ಅಧಿಕಾರಕ್ಕಿಂತ ಜನರ ಪ್ರೀತಿ ವಿಶ್ವಾಸ ಮುಖ್ಯ: ರಾಜೇಂದ್ರ

253

Get real time updates directly on you device, subscribe now.

ಮಧುಗಿರಿ: ಅಧಿಕಾರಕ್ಕಿಂತ ಜನರ ಪ್ರೀತಿ ವಿಶ್ವಾಸ ಮುಖ್ಯ, ಇದು ನನ್ನೊಬ್ಬನ ಗೆಲುವಲ್ಲ, ಪ್ರತಿಯೊಬ್ಬ ಕಾಂಗ್ರೆಸ್‌ ಕಾರ್ಯಕರ್ತನ ಗೆಲುವು ಎಂದು ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ರಾಜಣ್ಣ ತಿಳಿಸಿದರು.
ನೂತನವಾಗಿ ವಿಧಾನ ಪರಿಷತ್ ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಐತಿಹಾಸಿಕ ಶ್ರೀದಂಡಿನಮಾರಮ್ಮ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ತಂದೆ ಮಗ ಮಾತ್ರ ಓಡಾಡುತ್ತಿದ್ದಾರೆ ಎಂದು ಟೀಕಿಸಿದ ವಿರೋಧಿಗಳಿಗೆ ಮತದಾರರು ತಕ್ಕ ಉತ್ತರ ನೀಡಿದ್ದು, ಜಿಲ್ಲೆಯಲ್ಲಿ ಡಾ.ಜಿ.ಪರಮೇಶ್ವರ್‌ ಮತ್ತು ಟಿ.ಬಿ.ಜಯಚಂದ್ರ ಅವರ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ನಾಯಕರೆಲ್ಲ ಒಗ್ಗಟ್ಟು ಪ್ರದರ್ಶಿಸಿ, ನನ್ನ ಗೆಲುವಿಗೆ ಟೊಂಕ ಕಟ್ಟಿ ಶ್ರಮ ವಹಿಸಿದ್ದು, ಅವರೆಲ್ಲರಿಗೂ ಅಭಾರಿಯಾಗಿದ್ದೇನೆ ಎಂದರು.
ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದ್ದು, ಜಿಲ್ಲೆಯಿಂದ ಕನಿಷ್ಠ 9 ಜನ ಶಾಸಕರನ್ನು ಆರಿಸಿ ಕಳುಹಿಸಬೇಕಿದ್ದು, ಇದಕ್ಕಾಗಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಸಂಚರಿಸಿ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಹಿರಿಯ ನಾಯಕರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಈ ಒಗ್ಗಟ್ಟು ಇಲ್ಲಿಗೆ ಕೊನೆಯಾಗಬಾರದು, ಮಧುಗಿರಿ ತಾಲೂಕಿನ ಕಾರ್ಯಕರ್ತರು ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಇದೇ ಒಗಟ್ಟನ್ನು ಪ್ರದರ್ಶಿಸಿ ಕೆ.ಎನ್‌.ರಾಜಣ್ಣ ನವರ ಗೆಲುವಿಗೆ ಶ್ರಮ ವಹಿಸಬೇಕಿದೆ ಎಂದರು.
ನಾನು ಎಂಎಲ್‌ಸಿ ಆಗಿ ಆಯ್ಕೆಯಾದ ಮಾತ್ರಕ್ಕೆ ವಿಶೇಷ ವ್ಯಕ್ತಿಯಂತೆ ನೋಡಬೇಕಾಗಿಲ್ಲ, ಕಾರ್ಯಕರ್ತರು ನನಗೆ ಹಿಂದೆ ಯಾವ ರೀತಿ ಪ್ರೀತಿ ವಿಶ್ವಾಸ ತೋರುತ್ತಿದ್ದರೋ, ಅದೆ ರೀತಿ ನೋಡಿ, ನಾನು ನಿಮ್ಮೆಲ್ಲರ ಸೇವಕನಂತೆ ಕೆಲಸ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಶಾಂತಲ ರಾಜಣ್ಣ, ರಾಜ್ಯ ಸಹಕಾರ ಮಹಾಂಮಡಲದ ಮಾಜಿ ಅಧ್ಯಕ್ಷ ಎನ್‌.ಗಂಗಣ್ಣ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯಕ್, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿ.ನಾಗೇಶ್‌ ಬಾಬು, ಯುವ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಡಿ.ಕೆ.ವೆಂಕಟೇಶ್‌, ಪುರಸಭೆ ಅಧ್ಯಕ್ಷ ತಿಮ್ಮರಾಜು, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಎಂ.ಎಸ್‌.ಚಂದ್ರಶೇಖರ್‌, ಎಂ.ವಿ.ಗೋವಿಂದರಾಜು, ಅಲೀಂ, ನಟರಾಜು, ಲಾಲಪೇಟೆ ಮಂಜುನಾಥ್‌, ಎಂ.ವಿ.ಮಂಜುನಾಥ್‌ ಅಚಾರ್‌, ಪಾರ್ವತಮ್ಮ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಎಸ್‌.ಆರ್‌.ರಾಜಗೋಪಾಲ್‌, ಮುಖಂಡರಾದ ಎಚ್‌.ಸಿ.ಬೈರಪ್ಪ, ಸುವರ್ಣಮ್ಮ, ವಿ.ಆರ್‌, ಭಾಸ್ಕರ್‌, ಸಾದಿಕ್‌, ಆದಿನಾರಾಯಣರೆಡ್ಡಿ, ಗೋಪಾಲಯ್ಯ, ನರಸಿಂಹರೆಡ್ಡಿ, ತಿಮ್ಮಾರೆಡ್ಡಿ, ಬಿ.ಎನ್‌.ನಾಗರ್ಜುನ, ದೀಪು ಹೊನ್ನಾಪುರ ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!