ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಬ್ಬರ ಶವ ಪತ್ತೆ

267

Get real time updates directly on you device, subscribe now.

ಕುಣಿಗಲ್‌: ಭಾನುವಾರ ಮಾರ್ಕೋನಹಳ್ಳಿ ಜಲಾಶಯದಿಂದ ಕೋಡಿಯಾದ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗಿದ್ದ ನಾಲ್ವರ ಪೈಕಿ ಇಬ್ಬರ ಮೃತದೇಹ ಶಿಂಷಾ ನದಿಯಲ್ಲಿ ಪತ್ತೆಯಾಗಿದೆ.
ಭಾನುವಾರ ಪಟ್ಟಣದ ಕೋಟೆ ಪ್ರದೇಶದ ಎರಡು ಕುಟುಂಬದವರು ಮಾರ್ಕೋನಹಳ್ಳಿ ಜಲಾಶಯದ ಕೋಡಿಯ ನೀರು ನೋಡಲು ಹೋಗಿದ್ದರು. ಜಲಾಶಯದ ಕೋಡಿ ನೀರು ಶಿಂಷಾ ನದಿಸೇರಿ ಹರಿದು ಹೋಗುತ್ತಿದ್ದು ನದಿ ನೀರಿನಲ್ಲಿ ಆಟವಾಡುತ್ತಿದ್ದಾಗ ಕೋಟೆ ಪ್ರದೇಶದ ಇಬ್ಬರು ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದರು. ಈ ಘಟನೆಯ ನಂತರ ಸ್ವಲ್ಪದೂರದಲ್ಲಿ ಶಿಂಷಾ ನದಿ ಹರಿಯುವ ನೀರಿನ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಇಳಿದಿದ್ದ ಇಬ್ಬರು ಯುವಕರು ಸಹ ಕೊಚ್ಚಿ ಹೋಗಿದ್ದರು.
ಘಟನೆ ನಂತರ ಕೊಚ್ಚಿ ಹೋದವರ ಪತ್ತೆಗೆ ಅಗ್ನಿಶಾಮಕ ಇಲಾಖಾಧಿಕಾರಿಗಳು, ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ನದಿಯು ತುಮಕೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ಗಡಿಭಾಗವಾದ್ದರಿಂದ ಮಂಡ್ಯ ಜಿಲ್ಲೆಯ ನಾಗಮಂಗಲ ಪೊಲೀಸರು, ಅಧಿಕಾರಿಗಳು ಸಹ ಕೊಚ್ಚಿ ಹೋದವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆ ವೀಕ್ಷಿಸಲು ಕುಣಿಗಲ್‌ ಶಾಸಕ ಡಾ.ರಂಗನಾಥ, ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ತಾಲೂಕು ಜೆಡಿಎಸ್‌ ಅಧ್ಯಕ್ಷ ಜಗದೀಶ್‌ ಸ್ಥಳಕ್ಕೆ ಭೇಟಿ ನೀಡಿ ಕೊಚ್ಚಿಹೋದವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸೋಮವಾರ ಬೆಳಗ್ಗೆ ಜಲಾಶಯದಿಂದ ಅನತಿ ದೂರದ ನದಿಯ ತಿರುವಿನ ಬಂಡೆ ಪ್ರದೇಶದಲ್ಲಿ ಕೊಚ್ಚಿಹೋದ ಕೋಟೆ ಪ್ರದೇಶದ ಯುವತಿ ಸಾಧಿಹ (17) ಹಾಗೂ ಎಡೆಯೂರಿನ ತಾತನ ಮನೆಗೆ ಬಂದಿದ್ದ ಅಪ್ಪು(18) ಮೃತ ದೇಹ ಪತ್ತೆಯಾಗಿದೆ. ಇನ್ನಿಬ್ಬರ ಮೃತ ದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿದ್ದು ಎನ್‌ಡಿಆರ್‌ಎಫ್‌ನ ನುರಿತ ಸಿಬ್ಬಂದಿ ಸೋಮವಾರ ಬೆಳಗ್ಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!