಭಿಲಾಶೆ ಇತ್ತು, ಆದರೆ ಈಗ ಅದಕ್ಕೆ ಕಾಲ ಕೂಡಿ ಬಂದಿದೆ, ಉಪ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರವರು ಲಕ್ಷಾಂತರ ಜನರ ಸಮ್ಮುಖದಲ್ಲಿ ಮದಲೂರು ಕೆರೆಗೆ ನೀರು ಹರಿಸಿ ತುಂಬಿಸುವ ವಾಗ್ದಾನ ಮಾಡಿದ್ದರು, ಅದರಂತೆ ಚುನಾವಣೆ ನಂತರ ಹದಿನೈದು ದಿನಗಳಲ್ಲಿ ನೀರು ಹರಿಸಿದ್ದೆವು, ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಉತ್ಸಾಹ ತೋರಿಸಿದ್ದಾರೆ ಎಂದರು.
ಇಲ್ಲಿಗೆ ನೀರು ಹರಿಸುವ ವಿಚಾರದಲ್ಲಿ ವಿರೋಧ ಪಕ್ಷಗಳು ಇಲ್ಲಿಗೆ ನೀರು ಹರಿಸಿದರೆ ಬಿಜೆಪಿಗೆ ಹೆಸರು ಬರುತ್ತದೆ ಎನ್ನುವ ಭಯದಲ್ಲಿ ಮೇಲೆ ನೀರು ಬೇಕು ಎಂದರೂ ಅಂತರಂಗದಲ್ಲಿ ಅವರಿಗೆ ಇಲ್ಲಿಗೆ ನೀರು ಹರಿಯುವುದು ಇಷ್ಟವಿರಲಿಲ್ಲ, ಆದರೆ ವರುಣನ ಕೃಪೆಯಿಂದ ಮತ್ತು ರಾಜ್ಯ ಸರ್ಕಾರದ ಇಚ್ಛಾಶಕ್ತಿಯಿಂದ ಈ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸಲಾಗಿದೆ. ಇನ್ನು ಒಂದೂವರೆ ಅಡಿ ನೀರು ಬಂದರೆ ಮದಲೂರು ಕೆರೆಯೂ ಕೋಡಿ ಮೀರಿ ಹರಿಯಲಿದೆ, ಕೆರೆ ಕೋಡಿ ಹರಿಯುವುದನ್ನು ನಿರೀಕ್ಷಿಸಿ ಜನರು ಸಂಭ್ರಮಿಸುತ್ತಿದ್ದಾರೆ ಎಂದರು.
ಮುಖಂಡ ಸುಧಾಕರಗೌಡ, ಈರಣ್ಣ ಪಟೇಲ್‌, ಸಂತೇಪೇಟೆ ನಟರಾಜು, ಮುದ್ದರಂಗನಹಳ್ಳಿ ಶಿವಣ್ಣ, ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ ರಂಗನಾಥ್‌ ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!