ಕುಣಿಗಲ್‌ ತಾಲ್ಲೂಕಲ್ಲಿ ಶೇ.99.80 ರಷ್ಟು ಓಟಿಂಗ್

201

Get real time updates directly on you device, subscribe now.

ಕುಣಿಗಲ್‌: ರಾಜ್ಯ ವಿಧಾನ ಪರಿಷತ್‌ ಸ್ಥಳೀಯ ಸಂಸ್ಥೆಗಳ ಚುನಾವಣಗೆ ಪಟ್ಟಣದ ಪುರಸಭೆ ಸೇರಿದಂತೆ 36 ಗ್ರಾಮ ಪಂಚಾಯಿತಿಯಲ್ಲಿ ಮತದಾನ ಸುಸೂತ್ರವಾಗಿ ನಡೆದಿದ್ದು ಓರ್ವ ಮತದಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಮತ ಚಲಾವಣೆ ಮಾಡಲಿಲ್ಲ.
ತಾಲೂಕಿನಲ್ಲಿ 36 ಗ್ರಾಮ ಪಂಚಾಯಿತಿ, ಪುರಸಭೆ ಸದಸ್ಯರು, ಶಾಸಕರು ಸೇರಿ 523 ಮತದಾರರಿದ್ದು, ಮಡಿಕೆಹಳ್ಳಿ ಗ್ರಾಮ ಪಂಚಾಯಿತಿಯ ಗುನ್ನಾಗರೆ ಕ್ಷೇತ್ರದ ರಂಗಪ್ಪ ಎಂಬ ಗ್ರಾಪಂ ಸದಸ್ಯ ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮತಚಲಾವಣೆ ಮಾಡದ ಹಿನ್ನೆಲೆಯಲ್ಲಿ 522 ಮಂದಿ ಮತ ಚಲಾಯಿಸುವ ಮೂಲಕ ಶೇ.99.80 ಮತ ದಾನವಾಗಿದೆ.
ಶಾಸಕ ಡಾ.ರಂಗನಾಥ್‌ ಕುಣಿಗಲ್‌ ಪುರಸಭೆಯಲ್ಲಿ ಮತ ಚಲಾಯಿಸಿದರು. ಪುರಸಭೆಯಲ್ಲಿ ಸದಸ್ಯ ರಂಗಸ್ವಾಮಿ ನೇತೃತ್ವದಲ್ಲಿ ಪುರಸಭೆಯ ಕಾಂಗ್ರೆಸ್‌ ಸದಸ್ಯರು ಒಟ್ಟಿಗೆ ಜಮಾವಣೆಗೊಂದು ಮತ ಚಲಾಯಿಸಿದರು. ಮಹಿಳಾ ಸದಸ್ಯೆಯರಿಗೆ ಅವರ ಪತಿಯರು ಸಾಥ್‌ ನೀಡಿ ಕರೆ ತಂದು ಮತ ಚಲಾವಣೆ ಮಾಡಿಸಿದ್ದು ವಿಶೇಷವಾಗಿತ್ತು.
ಬೇರೆ ಬೇರೆ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ಸದಸ್ಯರು ಒಟ್ಟಾಗಿ ಬಂದು ಮತಚಲಾಯಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹರಿಬಿಡುವ ಮೂಲಕ ಹೈಕಮಾಂಡ್ಗೆ ಒಗ್ಗಟಿನ ಸಂದೇಶ ಸಾರಿದರು. ಮತದಾರರ ಸೆಳೆಯಲು ಮೂರು ಪ್ರಮುಖ ಪಕ್ಷಗಳು ಕೊನೆ ಕ್ಷಣದ ಕಸರತ್ತು ಮುಂದುವರೆಸಿದರು. ಪಕ್ಷವೊಂದರ ಪರ ಮತದಾರರ ಸೆಳೆಯಲು ಸುಮಾರು ಹತ್ತು ಸಾವಿರ ರೂ. ಮೌಲ್ಯದ ಗೃಹಪಯೋಗಿ ವಸ್ತುಗಳ ಕೂಪನ್‌ಗಳನ್ನು ಸಹ ಕೊನೆ ಕ್ಷಣದಲ್ಲಿ ವಿಶೇಷ ಆಫರ್‌ನಂತೆ ಹಂಚಿದರು. ಹಂಚಿರುವ ಕೂಪನ್‌ ಅಸಲಿಯೋ ನಕಲಿಯೋ ಎಂಬುದು ಖರೀದಿಗೆ ಕೂಪನ್‌ದಾರರು ತುಮಕೂರಿನ ಅಂಗಡಿಗೆ ತೆರಳಿದಾಗ ಕೂಪನ್‌ ಅಸಲಿಯತ್ತು ಹೊರಬರಲಿದೆ.

Get real time updates directly on you device, subscribe now.

Comments are closed.

error: Content is protected !!