ತುಮಕೂರು: ಸಂಕಷ್ಟ ಕಾಲದಲ್ಲಿ ದೇವೇಗೌಡರನ್ನು ತುಮಕೂರು ಕೈ ಹಿಡಿಯುತ್ತಿತ್ತು, ಹಲವರ ಒತ್ತಡಕ್ಕೆ ಮಣಿದು ಲೋಕಸಭೆ ಚುನಾವಣೆಗೆ ನಿಂತರು, ಈ ಜಿಲ್ಲೆಯಲ್ಲಿ ದೇವೇಗೌಡರು ಸೋತಿದ್ದು ಕನಸಿನಲ್ಲೂ ಊಹೆ ಮಾಡಲಾಗುತ್ತಿಲ್ಲ, ದೇವೇಗೌಡ ಸೋಲಿಗೆ ಯಾರು ಕಾರಣ ಅಂತ ನಿಮಗೆ ಗೊತ್ತು, ಎಸ್‌ಟಿ ಸಮುದಾಯದ ರಿಸರ್ವೇಷನ್ ವಿಚಾರದಲ್ಲಿ ದೇವೇಗೌಡರು ಕೊಟ್ಟ ಕೊಡುಗೆ ಇದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ನಡೆದ ಜೆಡಿಎಸ್ ನ ಜನತಾ ಸಂಘಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಳ್ಳಾವಿ ವಿಧಾನ ಸಭಾ ಕ್ಷೇತ್ರದಲ್ಲಿ ಅವರು ನಮ್ಮ ಪಕ್ಷದ ಅಭ್ಯರ್ಥಿ ಇದ್ದರು, ದೇವೇಗೌಡರು ಜ್ವರ ಬಂದ ಸಂದರ್ಭದಲ್ಲೂ ಆ ಅಭ್ಯರ್ಥಿ ಪರ ಪ್ರಚಾರ ಮಾಡಿದ್ರು, ಅವರಿಗೆ ಮತ ನೀಡಿದ್ರೆ ನನಗೆ ಮತ ನೀಡಿದ್ದಂತೆ ಅಂತ ಕೇಳಿಕೊಂಡರು, ಅವರು 1 ಸಾವಿರ ಮತಗಳ ಅಂತರದಿಂದ ಗೆದ್ದರು, ಈ ವ್ಯಕ್ತಿ ಈಗ ಸಣ್ಣ ಮಾತನಾಡುತ್ತಿದ್ದಾರೆ, ನಾವು ಏನು ಮಾಡಿದ್ವಿ, ಏನು ಅನ್ಯಾಯ ಮಾಡಿದ್ವಿ ಎಂದು ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಹೆಸರು ಪ್ರಸ್ತಾಪಿಸದೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಡಿಸಿಸಿ ಬ್ಯಾಂಕ್ ನಿಂದ 1 ಲಕ್ಷ ಸಾಲ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ, ಸಾಲ ತೀರಿಸುವವರು ಯಾರು, ನಾವು ಅಧಿಕಾರಕ್ಕೆ ಬಂದು ಸಾಲ ತೀರಿಸಬೇಕು, ಒಂದು ವರ್ಷದ ಅವಧಿಯಲ್ಲಿ ಸಾಲ ತೀರಿಸದಿದ್ದರೆ ಬಡ್ಡಿ ಹಾಕುತ್ತಾರೆ, ಯಾರಪ್ಪನ ಮನೆ ದುಡ್ಡು ಅದು, ಅವರ ಮನೆಯಿಂದ ದುಡ್ಡು ತರುತ್ತಾರಾ, ನಮಗೇನಾದ್ರೂ ಅಲ್ವಸಲ್ಪ ಅವಕಾಶ ಸಿಕ್ಕರೆ ನಾವೇ ಸಾಲ ತೀರಿಸಬೇಕು, ಜನರು ಈ ವಾಸ್ತಾವಾಂಶ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ದೇವೇಗೌಡರ ಸೋಲಿನ ನೋವು ದೂರ ಮಾಡಲು ಕೆಲಸ ಮಾಡಬೇಕು, ನಾಯಕ ಸಮಾಜದ ಪಿತಾಮಹಾ ಜೆಡಿಎಸ್ ಪಕ್ಷ ಮುಗಿಸುತ್ತೇನೆ ಎಂದು ಹೇಳಿಕೊಂಡು ಓಡುತ್ತಿದ್ದಾರೆ, ಇಂಥವರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ತಿಳಿಸಿ, ನಿಮ್ಮ ಸಮುದಾಯದ ಮಠದ ಗುರುಗಳ ಕುಟುಂಬಕ್ಕೆ ಆಸರೆ ಯಾಕೆ ನೀಡಲಿಲ್ಲ, ಆಗ ಡಿಸಿಸಿ ಬ್ಯಾಂಕ್ ಇರಲಿಲ್ವಾ ಎಂದು ರಾಜಣ್ಣ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ನವರು ಕುತಂತ್ರ ರಾಜಕಾರಣ ಮಾಡಿದ್ದಾರೆ, ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಇಲ್ಲದಿದ್ದರೆ ಲೋಕಸಭೆಯಲ್ಲಿ 5 ಸ್ಥಾನದಲ್ಲಿ ಗೆಲ್ಲುತ್ತಿದ್ದೆವು, ಈ ಪಕ್ಷಕ್ಕೆ ಭವಿಷ್ಯ ಇಲ್ಲ ಅನ್ನೋ ಮಾತು ಸೃಷ್ಟಿಸಿದ್ದಾರೆ, ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ, ಈ ಚುನಾವಣೆ ಜೆಡಿಎಸ್‌ಗೆ ಪ್ರಮುಖ ಚುನಾವಣೆ, 7 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದೇವೆ, ಈ ಚುನಾವಣೆಯನ್ನು ಸವಾಲಾಗಿ ಸ್ವಿಕರಿಸಿದ್ದೇನೆ ಎಂದರು.
