ನಾಡಿಗೆ ಕೆಂಪೇಗೌಡ ಕೊಡುಗೆ ಅಪಾರ: ಎಚ್‌ಡಿಕೆ

ಬಜಗೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ

205

Get real time updates directly on you device, subscribe now.

ತಿಪಟೂರು: ಭವಿಷ್ಯದ ದೃಷ್ಟಿಯನ್ನು ಆ ಕಾಲದಲ್ಲಿಯೇ ಯೋಚಿಸಿ ಬೃಹತ್‌ ಬೆಂಗಳೂರನ್ನು ನಿರ್ಮಿಸಿ ಕೋಟ್ಯಂತರ ಜನರಿಗೆ ಆಶ್ರಯ ಮತ್ತು ಉದ್ಯೋಗ ಜೊತೆಗೆ ವ್ಯವಹಾರ ಮಾಡಿ ದೇಶ-ವಿದೇಶಗಳಲ್ಲಿ ನಾಡಿನ ಕೀರ್ತಿಯನ್ನು ಬೆಳಗಿಸಿದ ಕೆಂಪೇಗೌಡರ ಪ್ರತಿಮೆ ಅನಾವರಣ ಸ್ಮರಣೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದರು.
ತಾಲೂಕಿನ ನೊಣವಿನಕೆರೆ ಹೋಬಳಿಯ ಬಜಗೂರು ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ಸರ್ಕಾರಕ್ಕೆ ಶೇ.70ರಷ್ಟು ತೆರಿಗೆಯನ್ನು ಬೆಂಗಳೂರು ನಗರ ನೀಡುತ್ತಿದೆ, ದೇಶದಲ್ಲಿ ಧಾರ್ಮಿಕ, ಸಂಸ್ಕೃತಿ ಉಳಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು, ದೇಶಕ್ಕೆ ಸ್ವತಂತ್ರ ಬಂದು 70 ವರ್ಗಳಾದರೂ ಸರ್ಕಾರದ ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿಲ್ಲ, 2030 ನೇ ಇಸ್ವಿ ಒಳಗೆ ಅಮೃತ ಕಾರ್ಯಕ್ರಮಗಳು ಮುಗಿಯಬೇಕು ಆದರೆ ನಾವು ಇನ್ನೂ ಆ ವಿಚಾರದಲ್ಲಿ ಸಫಲರಾಗಿಲ್ಲ. ರಾಜ್ಯದಲ್ಲಿ 14 ತಿಂಗಳ ಜೆಡಿಎಸ್‌ ಸರ್ಕಾರವಿದ್ದ ಸಂದರ್ಭದಲ್ಲಿ 25 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಲಾಗಿದೆ, ಜೆಡಿಎಸ್‌ ಪಕ್ಷದ ವತಿಯಿಂದ ಪಂಚರತ್ನ ಕಾರ್ಯಕ್ರಮ ಯೋಜನೆ ಹಾಕಿಕೊಳ್ಳಲಾಗಿದೆ ಮುಂಬರುವ ದಿನಗಳಲ್ಲಿ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಕ್ಷಣ ಸೇರಿದಂತೆ ಪ್ರತಿಯೊಂದು ಸೌಲಭ್ಯ ಒದಗಿಸುವ ಯೋಜನೆ ಇದಾಗಿದ್ದು, ಜನತೆಯ ಆಶೀರ್ವಾದ ಬೇಕಾಗಿದೆ ಎಂದು ಹೇಳಿದರು.
ದೇವೇಗೌಡರು ದೇಶದಲ್ಲಿ ಪ್ರಧಾನಿಯಾದ ಸಂದರ್ಭದಲ್ಲಿ ಕೊಡುಗೆ ಅಪಾರವಾಗಿದ್ದು, ಪ್ರಧಾನಿಯಾದ ಸಂದರ್ಭದಲ್ಲಿ ಎಚ್‌.ಡಿ ದೇವೇಗೌಡರು ಕಾಶ್ಮೀರದ ಸಮಸ್ಯೆಯ ಪರಿಹಾರ ಒದಗಿಸುವ ಕೆಲಸ ಮಾಡಿದರು. ಒಕ್ಕಲಿಗ ಸಮುದಾಯದಲ್ಲಿ ಜನಿಸಿದ ರಾಷ್ಟ್ರಕವಿ ಕುವೆಂಪು, ಬಾಲ ಗಂಗಾಧರನಾಥ ಸ್ವಾಮೀಜಿ, ಎಚ್‌.ಡಿ ದೇವೇಗೌಡರು ರಾಷ್ಟ್ರಮಟ್ಟದಲ್ಲಿ ಕೀರ್ತಿ ಗಳಿಸಿದ್ದಾರೆ. ಇವರು ಜಾತಿಗೆ ಸೀಮಿತವಾಗಿರಲಿಲ್ಲ, ರಾಜ್ಯ ಹಾಗೂ ಕೇಂದ್ರದಲ್ಲಿರುವ ಸರ್ಕಾರಗಳು ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಹಾಸನದ ಆದಿಚುಂಚನಗಿರಿ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಬಜಗೂರು ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಂಡಿರುವುದು ಸಂತಸದ ವಿಚಾರ, ಕೆಂಪೇಗೌಡರ ಕೊಡುಗೆ ನಾಡಿಗೆ ಅಪಾರವಾಗಿದೆ. ಕನ್ನಡ ನಾಡಿನ ಸಂಸ್ಕೃತಿ ಉಳಿಸುವತ್ತ ನಾವೆಲ್ಲರೂ ಶ್ರಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ದಸರಿಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ಶಿವಪುತ್ರನಾಥ ಸ್ವಾಮೀಜಿ. ಮಾಜಿ ಶಾಸಕ ಕೆ. ಷಡಕ್ಷರಿ, ಕಾಂಗ್ರೆಸ್‌ ಮುಖಂಡ ಕೆ.ಟಿ ಶಾಂತಕುಮಾರ್‌, ಜೆಡಿಎಸ್‌ ಪಕ್ಷದ ಮುಖಂಡರಾದ ಜಕ್ಕನಹಳ್ಳಿ ಲಿಂಗರಾಜು, ರೋಹಿತ್‌, ಚೇತನ್‌, ರಾಧಮ್ಮ ನಾರಾಯಣಗೌಡ, ರೇಖಾ ಅನುಪ್‌, ಜಗದೀಶ್‌, ಎಪಿಎಂಸಿ ನಿರ್ದೇಶಕ ಮಂಜುನಾಥ್, ರಾಕೇಶ್‌, ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ, ಡಾ. ವಿವೇಚನ್‌, ಡಾ. ರಕ್ಷಿತ್‌, ಪ್ರತಿಮೆ ದಾನಿ ನಾಗೇಶ್‌, ಉಮೇಶ್‌, ರಮೇಶ್‌, ಕರುನಾಡು ಸೇನೆಯ ಅಧ್ಯಕ್ಷ ಲೋಕೇಶ್‌, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಗಂಗಣ್ಣ, ಹುಣಸೆ ಘಟ್ಟ ಪ್ರಕಾಶ್‌, ತಾ.ಪಂ ಮಾಜಿ ಸದಸ್ಯ ನಾಗರಾಜು, ಚೇತನ್‌ಕುಮಾರ್‌, ಪ್ರದೀಪ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!