ಮತ ಎಣಿಕೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

414

Get real time updates directly on you device, subscribe now.

ತುಮಕೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿಸೆಂಬರ್‌ 10 ರಂದು ನಡೆದ ವಿಧಾನ ಪರಿಷತ್‌ ಚುನಾವಣೆಯ ಮತದಾನವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ನಡೆಯಲು ಕಾರಣರಾದ ಎಲ್ಲ ಚುನಾವಣಾ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅಭಿನಂದಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ಸಭಾಂಗಣದಲ್ಲಿ ಚುನಾವಣಾ ವೀಕ್ಷಕ ಡಾ.ರವಿಕುಮಾರ್‌ ಸುರಪುರ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮತದಾನದ ದಿನ 338 ಮತದಾನ ಕೇಂದ್ರಕ್ಕೂ ನೇಮಕ ಮಾಡಲಾಗಿದ್ದ ಸೂಕ್ಷ್ಮ ವೀಕ್ಷಕರು, ಮತಗಟ್ಟೆ ಅಧಿಕಾರಿ, ಪಿಆರ್‌ಒ, ಎಪಿಆರ್‌ಒಗಳ ಕಾರ್ಯಕ್ಷಮತೆಯಿಂದ ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಜರುಗಿದೆ. ಜಿಲ್ಲಾ ಚುನಾವಣಾ ವೀಕ್ಷಕರ ಅನುಮತಿ ಮೇರೆಗೆ ಡಿಸೆಂಬರ್‌ 14 ರಂದು ಇದೇ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಗೂ ಮುನ್ನ ಜಿಲ್ಲಾ ಚುನಾವಣಾ ವೀಕ್ಷಕರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಅಧಿಕಾರಿಗಳೊಂದಿಗೆ ತೆರಳಿ ಮತಪೆಟ್ಟಿಗೆಗಳಿರುವ ಸ್ಟ್ರಾಂಗ್‌ ರೂಮ್ ನ ಭದ್ರತೆ ಪರಿಶೀಲಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚುನಾವಣಾ ಶಾಖೆ ಸಿಬ್ಬಂದಿಗಳು, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷದ ಏಜೆಂಟರ್ ಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!