ಉಪ ಚುನಾವಣೆಯಲ್ಲಿ ಸೋತಿದ್ದೇವೆ, ಉಪಚುನಾವಣೆ ಹೇಗೆ ನಡೆಯುತ್ತದೆ ಅಂತ ನಿಮಗೆ ಗೊತ್ತು, 6 ವಿಧಾನ ಪರಿಷತ್ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿದೆ, ಅಧಿಕಾರ ಹಿಡಿಯಬೇಕೆಂದು ಅಲ್ಲ, ಪಕ್ಷದ ಸಂಘಟನೆ ದೃಷ್ಟಿಯಿಂದ 5 ಪಂಚ ರತ್ನ ಕಾರ್ಯಕ್ರಮ ರೂಪಿಸಿದ್ದೇವೆ, ರೈತರಿಗೆ ಆರ್ಥಿಕ ಶಕ್ತಿ ತುಂಬುವ ಚಿಂತನೆ ಮಾಡಿದ್ದೇನೆ ಎಂದು ಹೇಳಿದರು.
ಸರ್ಕಾರಕ್ಕೆ ಮೂರು ದಿನದಿಂದ ಹೇಳುತ್ತಿದ್ದೇನೆ, ಜನಸ್ವರಾಜ್ಯ ಯಾತ್ರೆಯಲ್ಲಿ ಶಂಕ ಬಾರಿಕೊಂಡು ಹೋದರೆ ರೈತರ ಬದುಕು ಕಟ್ಟಲು ಸಾಧ್ಯವುಲ್ಲ, ರೈತರಿಗೆ ತಕ್ಷಣ ಪರಿಹಾರ ನೀಡುವ ಕ್ರಮ ಕೈಗೊಳ್ಳಿ ಎಂದಿದ್ದೇನೆ, ಸರ್ಕಾರಕ್ಕೆ ಮನಸು ಬಂದಿಲ್ಲ, ಡಿಸಿಯಿಂದ ವರದಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ, ತೊಗರಿ ಬೆಳೆದ ರೈತ ಮಳೆಯಿಂದ ನಷ್ಟವಾಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಸರ್ಕಾರಕ್ಕೆ ಮಾತೃಹೃದಯವಿದ್ದರೆ ರೈತರಿಗೆ ಧೈರ್ಯ ಹೇಳಬೇಕಿತ್ತು,
ಆತ್ಮಹತ್ಯೆ ಮಾಡಿಕೊಳ್ಳಬೇಡಿ ಅಂತ ಹೇಳಬೇಕಿತ್ತು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಜೆಡಿಎಸ್ ಪಕ್ಷ ಸಂಕಷ್ಟ ಎದುರಿಸುತ್ತಿದೆ, 2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬರಲಿಲ್ಲ,
ತುಮಕೂರು ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು ಈ ಭಾಗದಲ್ಲಿ ನಮ್ಮ ಹೋರಾಟ ಇದ್ದಿದ್ದು ಕಾಂಗ್ರೆಸ್ ವಿರುದ್ಧವಾಗಿತ್ತು, ಕಾಂಗ್ರೆಸ್ ಮುಖಂಡರು ದೇವೇಗೌಡರ ಬಳಿ ಬಂದು ಮೈತ್ರಿ ಸರ್ಕಾರ ಮಾಡುವ ಪ್ರಸ್ತಾವ ಸಲ್ಲಿಸಿದ್ರು ಎಂದು ಹೇಳಿದರು.
