ತೆಂಗಿನಕಾಯಿ ಕಳ್ಳನ ಬಂಧನ

5,518

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಬುರುಡೆಹೊಸಹಳ್ಳಿ ಜಮೀನಿನಲ್ಲಿ ದಾಸ್ತಾನು ಮಾಡಲಾಗಿದ್ದ 2000 ತೆಂಗಿನ ಕಾಯಿಗಳನ್ನು ಕದ್ದೊಯ್ದಿದ್ದ ಆರೋಪಿಯನ್ನು ಬಂಧಿಸುವಲ್ಲಿ ತುರುವೇಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ನಾಗಮಂಗಲ ತಾಲೂಕು ಮಂಚೇನಹಳ್ಳಿ ನಿವಾಸಿ ರಾಜೇಶ್‌ (28), ಇದೇ ತಿಂಗಳ 13 ರಂದು ಜಮೀನಿನಲ್ಲಿ ದಾಸ್ತಾನು ಮಾಡಲಾಗಿದ್ದ ಕಾಯಿಗಳು ಕಳ್ಳತನವಾಗಿವೆ ಎಂದು ಜಮೀನಿನ ಮಾಲೀಕ ತುರುವೇಕೆರೆ ಪೊಲೀಸರಿಗೆ ದೂರು ನೀಡಿದ್ದರು, ಕಳ್ಳತನ ಬೇದಿಸಲು ಕುಣಿಗಲ್‌ ಡಿವೈಎಸ್ಪಿ ರಮೇಶ್‌ ಸಿಪಿಐ ನವೀನ್‌ ಒಳಗೊಂಡಂತೆ ಪಿಎಸ್‌ಐ ಕೇಶವಮೂರ್ತಿ ಮತ್ತು ತಂಡ ರಚಿಸಿದ್ದರು. ಅದರಂತೆ ಪಿಎಸ್‌ಐ ಕೇಶವಮೂರ್ತಿ ಮತ್ತು ತಂಡ ಆರೋಪಿ ರಾಜೇಶನನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಆರೋಪಿಯಿಂದ ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 7 ಪ್ರಕರಣಗಳಲ್ಲಿ 1,50000 ಲಕ್ಷ ಬೆಲೆಯ 8200 ತೆಂಗಿನ ಕಾಯಿ ಹಾಗೂ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ.
ಆರೋಪಿ ಬಂಧಿಸುವಲ್ಲಿ ಶ್ರಮಿಸಿದ ಡಿವೈಎಸ್ಪಿ ರಮೇಶ್‌ ನೇತೃತ್ವದ ತಂಡದಲ್ಲಿದ್ದ ಸಿಪಿಐ ನವೀನ್‌, ಪಿ.ಎಸ್.ಐ ಕೇಶವಮೂರ್ತಿ, ಎ.ಎಸ್.ಐ ಶಿವಲಿಂಗಪ್ಪ, ಮುಖ್ಯ ಪೇದೆಗಳಾದ ಮೋಹನ್‌, ಶಂಭುಲಿಂಗೇಶ್‌, ಪೇದೆಗಳಾದ ಸುಪ್ರೀತ್‌, ಜಯರಾಮು, ಪುನೀತ್‌, ಮಿಥುನ್‌, ಹೇಮಂತ್‌ ಹಾಗೂ ತಾಂತ್ರಿಕ ವಿಭಾಗದ ನರಸಿಂಹರಾಜು, ರಮೇಶ್‌ ಮತ್ತು ರಮೇಶ್‌ ಅವರನ್ನು ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್‌ ಶಹಾಪುರ್‌ವಾಡ್‌ ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!