ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಪ್ರಚಾರ

171

Get real time updates directly on you device, subscribe now.

ಬರಗೂರು: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿ ಗಳಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು, ನೀವು ನಮಗೆ ಮತ ಕೊಟ್ಟು ಗೆಲುವು ತಂದು ಕೊಟ್ಟರೆ ನಿಮ್ಮ ಪ್ರತಿನಿಧಿಯಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ, ಜಿಲ್ಲೆಯಲ್ಲಿ ಬರುವ ಗ್ರಾಮಗಳ ಅಭಿವೃದ್ಧಿ ಜೊತೆಗೆ ಸದಸ್ಯರ ಶ್ರೇಯಸ್ಸಿಗೆ ಶ್ರಮಿಸಿ ಸೇವೆ ಮಾಡುವ ಮೂಲಕ ಮಾದರಿ ವಿಧಾನ ಪರಿಷತ್‌ ಸದಸ್ಯನಾಗುವ ಸಂಕಲ್ಪಕ್ಕೆ ಬಲ ನೀಡುವ ಮೂಲಕ ತಮ್ಮ ಮತ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ನನಗೆ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸುವಂತೆ ತುಮಕೂರು ವಿಧಾನಪರಿಷತ್‌ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎನ್‌.ಲೋಕೇಶ್‌ ಗೌಡ ಮನವಿ ಮಾಡಿದರು.
ಶಿರಾ ತಾಲೂಕಿನ ತಡಕಲೂರು, ದ್ವಾರನಕುಂಟೆ, ಹುಲಿಕುಂಟೆ ಬರಗೂರು, ದೊಡ್ಡಬಾಣಗೆರೆ ನಾದೂರು, ಹೊಸಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರನ್ನು ಭೇಟಿ ಮಾಡಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ ಮಾಡಿಸುವ ಹಾಗೂ 15ನೇ ಹಣಕಾಸಿನಲ್ಲಿ ಹೆಚ್ಚು ಅನುದಾನ ಕೊಡಿಸುವ ಗುರಿ ಹೊಂದಿದ್ದು ಗ್ರಾಮ ಪಂಚಾಯತಿ ಸದಸ್ಯರು ಬೆಂಬಲಿಸಬೇಕೆಂದರು.
ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಮಾತನಾಡಿ, ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ಕೆರೆ ಭರ್ತಿ ಮಾಡಿದೆ, ಇದು ಬಿಜೆಪಿ ಸರ್ಕಾರದ ಕೊಡುಗೆಯಾಗಿದ್ದು ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಗಳ ನೂರಾರು ಗ್ರಾಮಗಳ ಕುಡಿಯುವ ನೀರಿನ ಬವಣೆ ನೀಡಲಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರೀತಿ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಲಿದೆ, ಇದಲ್ಲದೆ ಶಿರಾ ತಾಲೂಕಿನ ಮಹತ್ವಾಕಾಂಕ್ಷೆಯ ಅಪ್ಪರ್‌ ಭದ್ರ ನೀರಾವರಿ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯುತ್ತಿದ್ದು ತಾಲೂಕಿನ 65 ಕೆರೆ ನೀರಿನ ಭಾಗ್ಯ ಕಾಣಲಿವೆ, ಇಂತಹ ಮಹತ್ವದ ಯೋಜನೆಗಳನ್ನು ಕೊಟ್ಟ ಬಿಜೆಪಿ ಸರ್ಕಾರಕ್ಕೆ ಮತ ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಎನ್‌.ಲೋಕೇಶ್‌ ಗೌಡ ಅವರನ್ನು ಗೆಲ್ಲಿಸುವಂತೆ ಗ್ರಾಮ ಪಂಚಾಯತಿ ಸದಸ್ಯರಿಗೆ ಮನವಿ ಮಾಡಿದರು.
ಎನ್‌.ಲೋಕೇಶ್‌ ಗೆಲುವು ಸಾಧಿಸಿದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಶಿರಾ ತುಮಕೂರು ಮತ್ತು ತುಮಕೂರು ಚಿತ್ರದುರ್ಗ ರೈಲ್ವೆ ಮಾರ್ಗ ಯೋಜನೆ ಪೂರ್ಣಗೊಳಿಸಲು ಶಕ್ತಿ ತುಂಬಿದಂತಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ತೆಂಗು ಮತ್ತು ನಾರು ನಿಗಮ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌, ಕರ್ನಾಟಕ ರಾಜ್ಯ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಎಸ್‌.ಆರ್‌.ಗೌಡ, ಬಿಜೆಪಿ ಶಿರಾ ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಮುಖಂಡ ಪ್ರಕಾಶ್‌ ಗೌಡ್ರು, ಚಂಗವರ ಮಾರಣ್ಣ, ಮೂರ್ತಿ ಮಾಸ್ಟರ್‌, ಮ್ದೆವಳ್ಳಿ ರಾಮಕೃಷ್ಣಪ್ಪ, ನಗರ ಪ್ರಾಧಿಕಾರ ಅಧ್ಯಕ್ಷ ಈರಣ್ಣ, ತರೂರು ಬಸವರಾಜ್‌, ಮಾಲಿ ಭರತ್‌, ಮಾಲಿ ಸಿ.ಎಲ್‌. ಗೌಡ್ರು, ನಿಡಘಟ್ಟೆ ಚಂದ್ರಶೇಖರ್‌, ಲಿಂಗದಹಳ್ಳಿ ಸುಧಾಕರ್‌, ಹಾರೋಗೆರೆ ಮಾರಣ್ಣ, ಸ್ಥಳೀಯ ಬಿಜೆಪಿ ಮುಖಂಡರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.

Get real time updates directly on you device, subscribe now.

Comments are closed.

error: Content is protected !!