ಅಂಗನವಾಡಿ ಕೇಂದ್ರಕ್ಕೆ ಬೀಗ- ಸಿಡಿಪಿಒಯಿಂದ ಪೊಲೀಸರಿಗೆ ದೂರು

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪಟ್ಟು

402

Get real time updates directly on you device, subscribe now.

ಕುಣಿಗಲ್: ತಮ್ಮ ಜನಾಂಗ ಬಹು ಸಂಖ್ಯಾತ ಇರುವ ಗ್ರಾಮವಾಗಿದ್ದು ತಮ್ಮ ಜನಾಂಗದವರನ್ನು ಅಂಗನವಾಡಿಗೆ ನಿಯೋಜಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹಲವು ದಿನಗಳಿಂದ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದಿದ್ದು ಘಟನೆಗೆ ಸಂಬಂಧಿಸಿದಂತೆ ಸಿಡಿಪಿಒ ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ತಾಲೂಕಿನ ಬೊಮ್ಮೆನಹಳ್ಳಿಯ ಅಂಗನವಾಡಿ ಕೇಂದ್ರಕ್ಕೆ ಕಳೆದೊಂದು ತಿಂಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯಾಗಿ ಸುಮಾ ಎಂಬುವವರ ನಿಯೋಜಿಸಲಾಗಿತ್ತು, ಅವರು ಕರ್ತವ್ಯೆಕ್ಕೆ ತೆರಳಿದಾಗ ಅಲ್ಲಿನ ಕೆಲವರು ಇಲ್ಲಿ ಒಂದು ಜನಾಂಗದವರೆ ಹೆಚ್ಚಿದ್ದು (ಮುಸ್ಲಿಂ) ತಮ್ಮ ಜನಾಂಗದವರೆ ಇಲ್ಲಿ ಕೆಲಸ ಮಾಡಬೇಕೆಂದು ಆಗ್ರಹಿಸಿ ಬೀಗ ಜಡಿದರು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆ ಮೇಲಾಧಿಕಾರಿಗಳಿಗೆ ವರದಿ ಮಾಡಿದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳು ಸ್ಥಳಕ್ಕೆ ತೆರಳಿದಾಗಲೂ ಅಲ್ಲಿನ ಗ್ರಾಮಸ್ಥರು ಇದೆ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಸರ್ಕಾರದ ವಿವಿಧ ಸವಲತ್ತು ತಲುಪಿಸಿ ಅನುಷ್ಠಾನಗೊಳಿಸಲು ಅಡಚಣೆಯಾಗುತ್ತಿದ್ದು ಬೀಗ ಹಾಕಿರುವವರ ಮೇಲೆ ಕ್ರಮ ಕೈಗೊಂಡು ಅಂಗನವಾಡಿ ಕೇಂದ್ರ ಸುಸೂತ್ರವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಸಿಡಿಪಿಒ ಪೊಲೀಸರಿಗೆ ದೂರು ನೀಡಿದ್ದಾರೆ.
ಸದರಿ ವಿಷಯದಲ್ಲಿ ರಾಜಕಾರಣವೂ ಮಧ್ಯ ಪ್ರವೇಶವಾಗಿದ್ದು ಪಕ್ಷವೊಂದರ ಮುಖಂಡರು ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರ ಕೋರಿಕೆ ಮನ್ನಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!