ಕುಣಿಗಲ್: ಭಾನುವಾರ ಮಾರ್ಕೋನಹಳ್ಳಿ ಜಲಾಶಯದಿಂದ ಕೋಡಿಯಾದ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗಿದ್ದ ನಾಲ್ವರ ಪೈಕಿ ಇಬ್ಬರ ಮೃತದೇಹ ಶಿಂಷಾ ನದಿಯಲ್ಲಿ ಸೋಮವಾರ ಪತ್ತೆಯಾಗಿದ್ದು ಬಾಕಿ ಇಬ್ಬರ ಮೃತ ದೇಹ ಮಂಗಳವಾರ ಪತ್ತೆಯಾಗಿದೆ.
ಭಾನುವಾರ ಪಟ್ಟಣದ ಕೋಟೆ ಪ್ರದೇಶದ ಎರಡು ಕುಟುಂಬದವರು ಮಾರ್ಕೋನಹಳ್ಳಿ ಜಲಾಶಯದ ಕೋಡಿಯ ನೀರು ನೋಡಲು ಹೋಗಿದ್ದರು. ಜಲಾಶಯದ ಕೋಡಿ ನೀರು ಶಿಂಷಾ ನದಿ ಸೇರಿ ಹರಿದು ಹೋಗುತ್ತಿದ್ದು ನದಿ ನೀರಿನಲ್ಲಿ ಆಟವಾಡುತ್ತಿದ್ದಾಗ ಕೋಟೆ ಪ್ರದೇಶದ ಇಬ್ಬರು ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಹೋಗಿದ್ದರು. ಈ ಘಟನೆಯ ನಂತರ ಸ್ವಲ್ಪ ದೂರದಲ್ಲಿ ಶಿಂಷಾ ನದಿ ಹರಿಯುವ ನೀರಿನ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಇಳಿದಿದ್ದ ಇಬ್ಬರು ಯುವಕರು ಸಹ ಕೊಚ್ಚಿ ಹೋಗಿದ್ದರು.
ಘಟನೆ ನಂತರ ಕೊಚ್ಚಿ ಹೋದವರ ಪತ್ತೆಗೆ ಅಗ್ನಿಶಾಮಕ ಇಲಾಖಾಧಿಕಾರಿಗಳು, ಪೊಲೀಸರು, ಎನ್‌ಡಿಆರ್‌ಎಫ್ ತಂಡದವರು ಕಾರ್ಯಾಚರಣೆ ಆರಂಭಿಸಿದ್ದು, ನದಿಯು ತುಮಕೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ಗಡಿ ಭಾಗವಾದ್ದರಿಂದ ಮಂಡ್ಯ ಜಿಲ್ಲೆಯ ನಾಗಮಂಗಲ ಪೊಲೀಸರು, ಅಧಿಕಾರಿಗಳು ಸಹ ಕೊಚ್ಚಿ ಹೋದವರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು, ಸೋಮವಾರ ಇಬ್ಬರ ಮೃತ ದೇಹ ಪತ್ತೆಯಾಗಿತ್ತು. ಮಂಗಳವಾರ ಬೆಳಗ್ಗೆ ಹಾಗೂ ಮಧ್ಯಾಹ್ನ ಇನ್ನಿಬ್ಬರ ಮೃತ ದೇಹ ಪತ್ತೆಯಾಗಿದೆ. ನಾಗಮಂಗಲ ತಾಲೂಕಿನ ವ್ಯಾಪ್ತಿಯ ಜಲಾಶಯದಿಂದ ಎರಡು ಕಿ.ಮೀ ದೂರದ ಬೆಟ್ಟದ ಸಮೀಪದ ಶಿಂಷಾ ನದಿಯಲ್ಲಿ ಎಡೆಯೂರು ಸಮೀಪದ ಬೀರಗಾನಹಳ್ಳಿಯ ರಾಜು (23) ಮೃತ ದೇಹ ಪತ್ತೆಯಾದರೆ, ಜಲಾಶಯದಿಂದ ಸುಮಾರು ಎಂಟು ಕಿ.ಮೀ ದೂರದ ನದಿಯಲ್ಲಿ ಪರ್ವಿನ್‌ತಾಜ್ (35) ಮೃತದೇಹ ಪತ್ತೆಯಾಗಿದೆ.
ಕೊಚ್ಚಿ ಹೋಗಿದ್ದ ಮತ್ತಿಬ್ಬರ ಮೃತ ದೇಹ ಪತ್ತೆ
Get real time updates directly on you device, subscribe now.
Prev Post
Next Post
Comments are closed.