ಮಧುಗಿರಿ: ಪತ್ನಿಯ ಶೀಲ ಶಂಕಿಸಿ ಕೊಲೆಗೈದಿದ್ದ ಪತಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರ ಗೌಡ ಪಾಟೀಲ್ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು ಅರವತ್ತು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
2014 ಸೆಪ್ಟಂಬರ್ 2 ರಂದು ಕೊರಟಗೆರೆ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ವೆಂಕಟೇಶಪ್ಪ ಎಂಬುವರ ಮನೆಗೆ ಬೆಂಗಳೂರು ಜಿಲ್ಲೆ ಚಿಕ್ಕಜಾಲ ಹೋಬಳಿಯ ಮಾರಸಂದ್ರ ಗ್ರಾಮದ ಹರೀಶ್ (34) ತನ್ನ ಹೆಂಡತಿ ಗಾಯತ್ರಿಯೊಂದಿಗೆ ಗೌರಿ ಹಬ್ಬಕ್ಕೆ ಬಂದು ಅಂದು ರಾತ್ರಿ 11.45 ರ ಸುಮಾರಿಗೆ ಮನೆಯ ವರಾಂಡದಲ್ಲಿ ತನ್ನ ಹೆಂಡತಿ ಗಾಯತ್ರಿ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾರೆಂದು ಶೀಲ ಶಂಕಿಸಿ ಚಾಕುವಿನಿಂದ ಗಾಯತ್ರಿ ಎದೆಗೆ, ಹೊಟ್ಟೆಗೆ ಮತ್ತು ಬಲ ತೋಳಿಗೆ ತಿವಿದು ಕೊಲೆ ಮಾಡಿರುತ್ತಾನೆಂದು ತನಿಖೆಯಿಂದ ದೃಢಪಟ್ಟ ಮೇರೆಗೆ ನ್ಯಾಯಲಯದಲ್ಲಿ ನ್ಯಾಯಾಧೀಶರು ವಾದ- ಪ್ರತಿವಾದ ಆಲಿಸಿ ಆರೋಪಿ ಹರೀಶನಿಗೆ ಈ ನವೆಂಬರ್ 23 ರಂದು ಜೀವಾವಧಿ ಶಿಕ್ಷೆ ಮತ್ತು ಅರವತ್ತು ಸಾವಿರ ದಂಡ ವಿಧಿಸಿದ್ದಾರೆ. ದಂಡದ ಹಣದಲ್ಲಿ ಐವತ್ತು ಸಾವಿರ ರೂ. ಗಳನ್ನು ಮೃತಳ ತಾಯಿಗೆ ಪರಿಹಾರವಾಗಿ ನೀಡಲು ಆದೇಶಿಸಿರುತ್ತಾರೆ.
ವೃತ್ತ ನಿರೀಕ್ಷಕರಾಗಿದ್ದ ಕೆ.ಆರ್.ಚಂದ್ರಶೇಖರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.
ಪತ್ನಿ ಕೊಂದವನಿಗೆ ಜೀವಾವಧಿ ಶಿಕ್ಷೆ
Get real time updates directly on you device, subscribe now.
Prev Post
Comments are closed.