ಜೂಜುಕೋರರ ಬಂಧನ

479

Get real time updates directly on you device, subscribe now.

ಕೊರಟಗೆರೆ: ಸರ್ಕಾರಿ ಶಾಲಾ ಆವರಣದಲ್ಲಿ ಇಸ್ಪೀಟ್‌ ಜೂಜೂ ಅಡ್ಡೆಯ ಮೇಲೆ ಕೋಳಾಲ ಪೊಲೀಸ್‌ ಅಧಿಕಾರಿಗಳ ತಂಡ ದಾಳಿ ಮಾಡಿ ಮೂರು ಜನ ಆರೋಪಿಗಳನ್ನ ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.
ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಹೊಸಪಾಳ್ಯ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಇಸ್ಪೀಟ್‌ ಅಡ್ಡದ ಮೇಲೆ ಕೋಳಾಲ ಪಿಎಸೈ ಮಹಾಲಕ್ಷ್ಮಮ್ಮ ಅವರ ಪೊಲೀಸರ ತಂಡ ದಾಳಿ ಮಾಡಿ ಜಗದೀಶ್‌, ಚಿಕ್ಕರಾಮಯ್ಯ, ನರಸಿಂಹಯ್ಯರನ್ನು ಬಂಧಿಸಿ ಪಣಕ್ಕಿಟ್ಟಿದ್ದ 4000 ರೂ. ನಗದನ್ನ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೋಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಳಾಲ ಪಿಎಸೈ ಮಹಾಲಕ್ಷ್ಮಮ್ಮ ಹಾಗೂ ಸಿಬ್ಬಂದಿ ದಾಳಿ ವೇಳೆ ಇದ್ದರು.

Get real time updates directly on you device, subscribe now.

Comments are closed.

error: Content is protected !!