ಕುಣಿಗಲ್: ರೌಡಿ ಶೀಟರ್ ಗಳು ಸನ್ನಡೆಯಿಂದ ನಡೆದುಕೊಂಡು ಸಾಮಾಜಿಕ ಜೀವನದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ಜೀವನ ನಡೆಸಿದಲ್ಲಿ ರೌಡಿಶೀಟರ್ ಪಟ್ಟಯಿಂದ ಕೈಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಡಿ.ಎಲ್.ರಾಜು ಹೇಳಿದರು.
ಸೋಮವಾರ ಕುಣಿಗಲ್ ಪೊಲೀಸ್ ಠಾಣಾವರಣದಲ್ಲಿ ನಡೆದ ರೌಡಿ ಶೀಟರ್ ಗಳ ಪೆರೇಡ್ ನಲ್ಲಿ ಮಾತನಾಡಿ, ಕಳೆದ ಕೆಲವಾರು ವರ್ಷಗಳಿಂದ ಸನ್ನಡತೆ ಆಧಾರದ ಮೇಲೆ ಹಲವಾರು ಮಂದಿಯನ್ನು ರೌಡಿಶೀಟರ್ ನಿಂದ ಕೈ ಬಿಡಲಾಗಿದೆ. ಇವರನ್ನು ಯಾವುದೋ ಒತ್ತಡಕ್ಕೆ ಕೈ ಬಿಟ್ಟಿಲ್ಲ, ಅವರು ಜವಾಬ್ದಾರಿಯುತ ನಾಗರಿಕರಾಗಿ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದ ಕಾರಣ ಕೈ ಬಿಡಲಾಗಿದೆ, ಹಾಲಿ ಪಟ್ಟಿಯಲ್ಲಿರುವವರು ಸಹ ಎಚ್ಚರ ವಹಿಸಿ ನಡೆದುಕೊಳ್ಳಬೇಕಿದೆ. ಕೆಲವರು ಗಾಂಜಾ ಮಾರಾಟ ಭಾಗಿಯಾದರೆ, ಇನ್ನು ಕೆಲವರು ಗಲಾಟೆಗಳಲ್ಲಿ ಪಾಲ್ಗೊಂಡು ಅಶಾಂತ ವಾತವರಣಕ್ಕೆ ಕಾರಣವಾಗುತ್ತಿದ್ದಾರೆ. ಇಂತಹ ಬೆಳವಣಿಗೆ ಸಹಿಸುವುದಿಲ್ಲ, ವಿನಾಕಾರಣ ತೊಂದರೆ ಮಾಡಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಿ, ಗಡಿಪಾರು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ರೌಡಿಶೀಟರ್‌ಗಳಿಂದ ಯಾವುದೇ ರೀತಿ ಜನಸಾಮಾನ್ಯರಿಗೆ ತೊಂದರೆಯಾಗಬಾರದು, ಆ ರೀತಿ ನಡೆದುಕೊಂಡಲ್ಲಿ ಅಂತಹವರ ಮೇಲೆ ತಕ್ಕ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಲ ರೌಡಿಶೀಟರ್ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರುವ ಮಾಹಿತಿ ಬಂದಿದ್ದು, ಅಂತಹವರಿಗೆ ಖಡಕ್ ಎಚ್ಚರಿಕೆ ನೀಡಿ, ಸುಧಾರಿಸದೆ ಇದ್ದಲ್ಲಿ ಕಠಿಣ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ರೌಡಿ ಶೀಟರ್ ಗಳು ಬದಲಾಗದಿದ್ದರೆ ಕಠಿಣ ಕ್ರಮ
Get real time updates directly on you device, subscribe now.
Prev Post
Comments are closed.