ತುಮಕೂರು: ಮಳೆಯಿಂದಾಗಿ ಭೀಮಸಂದ್ರ ಸೇರಿದಂತೆ ನಗರದ ಹಲವು ಕೆರೆಗಳಿಗೆ ಯುಜಿಡಿ ನೀರು ಸೇರಿ ಮಾಲಿನ್ಯವಾಗುತ್ತಿದ್ದು, ಸ್ಮಾರ್ಟ್ ಸಿಟಿ, ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದಲ್ಲಿ 18 ಎಂಜನಿಯರ್ ಗಳು ಕೆಲಸ ಮಾಡುತ್ತಿದ್ದಾರೆ, ಆದರೂ ನಗರದಲ್ಲಿ ಸಮಸ್ಯೆ ತಪ್ಪಿಲ್ಲ, ಅಂಕಿ ಸಂಖ್ಯೆ ಬರೆದುಕೊಂಡು ಕುಳಿತು ಕೊಳ್ಳುತ್ತಿದ್ದಾರೆ, ಹೀಗೆ ಆದರೆ ಸ್ಮಾರ್ಟ್‌ಸಿಟಿ ಕೊಳಕು ಸಿಟಿ ಆಗಲಿದೆ ಎಂದು ಆಕೋಶ ವ್ಯಕ್ತಪಡಿಸಿದರು.
ಸ್ಮಾರ್ಟ್ ಸಿಟಿ ಅನುದಾನವನ್ನು ಬೇರೆ ಬೇರೆ ಕಡೆ ಬಳಸಿಕೊಳ್ಳಲಾಗಿದೆ, ನಗರದಲ್ಲಿ ಮನೆಗಳು ಕುಸಿತಗೊಂಡಿವೆ, ಯುಜಿಡಿ ನೀರು ಮನೆಗಳಿಗೆ ಹೋಗುತ್ತಿವೆ, ಸ್ಮಾರ್ಟ್ ಸಿಟಿ ಕರ್ಮಕಾಂಡದಿಂದ ಜನರು ಸಂಕಷ್ಟದಲ್ಲಿದ್ದಾರೆ, ಮಳೆಯಿಂದ ಸಾವಿರಾರು ಎಕರೆ ಬೆಳೆನಷ್ಟವಾಗಿದೆ ಅಧಿಕಾರಿಗಳು ಸಮೀಕ್ಷೆ ಮಾಡಿ ಸಮರ್ಪಕ ಪರಿಹಾರ ವಿತರಿಸುವಂತೆ ಆಗ್ರಹಿಸಿದರು.
ಸರ್ಕಾರ ನೀಡಿರುವ ಬೆಳೆ ನಷ್ಟ ಪರಿಹಾರ ಕಡಿಮೆ ಇದ್ದು, ಪರಿಹಾರವನ್ನು ಹೆಚ್ಚಿಸುವಂತೆ ಒತ್ತಾಯಿಸಿದ ಅವರು, ರೈತರು ಖರ್ಚು ಮಾಡಿರುವಷ್ಟು ಪರಿಹಾರ ನೀಡದೇ ಹೋದರೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ವರದಿ ತಯಾರಿಸಿ ಪರಿಹಾರಕ್ಕೆ ಮನವಿ ಸಲ್ಲಿಸಬೇಕೆಂದರು.
ಜಿಲ್ಲೆಯಲ್ಲಿ ಮನೆ ಕುಸಿತಗೊಂಡಿವೆ, ಬೆಳೆ ಹಾನಿಯಾದರೂ ಯಾವ ರಾಜಕಾರಣಿಯೂ ಸ್ಥಳ ಪರಿಶೀಲನೆ ಮಾಡಲಿಲ್ಲ, ಡಾ.ಜಿ.ಪರಮೇಶ್ವರ್ ಅವರು ಮಾತ್ರ ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಜನಪ್ರತಿನಿಧಿಗಳು ಹೀಗೆ ಆದರೆ ಹೇಗೆ? ಸಂಕಷ್ಟದಲ್ಲಿ ಇರುವವರಿಗೆ ನೆರವು ನೀಡದೇ ಇದ್ದರೆ ಅಧಿಕಾರ ಏಕೆ ಬೇಕು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಪಿ.ಮಹೇಶ್, ಜಯಸಿಂಹ ಸೇರಿದಂತೆ ಇತರರಿದ್ದರು.
ಸ್ಮಾರ್ಟ್ ಸಿಟಿ ಕಾಮಗಾರಿ ಅಧ್ವಾನಕ್ಕೆ ಸೊಗಡು ಕಿಡಿ
Get real time updates directly on you device, subscribe now.
Prev Post
Next Post
Comments are closed.