ತುಮಕೂರು: ಜಿಲ್ಲೆಯಲ್ಲಿ ಡಿಸೆಂಬರ್ 10 ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು 338 ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯ 328 ಗ್ರಾಮ ಪಂಚಾಯತಿ ಸದಸ್ಯರು, ತುಮಕೂರು ಮಹಾನಗರ ಪಾಲಿಕೆ ಸದಸ್ಯರು, ತಿಪಟೂರು ನಗರಸಭೆ ಸದಸ್ಯರು, ಚಿಕ್ಕನಾಯಕನಹಳ್ಳಿ, ಮಧುಗಿರಿ, ಕುಣಿಗಲ್, ಪಾವಗಡ ಸೇರಿದಂತೆ 4 ಪುರಸಭೆ ಸದಸ್ಯರು ಹಾಗೂ ಕೊರಟಗೆರೆ, ಗುಬ್ಬಿ, ಹುಳಿಯಾರು, ತುರುವೇಕೆರೆ ಸೇರಿದಂತೆ 4 ಪಟ್ಟಣ ಪಂಚಾಯತಿಗಳ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
ಜಿಲ್ಲೆಯಲ್ಲಿರುವ 330 ಗ್ರಾಮ ಪಂಚಾಯತಿಗಳ ಪೈಕಿ ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಹಾಗೂ ತಿಪಟೂರು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯತಿಯಲ್ಲಿ ಚುನಾವಣೆಯನ್ನು ಬಹಿಷ್ಕರಿಸಿರುವುದರಿಂದ ಈ ಚುನಾವಣೆಯಲ್ಲಿ ಸದರಿ ಗ್ರಾಪಂ ಸದಸ್ಯರು ಮತ ಚಲಾಯಿಸುತ್ತಿಲ್ಲ. ಅದೇ ರೀತಿ ಶಿರಾ ನಗರಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸದರಿ ನಗರಸಭೆ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸುತ್ತಿಲ್ಲ.
ಈ ವಿಧಾನ ಪರಿಷತ್ ಚುನಾವಣಾ ಕ್ಷೇತ್ರದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 495 ಮತದಾರರು (ಪುರುಷರು- 241, ಮಹಿಳೆಯರು- 254), ತಿಪಟೂರು- 438 (209, 229), ತುರುವೇಕೆರೆ- 413 (193, 220), ಕುಣಿಗಲ್- 524 (247, 277), ತುಮಕೂರು- 786 (379, 407), ಕೊರಟಗೆರೆ- 407 (197, 210), ಗುಬ್ಬಿ- 674 (298, 326), ಶಿರಾ- 658 (303, 355), ಪಾವಗಡ- 578 (259, 319), ಮಧುಗಿರಿ ತಾಲ್ಲೂಕಿನಲ್ಲಿ 636 (297, 339) ಮತದಾರರಿದ್ದು, ಒಟ್ಟಾರೆ 2623 ಪುರುಷರು ಹಾಗೂ 2936 ಮಹಿಳಾ ಮತದಾರರು ಸೇರಿದಂತೆ 5559 (ಇತರೆ ಮತದಾರರು ಇರುವುದಿಲ್ಲ) ಮತದಾರರಿದ್ದಾರೆ.
ಜಿಲ್ಲೆಯಲ್ಲಿ 2465 ಪುರುಷರು ಹಾಗೂ 2834 ಮಹಿಳೆಯರು ಸೇರಿದಂತೆ 5299 ಗ್ರಾಮ ಪಂಚಾಯತಿ ಸದಸ್ಯರು ಹಾಗೂ 158 ಪುರುಷರು ಹಾಗೂ 102 ಮಹಿಳೆಯರು ಸೇರಿದಂತೆ 260 ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಎಂ.ಎಲ್.ಸಿ ಚುನಾವಣೆಗೆ 338 ಮತಗಟ್ಟೆ ಸ್ಥಾಪನೆ
Get real time updates directly on you device, subscribe now.
Next Post
Comments are closed.