ದೇವೇಗೌಡರಿಗೆ ಶಕ್ತಿ ತುಂಬಿದವರು ನೀವು, ಕಾಂಗ್ರೆಸ್ ಜೊತೆಗೆ ಹೋಗಬಾರದು ಎಂದು ಜೆಪಿ ಭವನದಲ್ಲಿ ಕಣ್ಣೀರಿಟ್ಟಿದ್ದೆ, ಒಂದು ತಿಂಗಳು ಸಿಎಂ ಮುಳ್ಳಿನ ಕುರ್ಚಿಯ ನೋವು ಅನುಭವಿಸಿದ್ದೇವೆ, ರೈತರ ಸಾಲ ಮನ್ನ ಮಾಡಲು ಕಾಂಗ್ರೆಸ್ ಜೊತೆಗೆ ಕೈ ಜೋಡಿಸ್ದೆ, ರೈತರ ಸಾಲ ಮಾಡಲು ಕಾಂಗ್ರೆಸ್ ನವರ ಸಹಕಾರ ಇಲ್ಲದಿದ್ದರು 24 ಸಾವಿರ ಕೋಟಿ ಹಣ ಹೊಂದಿಸ್ದೆ ಎಂದರು.
ಬಿಜೆಪಿಯವರು ಮಂಡ್ಯದಲ್ಲಿ ಹೇಳ್ತಾರೆ ಜೆಡಿಎಸ್ ನವರು ಕೃಷಿ, ಸಹಕಾರ ಇಲಾಖೆ ಕೇಳಲಿಲ್ಲ, ಹಣಕಾಸು ಇಲಾಖೆ ಕೇಳಿದ್ರು ಅಂತ, ರೈತರಿಗಾಗಿ ಆರ್ಥಿಕ ಇಲಾಖೆ ಕೇಳಿದೆ, ದುಡ್ಡು ಹೊಡೆಯಲು ಅಲ್ಲ, ರೈತರ ಸಾಲ ಮನ್ನ ಮಾಡಿದಾಗ ನನಗೆ ಕಮಿಷನ್ ಬಂತಾ, ದೇವೇಗೌಡರು ರೈತರು ರೈತರು ಅಂತ ಜೀವನ ಸವೆಸಿದ್ದಾರೆ, ತುಮಕೂರಿನ ನೀರಾವರಿ ವಿಚಾರದಲ್ಲೂ ರಾಜಕೀಯ ಮಾಡಿದ್ರು, ತುಮಕೂರು ಜಿಲ್ಲೆಯ ನೀರಿನ ವಿಚಾರದಲ್ಲಿ ನಮ್ಮ ಕುಟುಂಬ ವಿರೋಧ ಮಾಡಿಲ್ಲ, ದೇವೇಗೌಡರು ಹೋರಾಟ ಮಾಡಿ ಹೇಮಾವತಿ ಕಟ್ಟದಿದ್ದರೆ ಇವತ್ತು ಏನು ಹೋರಾಟ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಎಂ.ಎಲ್.ಸಿ ಚುನಾವಣೆ ಅಭ್ಯರ್ಥಿ ಅನಿಲ್ ಕುಮಾರ್ ಮಾತನಾಡಿ, ನನ್ನ ರಾಜಕೀಯ ಆರಂಭ ಮತ್ತು ಅಂತ್ಯ ಜೆಡಿಎಸ್ ನಲ್ಲೇ ಆಗುತ್ತೆ, ಯಾವುದೇ ಕಾರಣಕ್ಕೂ ನಾನು ಜೆಡಿಎಸ್ ಪಕ್ಷ ಬಿಟ್ಟು ಹೋಗಲ್ಲ, ನಾನು ಪಕ್ಷಕ್ಕೆ ದ್ರೋಹ ಬಗೆಯಲ್ಲ ಎಂದು ಹೇಳಿದರು.
ತುಮಕುರು ಗ್ರಾಮಾಂತರ ಶಾಸಕ ಗೌರಿಶಂಕರ್, ಮಧುಗಿರಿ ಶಾಸಕ ವೀರಭದ್ರಯ್ಯ, ಎಂ.ಎಲ್.ಸಿ ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸುರೇಶ್‌ಬಾಬು, ಸುಧಾಕರ್ ಲಾಲ್, ನಾಗರಾಜಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ, ಮುಖಂಡರಾದ ಬೆಳಗುಂಬ ವೆಂಕಟೇಶ್, ಲೀಲಾವತಿ, ಜಯಶ್ರೀ ಇನ್ನಿತರರು ಹಾಜರಿದ್ದರು.
ಎಂ ಎಲ್ ಸಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿ: ಕುಮಾರಸ್ವಾಮಿ
ದೇವೇಗೌಡರನ್ನು ಸೋಲಿಸಿದವರಿಗೆ ಪಾಠ ಕಲಿಸಿ
Get real time updates directly on you device, subscribe now.
Next Post
Comments are closed.