ಯುವ ನಾಯಕ ರಾಜೇಂದ್ರ ಗೆಲುವು ನಿಶ್ಚಿತ: ಪರಂ

174

Get real time updates directly on you device, subscribe now.

ಕೊರಟಗೆರೆ: ಕರ್ನಾಟಕದ 25 ವಿಧಾನ ಪರಿಷತ್‌ ಕ್ಷೇತ್ರದಲ್ಲಿ 15ಕ್ಕೂ ಅಧಿಕ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ದುರಾಡಳಿತಕ್ಕೆ ಜನತೆಯೇ ತಕ್ಕಪಾಠ ಕಲಿಸುತ್ತಾರೆ. ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ ನಮ್ಮ ಕಾಂಗ್ರೆಸ್‌ ಪಕ್ಷ ಮತ್ತಷ್ಟು ಶಕ್ತಿ ನೀಡಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಕೊರಟಗೆರೆ ಪಟ್ಟಣದ ಪಪಂ ಕಚೇರಿಯ ಮತಗಟ್ಟಿಯಲ್ಲಿ ಶುಕ್ರವಾರ ನಡೆದ ವಿಧಾನ ಪರಿಷತ್‌ ಚುನಾವಣೆಗೆ ಪಪಂ ಸದಸ್ಯರ ಜೊತೆಯಲ್ಲಿ ತಮ್ಮ ಶಾಸಕರ ಮತ ಚಲಾಯಿಸಿದ ನಂತರ ಮಾತನಾಡಿ, ತುಮಕೂರು ಜಿಲ್ಲೆಯ ಕಾಂಗ್ರೆಸ್‌ ಅಭ್ಯರ್ಥಿ ರಾಜೇಂದ್ರರಾಜಣ್ಣ ಗೆಲುವು ಖಚಿತವಾಗಿದೆ. ಕಲ್ಪತರು ನಾಡಿನ ಯುವಕರ ನಾಡಿಮಿಡಿತ ಅರಿತಿರುವ ರಾಜೇಂದ್ರಗೆ ಯುವಕರ ಪಡೆಯು ಸಂಪೂರ್ಣ ಬೆಂಬಲವಿದೆ. ತುಮಕೂರು ಜಿಲ್ಲೆಯ 10 ಕ್ಷೇತ್ರನಲ್ಲಿ ಕಾಂಗ್ರೆಸ್‌ ಪಕ್ಷ ಬಲಿಷ್ಠವಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯವನ್ನು ದೇಶದ ಜನತೆ ಗಮನಿಸಿದ್ದಾರೆ ಎಂದು ಹೇಳಿದರು.
ಮಳೆರಾಯನ ಆರ್ಭಟದಿಂದ ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಎಕರೆಯಲ್ಲಿ ಬೆಳೆಯ ನಷ್ಟವಾಗಿದೆ. ಗ್ರಾಮೀಣ ಪ್ರದೇಶದ ಸಾವಿರಾರು ಬಡಜನತೆಯ ಮನೆಗಳು ನೆಲಸಮವಾಗಿದೆ. ದಿನ ಬಳಕೆಯ ವಸ್ತುಗಳು ಗಗನಕ್ಕೆ ಏರಿಕೆಯಾಗಿ ಮಧ್ಯಮ ವರ್ಗದ ಜನತೆಯ ಭವಿಷ್ಯವೇ ಇಲ್ಲದಾಗಿದೆ, ಕೇಂದ್ರ ಮತ್ತು ರಾಜ್ಯ ಸರಕಾರ ಬಡಜನತೆ ಮತ್ತು ರೈತರ ಪರವಾಗಿ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧವಾಗಿ ಗ್ರಾಪಂ ಸದಸ್ಯರು ಈಗಾಗಲೇ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
407 ಸದಸ್ಯರಿಂದ ಶೇ.100 ರಷ್ಟು ಮತದಾನ
ಕೊರಟಗೆರೆಯ ಪಪಂ, 24 ಗ್ರಾಪಂ, ಪಪಂ, ನಾಮಿನಿ ಸದಸ್ಯರು ಮತ್ತು ಶಾಸಕರು ಸೇರಿ 407 ಜನ ಚುನಾಯಿತ ಸದಸ್ಯರು ವಿಧಾನ ಪರಿಷತ್‌ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಕೊರಟಗೆರೆಯಲ್ಲಿ ಶೇ.100ರಷ್ಟು ಮತದಾನ ಶಾಂತಿಯುತವಾಗಿ ನಡೆದಿದೆ. ಅತಿಸೂಕ್ಷ ಮತಗಟ್ಟಿಗಳಾದ ಹೊಳವನಹಳ್ಳಿ, ಕೋಳಾಲ, ಬಿ.ಡಿ.ಪುರ ಮತ್ತು ಮಾವತ್ತೂರು ಗ್ರಾಪಂ ನಲ್ಲಿ ಭದ್ರತೆಯಲ್ಲಿ ಶಾಂತಿಯುತ ಮತದಾನ ನಡೆದಿದೆ.

Get real time updates directly on you device, subscribe now.

Comments are closed.

error: Content is protected !!