ಕುಣಿಗಲ್: ಸದಾ ಮತದಾರರ ಪರವಾಗಿ ನಿಂತು ಕೆಲಸ ಮಾಡುವ ಬಿಜೆಪಿ ಅಭ್ಯರ್ಥಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಮತ ನೀಡುವಂತೆ ಸಚಿವ ಅಶ್ವಥನಾರಾಯಣ ಮನವಿ ಮಾಡಿದರು.
ಮಂಗಳವಾರ ತಾಲೂಕಿನ ಹೊನ್ನೇನಹಳ್ಳಿಯಲ್ಲಿ ವಿಧಾನಪರಿಷತ್ ಚುನಾವಣೆಯ ತುಮಕೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ್ ಗೌಡ ಪರ ಮತಯಾಚನೆ ಮಾಡಿ ಮಾತನಾಡಿ, ವಿರೋಧ ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ನ ಅಭ್ಯರ್ಥಿಗಳು ಚಿನ್ನದ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದವರು, ಆಯ್ಕೆಯಾದ ಮೇಲೆ ಕ್ಷೇತ್ರದ ಕಡೆ ಬರುವುದು ಅನುಮಾನ, ಆದರೆ ಬಿಜೆಪಿ ಅಭ್ಯರ್ಥಿ ಈಗಾಗಲೆ ಜನಪರ ಸೇವೆ ಮಾಡಿ ಅನುಭವ ಹೊಂದಿರುವವರಾಗಿದ್ದಾರೆ, ಅವರ ಆಯ್ಕೆ ಮಾಡಿದಲ್ಲಿ ಕುಣಿಗಲ್ ಸೇರಿದಂತೆ ತುಮಕೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕಾರ ಮಾಡುವ ಜೊತೆ ಮತದಾರರ ನಿರಂತರ ಸಂಪರ್ಕದಲ್ಲಿದ್ದು ಸರ್ಕಾರದಿಂದ ಆಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುತ್ತಾರೆ ಎಂದರು.
ಬಿಜೆಪಿ ಸರ್ಕಾರ ಕುಣಿಗಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಿದೆ, ಅಂಚೆಪಾಳ್ಯ ಕೈಗಾರಿಕೆ ಪ್ರದೇಶದ ಸಮೀಪ 60 ಕೋಟಿ ವೆಚ್ಚದಲ್ಲಿ ಸರ್ಕಾರಿ ಟೂಲ್ಸ್, ಡೈ ಕೈಗಾರಿಕೆ ಸ್ಥಾಪಿಸಲು ಸಿದ್ಧತೆ ನಡೆಸಿದ್ದು ನೀರಾವರಿ ಯೋಜನೆಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸುತ್ತಿದೆ. ಸ್ಥಳೀಯ ಸಂಸ್ಥೆಗಳ ಸಮಗ್ರ ಅಭಿವೃದ್ಧಿ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ, ಆದ್ದರಿಂದ ಬಿಜೆಪಿ ಅಭ್ಯರ್ಥಿ ಲೊಕೇಶ್ ಗೌಡರನ್ನು ಬೆಂಬಿಲಿಸಿ ಮತ ನೀಡಬೇಕೆಂದರು.
ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ, ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ನಾಲ್ಕು ವರ್ಷ ಕಳೆಯುತ್ತಾ ಬಂದರೂ ಕಾಂಗ್ರೆಸ್ ನ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ತೋರಿಲ್ಲ, ಏನಾದರೂ ಕೇಳಿದರೆ ನನಗೆ ಅನುಭವದ ಕೊರತೆ ಎಂದು ಹೇಳುತ್ತಾರೆ. ಇವರ ಕಾರ್ಯ ವೈಖರಿಯಿಂದ ಕ್ಷೇತ್ರವೂ ಎರಡು ದಶಕಗಳ ಕಾಲ ಹಿಂದಕ್ಕೆ ಹೋಗಿದೆ. ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವ ದೊಡ್ಡಕೆರೆ ನೀರು 16 ವರ್ಷದಿಂದ ಕೊಳೆಯುತ್ತಿದ್ದರೂ ಅದೆ ನೀರನ್ನು ಜನ ಕುಡಿಯುವಂತೆ ಮಾಡಿದ್ದಾರೆ. ಮಂಗಳಾ ಜಲಾಶಯಕ್ಕೆ ಲಿಂಕ್ ಕೆನಾಲ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದು ನಾವು ಸಚಿವ ಮಾಧುಸ್ವಾಮಿಯವರ ಮೇಲೆ ಒತ್ತಡ ಹಾಕಿದ ಪರಿಣಾಮ ಸರ್ಕಾರ ಏಳುಕೋಟಿ ಅನುದಾನ ಮಂಜೂರ ಮಾಡಲಾಗಿದೆ, ತಾಲೂಕಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಮತಹಾಕಿ ಗೆಲ್ಲಿಸಬೇಕೆಂದರು.
ಅಭ್ಯರ್ಥಿ ಲೋಕೇಶ್ ಗೌಡ, ಮಾಜಿಶಾಸಕ ಮುನಿರಾಜು, ಮುಖಂಡರಾದ ವೈ.ಎಚ್.ಹುಚ್ಚಯ್ಯ, ತಾಲೂಕು ಅಧ್ಯಕ್ಷ ಬಲರಾಮ್ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಗೆದ್ದರೆ ಅಭಿವೃದ್ಧಿ ಸಾಧ್ಯ: ಅಶ್ವಥನಾರಾಯಣ
Get real time updates directly on you device, subscribe now.
Next Post
Comments are closed.