ಕಾಡುಗೊಲ್ಲರಿಗೆ ಅನ್ಯಾಯ ಮಾಡಿದ್ರೆ ಸುಮ್ಮನಿರಲ್ಲ

234

Get real time updates directly on you device, subscribe now.

ಗುಬ್ಬಿ: ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕಾಡುಗೊಲ್ಲರ ಸಮಗ್ರಅಭಿವೃದ್ಧಿಗೆ ಸ್ಥಾಪಿತವಾದ ಕಾಡುಗೊಲ್ಲರ ಅಭಿವೃದ್ಧಿ ನಿಗಮ ನಮ್ಮ ಜನರಲ್ಲಿ ಒಂದು ಭರವಸೆ ತಂದಿತ್ತು. ಆದರೆ ಶಾಸಕಿ ಪೂರ್ಣಿಮಾ ಅವರು ನಿಗಮದ ಹೆಸರು ಬದಲಾವಣೆಗೆ ಪತ್ರ ಬರೆದಿರುವುದು ಖಂಡನೀಯ ಎಂದು ತಾಲ್ಲೂಕು ಕಾಡುಗೊಲ್ಲರ ಯುವಸೇನೆ ಪದಾಧಿಕಾರಿಗಳು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.
ಯಾವುದೇಕ್ಷೇತ್ರದಲ್ಲೂ ಪ್ರಾತಿನಿಧ್ಯ ಸಿಗದ ಕಾಡುಗೊಲ್ಲರಿಗೆ ಒಂದು ಗುರುತು ಸಿಕ್ಕಿರಲಿಲ್ಲ. ನಮ್ಮ ಬುಡಕಟ್ಟು ಸುಮಾರು ಹತ್ತು ಲಕ್ಷ ಜನಸಂಖ್ಯೆಇದ್ದೇವೆ. ಸುಮಾರು 37 ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಜನಾಂಗವೇ ನಿರ್ಣಾಯಕ ಎನಿಸಿದೆ. ನಮಗೂ ಒಂದು ನಿಗಮ ಸಿಕ್ಕ ಹಿಂದೆಯೇ ಹೆಸರು ಬದಲಿಸಿ ಗೊಲ್ಲ ಮತ್ತು ಕಾಡುಗೊಲ್ಲ ಎಂದು ಹೆಸರು ಬದಲಿಸಲು ಮುಂದಾಗಿರುವುದು ಸರಿಯಲ್ಲ. ಪ್ರವರ್ಗ 1 ರಲ್ಲಿನ ಗೊಲ್ಲ ಜನಾಂಗ ನಮ್ಮ ಜೊತೆ ಸೇರಿಸಿದಲ್ಲಿ ನಮಗೆ ಮತ್ತೆ ಅನ್ಯಾಯವಾಗಲಿದೆ. ರಾಜಕೀಯ ಶಕ್ತಿ ಹೆಚ್ಜಿರುವ ಅವರು ಪ್ರಭಾವ ಬಳಸಿ ಎಲ್ಲಾ ಸವಲತ್ತು ಅವರೆ ಪಡೆಯಲಿದ್ದಾರೆ. ಈ ಹಿನ್ನಲೆ ಕಾಡುಗೊಲ್ಲರ ನಿಗಮ ಹಾಗೆಯೇ ಉಳಿಸುವಂತೆ ಒತ್ತಾಯಿಸಿದರು.
ತಹಸೀಲ್ದಾರ್‌ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾಡುಗೊಲ್ಲ ಯುವಸೇನೆ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಸಿ.ಮಹಾಲಿಂಗಯ್ಯ, ತಾಲ್ಲೂಕು ಅಧ್ಯಕ್ಷ ಜಗದೀಶ್‌, ಗೌರವಾಧ್ಯಕ್ಷ ಶಾಂತರಾಜು, ಗಂಗಾಧರಯ್ಯ, ಶಿವಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!