ಸಿರಾಸೀಮೆ ಸಾಂಸ್ಕೃತಿಕ ವೇದಿಕೆ:ಇಂದಿನಿಂದ 2ದಿನದ ನಾಟಕೋತ್ಸವ

343

Get real time updates directly on you device, subscribe now.

ಶಿರಾ: ಸಿರಾಸೀಮೆ ಸಾಂಸ್ಕೃತಿಕ ವೇದಿಕೆಯಿಂದ ಡಿ. 14ರಿಂದ ಎರಡು ದಿನದ ನಾಟಕೋತ್ಸವ ಏರ್ಪಡಿಸಲಾಗಿದೆ.
ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಡಿ. 14 ರಂದು ಮಂಗಳವಾರ ಸಂಜೆ 7.30ಕ್ಕೆ ರಾಜೇಂದ್ರ ಕಾರಂತರ ಹಾಸ್ಯ ನಾಟಕ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ರಂಗ ಪ್ರದರ್ಶನದ ಮೂಲಕ ನಾಟಕೋತ್ಸವ ಚಾಲನೆಯಾಗಲಿದೆ ಎಂದು ಸಿರಾಸೀಮೆ ಸಾಂಸ್ಕೃತಿಕ ವೇದಿಕೆಯ ಗೋಮಾರದಹಳ್ಳಿ ಮಂಜುನಾಥ್ ತಿಳಿಸಿದ್ದಾರೆ.
ಡಿ. 15 ಬುಧವಾರ ಸಂಜೆ 7.30ಕ್ಕೆ ಆದಿಕವಿ ಪಂಪನ ಆದಿಪುರಾಣ ಗ್ರಂಥದಿಂದ ಆಯ್ದ ಭಾಗ ‘ಬಾಹುಬಲಿ ವಿಜಯಂ’ ರಂಗ ಪ್ರದರ್ಶನ ನಡೆಯಲಿದೆ.
ಬಳ್ಳಾರಿ ಜಿಲ್ಲೆ ಸಿರಿಗೇರಿಯ ‘ಧಾತ್ರಿ ರಂಗ ಯಾತ್ರೆ’ ತಂಡ ಪ್ರದರ್ಶಿಸುವ ಈ ಎರಡು ನಾಟಕಗಳಲ್ಲಿ ಪ್ರತಿಷ್ಠಿತ ನೀನಾಸಂ, ಸಾಣೆಹಳ್ಳಿ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದ ಕಲಾವಿದರು ಅಭಿನಯಿಸಲಿದ್ದಾರೆ.
ಈಗಾಗಲೇ ರಾಜ್ಯದ ಹಲವೆಡೆ ಪ್ರದರ್ಶನವಾಗಿರುವ ಈ ನಾಟಕಗಳು ಮನೋರಂಜನೆ ಜತೆಗೆ ಮನೋ ವಿಕಾಸಕ್ಕೆ ಪೂರಕವಾಗಿವೆ. ಎರಡು ಪ್ರದರ್ಶನಗಳು ಉಚಿತವಾಗಿದ್ದು, ಕುಟುಂಬ ಸಮೇತರಾಗಿ ಆಗಮಿಸಿ ಪ್ರದರ್ಶನ ವೀಕ್ಷಿಸಲು ಸಿರಾಸೀಮೆ ಸಾಂಸ್ಕೃತಿಕ ವೇದಿಕೆ ಮಂಜುನಾಥ್ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!