ಕುಣಿಗಲ್: ಪತ್ನಿಶೀಲ ಶಂಕಿಸಿ ಜೋಡಿ ಕೊಲೆ ಮಾಡಿದ್ದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಕೊತ್ತಗೆರೆ ಹೋಬಳಿಯ ಕಾಂತಯ್ಯನಪಾಳ್ಯ ಗ್ರಾಮದ ನಾರಾಯಣ ಎಂಬಾತ ವೃತ್ತಿಯಲ್ಲಿ ಟಿಕ್ಕಿಯಾಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಸೌಮ್ಯ ಮೊಬೈಲ್ ನಲ್ಲಿ ಕಾಲಕಳೆಯುತ್ತಿದ್ದನ್ನು ಕಂಡು ಶೀಲ ಶಂಕಿಸಿ ಆಕೆಯನ್ನು ಸ್ವಗ್ರಾಮಕ್ಕೆ ಕರೆತಂದು ಇಟ್ಟಿದ್ದ, 2018ರ ಜುಲೈ ಮಾಹೆಯ 10ರ ರಾತ್ರಿ ಮನೆಯಲ್ಲಿ ಮಲಗಿದ್ದ ಪತ್ನಿ ಮೇಲೆ ಒನಕೆಯಿಂದ ಹಲ್ಲೆ ಮಾಡಿದ್ದು ಎಚ್ಚರಗೊಂಡ ನಾರಾಯಣನ ತಂದೆ ಈರಣ್ಣ ಅಡ್ಡ ಬಂದಿದ್ದು ಈತನಿಗೂ ಹಲ್ಲೆ ಮಾಡಿದ. ಒನಕೆ ತುಂಡಾದ್ದರಿಂದ ಕುಡಗೋಲಿನಿಂದ ಕೊಲೆಗೈದು ಪರಾರಿಯಾಗಿ ನಂತರ ಶಿರಾ ಪೊಲೀಸ್ ಠಾಣೆಗೆ ಶರಣಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ಅಂದಿನ ಕುಣಿಗಲ್ ವೃತ್ತನಿರೀಕ್ಷಕ ಅಶೋಕ್ ಕುಮಾರ್ ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ತುಮಕೂರಿನ 6ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ್, ಆರೋಪಿಗೆ ಕಠಿಣ ಸಜೆಯೊಂದಿಗೆ ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷದ ಹತ್ತು ಸಾವಿರ ದಂಡ, ದಂಡದ ಹಣ ಪಾವತಿಸಲು ವಿಫಲವಾದಲ್ಲಿ ಆರು ತಿಂಗಳ ಸಾದಾ ಸಜೆ ವಿಧಿಸಿದ್ದು, ದಂಡದ ಹಣದ ಒಂದು ಲಕ್ಷ ರೂ. ಗಳನ್ನು ಮಗಳಾದ ಕೀರ್ತಿ ಹೆಸರಿಗೆ ಠೇವಣಿ ಇಡಲು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕಿ ಆರ್.ಟಿ.ಅರುಣ ವಾದ ಮಂಡಿಸಿದರು.
ಪತ್ನಿ ಕೊಂದವನಿಗೆ ಜೀವಾವಧಿ
Get real time updates directly on you device, subscribe now.
Comments are closed.