ತುಮಕೂರು: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಪ್ರಸ್ತಾಪಿತ ನೋಟರಿ ಕಾಯ್ದೆಗೆ ಆಕ್ಷೇಪಣೆಯನ್ನು ತುಮಕೂರು ಜಿಲ್ಲಾ ನೋಟರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತುಮಕೂರು ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷ ಹೆಚ್.ಕೆ.ವಿ.ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಹೆಚ್.ವಿ.ವೆಂಕಟೇಶ್ ಅವರುಗಳ ನೇತೃತ್ವದಲ್ಲಿ ಹತ್ತಾರು ನೋಟರಿಗಳು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಮ್ಮ ಆಕ್ಷೇಪಣೆ ಸಲ್ಲಿಸಲಿದರು.
ಈ ವೇಳೆ ಮಾತನಾಡಿ ತುಮಕೂರು ಜಿಲ್ಲಾ ನೋಟರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಹೆಚ್.ವೆಂಕಟೇಶ, ಕೇಂದ್ರ ಸರಕಾರ ನೋಟರಿಸ್ ಆಕ್ಟ್ 1952ಕ್ಕೆ ತಿದ್ದುಪಡಿ ತರಲು ದಿ ನೋಟರಿಸ್ ಆಕ್ಟ್ -2021 ನ್ನು ಪ್ರಾಸ್ತಾಪಿಸಿದೆ, ಸದರಿ ಪ್ರಾಸ್ತಾವನೆಯಲ್ಲಿ ನೋಟರಿಯಾಗಿ ಕೆಲಸ ಮಾಡುವವರಿಗೆ 15 ವರ್ಷ ಕಾಲಮಿತಿ ನಿಗದಿ ಪಡಿಸಲು ಮುಂದಾಗಿದೆ. ಇದರಿಂದ ಲಕ್ಷಾಂತರ ಜನ ನೋಟರಿ ವಕೀಲರಿಗೆ ತೀವ್ರ ತೊಂದರೆಯಾಗುತ್ತದೆ, ಕೊರೊನ ಮತ್ತಿತರರ ಸಂಕಷ್ಟಗಳಿಂದ ನೋಟರಿ ವಕೀಲರು ದಿನಕ್ಕೆ 300- 400 ರೂ. ದುಡಿಯುವುದು ಕಷ್ಟವಾಗಿದೆ. ಹೀಗಿರುವಾಗ 15 ವರ್ಷಕ್ಕೆ ನಿಗದಿಗೊಳಿಸಿದರೆ ಈ ಕಾರ್ಯ ನಿರ್ವಹಿಸುತ್ತಿರುವ ವಕೀಲರ ಪಾಡೇನು ಎಂದು ಪ್ರಶ್ನಿಸಿದರು.
ನೋಟರಿಗಳಾಗಿ ಕೆಲಸ ಮಾಡಬೇಕೆಂದರೆ ಕನಿಷ್ಠ 10 ವರ್ಷಗಳ ಕಾಲ ವಕೀಲರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ, ಒಮ್ಮೆ ನೋಟರಿಗಳಾಗಿ ಕಾರ್ಯ ಆರಂಭಿಸಿದರೆ ವಕೀಲರಾಗಿ ಕಾರ್ಯ ನಿರ್ವಹಿಸಲು ಕಷ್ಟ, ಎರಡು ಕಡೆಗಳಲ್ಲಿ ಒತ್ತಡ ಹೆಚ್ಚಿರುತ್ತದೆ, ಇಂತಹ ವೇಳೆಯಲ್ಲಿ ನೋಟರಿಗಳಾಗಿ 15 ವರ್ಷ ಮಾತ್ರ ಸೇವೆ, ಅಲ್ಲದೆ ಒಂದು ವೇಳೆ ತಾವು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ತಪ್ಪು ಮಾಡಿದರೆ ನೋಟರಿಯಿಂದ ತೆಗೆಯುವ ಪ್ರಸ್ತಾಪ ಮುಂದಿಟ್ಟಿದೆ, ಇದನ್ನು ವಿರೋಧಿಸಿ ಇಡೀ ದೇಶದಾದ್ಯಂತ ನೋಟರಿ ವಕೀಲರು ತಮ್ಮ ಕೆಲಸ ಸ್ಥಗಿತಗೊಳಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ, ಒಂದು ವೇಳೆ ಸರಕಾರ ನಮ್ಮ ಮನವಿಗೆ ಸ್ಪಂದಿಸಿ ವಯಸ್ಸಿನ ಮಿತಿ ತಿದ್ದುಪಡಿ ವಿಧೇಯಕದಿಂದ ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡಸಲಾಗುವುದು ಎಂದು ಟಿ.ಹೆಚ್.ವೆಂಕಟೇಶ್ ತಿಳಿಸಿದರು.
ಈ ವೇಳೆ ನೋಟರಿಗಳಾದ ಎನ್.ಬಸವರಾಜು, ವೆಂಕಟೇಶ್, ಶಿವರಾಮ್, ರಾಮಚಂದ್ರಪ್ಪ, ತಿಪ್ಪಣ್ಣ, ನಿಸಾರ್ ಅಹಮದ್, ರಮೇಶ್ನಾಯ್ಕ್, ಮಲ್ಲಿಕಾರ್ಜುನ್, ಸುಧಾಮಣಿ, ಭಾರತಿ, ವೀಣಾಲಕ್ಷ್ಮಿ, ಮಮತ ಸೇರಿದಂತೆ ಹಲವರು ಇದ್ದರು.
ನೋಟರಿ ಆಕ್ಟ್ ತಿದ್ದುಪಡಿಗೆ ವಿರೋಧ
Get real time updates directly on you device, subscribe now.
Prev Post
Next Post
Comments are closed.