ಕಾವೇರಿ ಉತ್ಸವ ಬಿಜೆಪಿ ಕಾರ್ಯಕ್ರಮನಾ?

ಶಾಸಕರ ಗಮನಕ್ಕೆ ಬಾರದೆ ಪ್ರೋಗ್ರಾಂ- ಡಾ.ರಂಗನಾಥ್‌ ಕಿಡಿ

126

Get real time updates directly on you device, subscribe now.

ಕುಣಿಗಲ್‌: ಶಾಸಕರ ಗಮನಕ್ಕೆ ಬಾರದೆ ಜಿಲ್ಲಾಧಿಕಾರಿಗಳು ಹಮ್ಮಿಕೊಂಡಿರುವ ಕಾವೇರಿ ಉತ್ಸವ ಕಾರ್ಯಕ್ರಮ ಬಿಜೆಪಿ ಕಾರ್ಯ ಕ್ರಮವೋ, ಸರ್ಕಾರದ ಕಾರ್ಯಕ್ರಮವೋ ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಶಾಸಕ ಡಾ.ರಂಗನಾಥ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ವ್ಯಾಪ್ತಿಯಲ್ಲಿ 19 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿಗಳ ಬಗ್ಗೆ ನಮಗೆ ಗೌರವ ಇದೆ, ಆದರೆ ಜಿಲ್ಲಾಧಿಕಾರಿಗಳು ಶಾಸಕರ ಗಮನಕ್ಕೆ ಬಾರದೆ ಎಡೆಯೂರು ಸಮೀಪದ ಶಿಂಷಾ ನದಿ ತೀರದಲ್ಲಿ ಕಾವೇರಿ ಉತ್ಸವ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ. ಕುಣಿಗಲ್‌ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮ ಕೈಗೊಳ್ಳುವಾಗ ಇಲ್ಲಿನ ಶಾಸಕರು, ಸಂಸದರನ್ನು ಕನಿಷ್ಟ ಸೌಜನ್ಯಕ್ಕೂ ಪರಿಗಣಿಸದೆ ಏಕಾಏಕಿ ಕಾರ್ಯಕ್ರಮ ಸಿದ್ಧತೆ ಬಗ್ಗೆ ಪ್ರಕಟಣೆ ಮಾಡಿರುವ ಜಿಲ್ಲಾಧಿಕಾರಿಗಳ ಕ್ರಮಕ್ಕೆ ನಮ್ಮ ಧಿಕ್ಕಾರ ಎಂದ ಶಾಸಕರು, ಬಿಜೆಪಿ ಸರ್ಕಾರದಲ್ಲಿ ಶಾಸಕರ ಬಗ್ಗೆ ಗೌರವ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ, ಇದು ಖಂಡನೀಯ, ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ಕಾರ್ಯಕ್ರಮ ಮುಂದೂಡಿರುವುದಾಗಿ ಹೇಳಿದ್ದಾರೆ, ಜಿಲ್ಲಾಧಿಕಾರಿಗಳ ಈ ಕ್ರಮ ಖಂಡನೀಯ ಎಂದರು.
ದೊಡ್ಡಪೇಟೆಯಲ್ಲಿ ಮುಖ್ಯರಸ್ತೆ ಅಭಿವೃದ್ಧಿಗೆ ಚಾಲನೆ ನೀಡುವ ಹಂತದಲ್ಲಿ 9ನೇ ವಾರ್ಡ್‌ ಸದಸ್ಯ ಕೃಷ್ಣ, ಚರಂಡಿ ಮಾಡದೆ ರಸ್ತೆ ಅಭಿವೃದ್ಧಿ ಮಾಡಿದಲ್ಲಿ ಪ್ರಯೋಜವಿಲ್ಲ, ಚರಂಡಿಗೆ ಹೆಚ್ಚುವರಿ ಎರಡುವರೆ ಲಕ್ಷ ರೂ. ಅನುದಾನ ನೀಡಬೇಕೆಂದು ಆಗ್ರಹಿದರು. ಸದಸ್ಯರ ಮನವಿಗೆ ಸ್ಪಂದಿಸಿದ ಶಾಸಕರು, ಹೆಚ್ಚುವರಿ ಅನುದಾನ ನೀಡುವುದಾಗಿ ಭರವಸೆ ನೀಡಿ, ಬಿಜೆಪಿ ಸರ್ಕಾರ ಪಟ್ಟಣ ಸೇರಿದಂತೆ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಮಂಜೂರು ಮಾಡಿದ್ದನ್ನು ತಡೆಹಿಡಿದಿದೆ ಅದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇನೆ ಎಂದ ಅವರು, ಕೊವಿಡ್‌ ನಂತರ ಸಾರಿಗೆ ಬಸ್ ಸಮರ್ಪಕ ಸಂಚಾರಕ್ಕೂ ಒತ್ತಾಯ ಮಾಡಲಾಗಿದೆ, ಪಟ್ಟಣದಲ್ಲಿ 600 ನಿವೇಶನ ವ್ಯವಸ್ಥೆ ಮಾಡಿದ್ದು ಶೀಘ್ರದಲ್ಲೆ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು, 10 ವರ್ಷಗಳ ಹಿಂದೆ ಅಂದಿನ ಶಾಸಕರು ವಿತರಿಸಿದ್ದ ಹಕ್ಕುಪತ್ರದ ಮಾನ್ಯತೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ತಾಂತ್ರಿಕ ದೋಷವಾಗದಂತೆ ಎಲ್ಲಾ ಅಗತ್ಯ ಎಚ್ಚರಿಕೆ ವಹಿಸಿ ಸೂಕ್ತ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಸದಸ್ಯರಾದ ರಂಗಸ್ವಾಮಿ, ನಾಗೇಂದ್ರ, ಕೃಷ್ಣ, ರಾಮು, ಅರುಣಕುಮಾರ, ಶ್ರೀನಿವಾಸ, ದೇವರಾಜ, ಅಸ್ಮ, ಮಂಜುಳಾ, ಜಯಲಕ್ಷ್ಮೀ, ಮುಖಂಡರಾದ ಸತೀಶ, ಲೋಹಿತ್‌,ರಂಗಣ್ಣಗೌಡ, ಪಾಪಣ್ಣ, ಮುಖ್ಯಾಧಿಕಾರಿ ರವಿಕುಮಾರ, ಸಿಬ್ಬಂದಿ ಬಿಂದುಸಾರ, ಜಗರೆಡ್ಡಿ, ಭೈರಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!