ಅಂಗಡಿಯಲ್ಲಿ ನಗದು, ಬಟ್ಟೆ ಕಳ್ಳತನ

163

Get real time updates directly on you device, subscribe now.

ಕುಣಿಗಲ್‌: ಮಾಜಿ ಶಾಸಕರಿಗೆ ಸೇರಿದ ವಾಣಿಜ್ಯ ಕಾಂಪ್ಲೆಕ್ಸ್ ನ ಬಟ್ಟೆ ಅಂಗಡಿಗೆ ನುಗ್ಗಿರುವ ಕಳ್ಳರು ನಗದು, ಬಟ್ಟೆ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಪಟ್ಟಣದ ಮುಖ್ಯರಸ್ತೆಯಲ್ಲೆ ಪುರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರಿಗೆ ಸೇರಿದ ವಾಣಿಜ್ಯ ಕಾಂಪ್ಲೆಕ್ಸ್ ಇದ್ದು, ಸದರಿ ಕಾಪ್ಪಕ್ಸ್ ನಲ್ಲಿ ಬಟ್ಟೆ ಅಂಗಡಿ ಇದೆ. ಸದರಿ ಬಟ್ಟೆ ಅಂಗಡಿಗೆ ಮಧ್ಯರಾತ್ರಿ ಶಟರ್‌ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ಕೌಂಟರ್ ನಲ್ಲಿ 1.20 ಲಕ್ಷ ರೂ. ನಗದು, ಸಾವಿರಾರು ರೂ. ಮೌಲ್ಯದ ಬಟ್ಟೆ ಎತ್ತಿಕೊಂಡು ಪರಾರಿಯಾಗಿದ್ದಾರೆ. ದುಷ್ಕರ್ಮಿಕಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದರಿ ವಾಣಿಜ್ಯ ಕಾಂಪ್ಲೆಕ್ಸ್ ಪಟ್ಟಣದ ಜನನಿಬಿಡ ಮುಖ್ಯರಸ್ತೆಯಲ್ಲಿದ್ದು ಕೂಗಳೆ ಸಮೀಪದಲ್ಲೆ ಮೂರು ರಾಷ್ಟ್ರೀಕೃತ ಬ್ಯಾಂಕ್ ಗಳಿವೆ, ಇಷ್ಟೆಲ್ಲಾ ಇದ್ದರೂ ಕಳವು ನಡೆದಿರುವುದು ವ್ಯಾಪಾರಿಗಳಲ್ಲಿ, ಮಳಿಗೆ ಮಾಲೀಕರನ್ನು ಬೆಚ್ಚಿ ಬೀಳಿಸಿದೆ, ಘಟನೆಗೆ ಸಂಬಂಧಿಸಿದಂತೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!