ಕೋವಿಡ್ ನಿಂದ ಮೃತರಾದ ಕುಟುಂಬಕ್ಕೆ ಪರಿಹಾರ ವಿತರಣೆ

ರೂಪಾಂತರಿ ವೈರಸ್ ನಿಂದ ಆತಂಕ ಬೇಡ, ಎಚ್ಚರಿಕೆ ಅಗತ್ಯ: ಸಚಿವ ಬಿ.ಸಿ.ನಾಗೇಶ್

439

Get real time updates directly on you device, subscribe now.

ತಿಪಟೂರು: ರೂಪಾಂತರಿ ವೈರಸ್ ಬಗ್ಗೆ ಆತಂಕ ಪಡಬೇಕಿಲ್ಲ ಎಚ್ಚರಿಕೆ ಅಗತ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದ ಮಿನಿ ವಿಧಾನಸೌಧ ಒಳಾಂಗಣದಲ್ಲಿ ಕೋವಿಡ್ ನಿಂದ ಮೃತಪಟ್ಟ ತಾಲ್ಲೂಕಿನ 66 ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಧಿಯಿಂದ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿದು.
ತಾಲ್ಲೂಕಿನ ಅತಿವೃಷ್ಟಿ ಮಳೆಯಿಂದ ಸೂರು ಕಳೆದುಕೊಂಡ 104 ಫಲಾನುಭವಿಗಳಿಗೆ ಮನೆ ನಿರ್ಮಿಸಲು ಸ್ಥಳದಲ್ಲಿಯೇ 96 ಸಾವಿರ ಚೆಕ್ ವಿತರಣೆ ಮಾಡಿದರು. ಇಡೀ ಪ್ರಪಂಚ ಕೋವಿಡ್ ನಿಂದ ತತ್ತರಿಸಿ ಜೀವ ಮತ್ತು ಜೀವನ ಕಳೆದುಕೊಂಡು ಸಂಬಂಧಗಳನ್ನು ದೂರ ಮಾಡಿದ ಸಂದರ್ಭ ಜನತೆ ಮರೆಯುವಂತಿಲ್ಲ ಇಂತಹ ಸಂದರ್ಭದಲ್ಲಿ ಹೊರದೇಶಗಳಿಗೆ ಮಾತೃ ದೇಶವನ್ನು ಹೋಲಿಸಿದಾಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅರಿತು 106 ಕೋಟಿ ಜನಸಂಖ್ಯೆಗೆ ಉಚಿತವಾಗಿ ಲಸಿಕೆ ನೀಡಿ ಜಗತ್ತಿಗೆ ವಿಶ್ವಗುರು ಎನಿಸಿಕೊಂಡರು.
ಮೂರನೇ ಅಲೆಗೆ ಭಯಪಡುವ ಪ್ರಮೇಯವೇ ಬರದಂತೆ ಲಸಿಕೆ ನೀಡಿ ಜಾಗೃತಿ ಮೂಡಿಸಿದ್ದು ವಿಶೇಷ. ಈ ಸಮಯದಲ್ಲಿ ಅತಿವೃಷ್ಟಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಸ್ಥಳದಲ್ಲಿ ತಾತ್ಕಾಲಿಕ ಪರಿಹಾರದ ಚೆಕ್ ವಿತರಿಸಲಾಯಿತು. ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿ ಕೆರೆಕಟ್ಟೆ ತುಂಬಿದವು ಎಂಬುದು ಒಂದೆಡೆ ಸಂತೋವಾದರೆ ಮತ್ತೊಂದು ಕಡೆ ತಾವು ವಾಸಿಸುವ ಮನೆ ಕುಸಿದು ಬಿದ್ದಿರುವ ದುಃಖದ ವಿಚಾರ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಕಷ್ಟಕ್ಕೆ ಸ್ಪಂದಿಸಿ 5 ಲಕ್ಷ ಪರಿಹಾರ ಒದಗಸಿಲಾಗಿದೆ ಎಂದರು.
`ಎ’ ಕೆಟಗರಿಯಲ್ಲಿ ಪೂರ್ಣಪ್ರಮಾಣದ ಮನೆ ಬಿದ್ದಿದ್ದು ಹೊಸದಾಗಿ ಗ್ರಾಮ ಪಂಚಾಯಿತಿಯಿಂದ ಜಿಪಿಎಸ್ ಮಾಡಿಸಿ ಕಟ್ಟುವವರಿಗೆ 5 ಲಕ್ಷ ಪರಿಹಾರ ನೀಡುತ್ತೇವೆ, ಅದೇ ರೀತಿ `ಬಿ’ ಕೆಟಗರಿಯಲ್ಲಿ ಕಟ್ಟುವವರಿಗೆ 3 ಲಕ್ಷ ಪರಿಹಾರ ನೀಡುತ್ತೇವೆ ಮನೆಯ ಗೋಡೆಗಳು ಬಿದ್ದರೆ ಸರಿಪಡಿಸಲು 1 ಲಕ್ಷ ನೀಡಲಾಗುತ್ತದೆ ಎಂದು ತಿಳಿಸಿದರು, ಸರ್ಕಾರ ನೀಡುವ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಚಂದ್ರಶೇಖರ್, ಪೌರಾಯುಕ್ತ ಉಮಾಕಾಂತ್, ಗ್ರೇಡ್-2 ತಹಶೀಲ್ದಾರ್ ಜಗನ್ನಾಥ್, ಸಿಡಿಪಿಓ ಓಂಕಾರ್ ಮೂರ್ತಿ, ನಗರಸಭೆ ಅಧ್ಯಕ್ಷ ರಾಮ್ ಮೋಹನ್, ನಗರಸಭೆ ಸದಸ್ಯರಾದ ಓಹಿಲಾ ಗಂಗಾಧರ್, ಪ್ರಸನ್ನ, ಮಾಜಿ ನಗರಸಭಾ ಸದಸ್ಯರಾದ ತರಕಾರಿ ಗಂಗಾಧರ್, ಲೋಕೇಶ್ ಹಾಗೂ ಅಧಿಕಾರಿಗಳು ಹಾಜರಿದ್ದರು.

ಫಲಾನುಭವಿಗಳಿಗೆ ಕಿವಿಮಾತು…
ಕೋವಿಡ್ ಸಂದರ್ಭದಲ್ಲಿ ಯಾರು ಸಹ ನಿಮ್ಮ ಕಷ್ಟಕ್ಕೆ ಸ್ಪಂದಿಸಲಿಲ್ಲ. ಸಾವು-ನೋವುಗಳ ಆದಾಗ ಯಾರು ತಿರುಗಿ ನೋಡಲಿಲ್ಲ, ಈಗ ಹಣ ಬಂದಾಗ ಹಣಕೊಡಿ ನಿನಗೆ ಬಡ್ಡಿ ಕೊಡುತ್ತೇನೆ ಎಂದು ನಂಬಿಸಿ ಕೇಳಿದರೆ ದಯವಿಟ್ಟು ಕೊಡಬೇಡಿ ನಿಮ್ಮ ಮನೆಯ ಕಷ್ಟ-ಸುಖಕ್ಕೆ ಉಪಯೋಗಿಸಿಕೊಳ್ಳಿ ಎಂದು ಕೂರೂನ ರೋಗದಿಂದ ಮೃತಪಟ್ಟ ಕುