ಕಾಶಿ ಅಭಿವೃದ್ಧಿಯಿಂದ ಮೋದಿ ಬಗ್ಗೆ ಗೌರವ

413

Get real time updates directly on you device, subscribe now.

ಕುಣಿಗಲ್‌: ಹಿಂದೂ ಬಾಂಧವರ ಶ್ರದ್ಧಾಭಕ್ತಿ ತಾಣವಾದ ಕಾಶಿ ವಿಶ್ವನಾಥ ದೇವಾಲಯದ ಸಮಗ್ರ ಅಭಿವೃದ್ಧಿಗೊಳಿಸುವ ಮೂಲಕ ಪ್ರಧಾನಿ ಮೋದಿಯವರ ಬಗ್ಗೆ ಹಿಂದೂ ಭಾಂದವರ ಗೌರವಾದರಗಳು ಇನ್ನು ಹೆಚ್ಚುವಂತಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್‌ ಹೇಳಿದರು.
ಸೋಮವಾರ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ದಿವ್ಯಕಾಶಿ ಭವ್ಯಕಾಶಿ ಕಾರ್ಯಕ್ರಮದ ನೇರ ಪ್ರಸಾರದ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆಗೊಳಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಈ ಹಿಂದೆ ಜಾತ್ಯತೀತೆಯ ನೆಪದಲ್ಲಿ ಬಂದಿದ್ದ ಕೆಲ ಸರ್ಕಾರಗಳು ಹಿಂದು ಭಾಂದವರ ಧಾರ್ಮಿಕ, ಶ್ರದ್ಧಾಭಕ್ತಿಯ ತಾಣಗಳ ಸಮಗ್ರ ಅಭಿವೃದ್ಧಿಗೊಳಿಸುವ ಬದಲು ಆ ಕೇಂದ್ರಗಳನ್ನು ಕಡೆಗಣಿಸಿದ್ದಲ್ಲದೆ ಪರ ಧರ್ಮೀಯರು ಧಾರ್ಮಿಕ ಕೇಂದ್ರದ ಪ್ರದೇಶಗಳ ಒತ್ತುವರಿ ಮಾಡಿಕೊಂಡು ಶ್ರದ್ಧಾ ಕೇಂದ್ರಗಳನ್ನು ಅನೈರ್ಮಲ್ಯ ತಾಣವಾಗುವಂತೆ ಮಾಡಿದ್ದವು, ನರೇಂದ್ರಮೋದಿ ಪ್ರಧಾನಿಯಾದ ಮೇಲೆ ಹಿಂದೂಗಳ ಶ್ರದ್ಧಾ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಂಡು ಕಾಶಿ ವಿಶ್ವನಾಥನ ಸನ್ನಿಧಿಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಇದೀಗ ದಿವ್ಯಕಾಶಿ ಭವ್ಯಕಾಶಿ ಅಕ್ಷರಶಃ ಸತ್ಯವಾಗುವಂತೆ ಮಾಡಿ ತೋರಿಸಿದ್ದಾರೆ ಎಂದರು.
ಚಾರ್ ಧಾಮ್‌ ಯಾತ್ರೆಯ ಸುಸೂತ್ರತೆಗಾಗಿ ಉತ್ತಮ ರಸ್ತೆಗಳ ಅಭಿವೃದ್ಧಿಗೊಳಿಸಿದ್ದು, ಅಯೋಧ್ಯೆಯ ರಾಮಮಂದಿರ ನಿರ್ಮಾಣವೂ ಭರದಿಂದ ಸಾಗುವಂತೆ ಮಾಡಿದ್ದಾರೆ. ದೇವಾಲಯಗಳು ಧಾರ್ಮಿಕ ಸಂಸ್ಕೃತಿ, ಸಂಸ್ಕಾರಗಳ ಪವಿತ್ರ ತಾಣವಾಗಿದೆ. ಯಾವುದೇ ದೇಶದ ಜನತೆಯಲ್ಲಿ ಧಾರ್ಮಿಕ ಸಂಸ್ಕಾರ, ಸಂಸ್ಕೃತಿ ಭಾವನೆಗಳು ವೃದ್ಧಿಗೊಂಡಲ್ಲಿ ಅದು ದೇಶದ ಸರ್ವತೋಮುಖ ಪ್ರಗತಿಗೆ ಸಹಕಾರಿಯಾಗುತ್ತದೆ, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ದೇಶವೂ ಧಾರ್ಮಿಕ ರಂಗ ಸೇರಿದಂತೆ ಎಲ್ಲಾ ರಂಗಗಳಲ್ಲೂ ಉತ್ತಮ ಸಾಧನೆ ಮಾಡುವಂತೆ ಶ್ರಮಿಸುತ್ತಿದ್ದಾರೆ ಎಂದರು.
ಬಿಜೆಪಿಮುಖಂಡ, ಅಖಿಲಭಾರತೀಯ ಚಾರ್ಟೆಡ್‌ ಅಕೌಂಟೆಂಟ್‌ ಸಂಘದ ಅಧ್ಯಕ್ಷ ಪ್ರಸಾದ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ದೂರದೃಷ್ಟಿಯಿಂದ ಕ್ರಮ ಕೈಗೊಳ್ಳುತ್ತಿದ್ದು, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯೂ ಸಹ ಜನರ ಭಾವನೆಗಳನ್ನು ಗೌರವಿಸುವ ಕಾರ್ಯವಾಗುವ ಜೊತೆಯಲ್ಲಿ ಜನತೆಯು ಗೌರವಿಸುವ ಧಾರ್ಮಿಕತೆ ತಾಣಗಳನ್ನು ಅಭಿವೃದ್ಧಿಗೊಳಿಸುತ್ತಿರುವುದರಿಂದ ಜನತೆಗೆ ಹತ್ತಿರವಾಗುತ್ತಿದ್ದಾರೆ ಎಂದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜು, ದಿಲೀಪ್ ಗೌಡ, ಪ್ರಮುಖರಾದ ರೇಣುಕಪ್ಪ, ಸುರೇಶ್‌, ಗೌರಮ್ಮ, ರೂಪಾ, ಸುನಿಲ್‌, ಗೋಪಿಇತರರು ಇದ್ದರು. ಕಾರ್ಯಕ್ರಮದಲ್ಲಿ ದಿವ್ಯಕಾಶಿ- ಭವ್ಯಕಾಶಿಯ ದೂರದರ್ಶನದ ನೇರಪ್ರಸಾರದ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!