ವರ್ಗಾವಣೆಗೆ ಸ್ಥಳ ಆಯ್ಕೆ ಅವಕಾಶಕ್ಕೆ ಒತ್ತಾಯ

373

Get real time updates directly on you device, subscribe now.

ತುಮಕೂರು: ಶಿಕ್ಷಣ ಇಲಾಖೆ ನಡೆಸುತ್ತಿರುವ ಅಂತರ್ ಜಿಲ್ಲಾ ವರ್ಗಾವಣೆಯಲ್ಲಿ ಸಿಆರ್‌ಪಿ ಮತ್ತು ಬಿಆರ್‌ಪಿಗಳಿಗೂ ಅಂತರ್ ಜಿಲ್ಲಾ ವರ್ಗಾವಣೆಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಶಿಕ್ಷಣ ಇಲಾಖೆ ಆಯುಕ್ತರಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್. ಪರಶಿವಮೂರ್ತಿ, ಶಿಕ್ಷಣ ಇಲಾಖೆ ನಡೆಸುತ್ತಿರುವ ಅಂತರ್ ಜಿಲ್ಲಾ ಕೋರಿಕೆ ವರ್ಗಾವಣೆಗೆ ಸಿಆರ್‌ಪಿ ಮತ್ತು ಬಿಆರ್‌ಪಿ ಅವರುಗಳನ್ನು ಸೇರಿಸಬೇಕಿತ್ತು, ಇಂದು ಸಿಆರ್‌ಪಿ ಮತ್ತು ಬಿಆರ್‌ಪಿಗಳ ಅಂತರ್‌ ಜಿಲ್ಲಾ ಕೌನ್ಸಿಲಿಂಗ್ ಗೆ ಕರೆದಂತಹ ಸ್ಥಳ ಆಯ್ಕೆ ಸಂದರ್ಭದಲ್ಲಿ ಶೇ.7% ಆಗಿದೆ. ಕೊಡಲು ಆಗುವುದಿಲ್ಲ ಎಂದು ಹೇಳುವಂತಹದ್ದು, ಇಲಾಖೆಯಲ್ಲಿ ಇಷ್ಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸಿಆರ್‌ಪಿ ಮತ್ತು ಬಿಆರ್‌ಪಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.
ಮುಂಬರುವ ದಿನಗಳಲ್ಲಿ ಅವರಿಗೆ ಅಂತರ್‌ ಜಿಲ್ಲೆ ವರ್ಗಾವಣೆಗೆ ಮುಂಚಿತವಾಗಿ ಜಿಪಿಟಿ ವಿಜ್ಞಾನ ಮತ್ತು ಗಣಿತ, ಜಿಪಿಟಿ ಕನ್ನಡ ಎಲ್ಲಾ ಹುದ್ದೆಗಳನ್ನು ತೆರೆದು ಅವರಿಗೆ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
2022ರ ಜನವರಿ 18 ರಂದು ಅಂತರ್ ಜಿಲ್ಲಾ ವರ್ಗಾವಣೆಗೆ ಶಿಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದ್ದು, ಅದಕ್ಕಿಂತ ಮುಂಚೆ ಆಯಾ ತಾಲ್ಲೂಕಿನಲ್ಲಿ ಕೆಲಸ ನಿರ್ವಹಿಸಿರುವ ಮತ್ತು ಇಲಾಖೆ ಪರವಾಗಿ ಕೆಲಸ ಮಾಡಿದಂತಹ ಎಲ್ಲಾ ಸಿಆರ್‌ಪಿ ಮತ್ತು ಬಿಆರ್‌ಪಿಗಳಿಗೆ ಎಲ್ಲಾ ಖಾಲಿ ಇರುವಂತಹ ಜಿಪಿಟಿ ವಿಜ್ಞಾನ ಮತ್ತು ಗಣಿತ ಮತ್ತು ಜಿಪಿಟಿ ಕನ್ನಡ, ಪಿಎಸ್‌ಟಿ ಕನ್ನಡ, ಇವೆಲ್ಲವನ್ನೂ ಆಯ್ಕೆಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದರು.
ಒಂದು ವೇಳೆ ವರ್ಗಾವಣೆಗೆ ಮುಂಚೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡದೇ ಇದ್ದಲ್ಲಿ, ವರ್ಗಾವಣೆಗೆ 5 ವರ್ಷ ತುಂಬದೇ ಇರುವಂತಹ ಸಿಆರ್‌ಪಿಗಳನ್ನು ಒಳಗೊಂಡಂತೆ, ಫೆಬ್ರವರಿ ತಿಂಗಳಲ್ಲಿ ಎಲ್ಲಾ ವರ್ಗಾವಣೆ ಮುಗಿದ ನಂತರ ಪದೋನ್ನತಿ ಕೊಡಬೇಕೆಂಬ ಆಯುಕ್ತರ ಆದೇಶದಂತೆ ಪದೋನ್ನತಿ ನೀಡಿದ ಬಳಿಕ 5 ವರ್ಷ ತುಂಬಿದ ಸಿಆರ್‌ಪಿ ಮತ್ತು ಬಿಆರ್‌ಪಿಗಳನ್ನು ಅದುವರೆಗೂ ಕಾಯ್ದಿರಿಸಿಕೊಂಡು ಪದೋನ್ನತಿ ನಂತರ ಅವರಿಗೆ ಸ್ಥಳ ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪತ್ರಾಂಕಿತ ಸಹಾಯಕ ಆರಿಫುಲ್ಲಾ ಖಾನ್‌ ಅವರ ಮೂಲಕ ಡಿಡಿಪಿಐಗೆ ಮನವಿ ಸಲ್ಲಿಸಿದ್ದು, ಈ ಮನವಿಯನ್ನು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸುವಂತೆ ಆರ್‌.ಪರಶಿವಮೂರ್ತಿ ಮನವಿ ಮಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಸ್‌.ಚಿಕ್ಕಣ್ಣ, ಗುಬ್ಬಿ ತಾಲ್ಲೂಕು ಅಧ್ಯಕ್ಷ ಗೊರವಯ್ಯ, ಗುಬ್ಬಿ ತಾಲ್ಲೂಕು ಕಾರ್ಯದರ್ಶಿ ಎನ್‌.ಟಿ.ಪ್ರಕಾಶ್‌, ಜಿಲ್ಲಾ ಸಹ ಕಾರ್ಯದರ್ಶಿ ಹೆಚ್.ಕೆ.ಭೈರಯ್ಯ, ಸಿಆರ್‌ಪಿ ತಂಡದ ಲೋಕೇಶ್‌ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಿಆರ್‌ಪಿ ಮತ್ತು ಬಿಆರ್‌ಪಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!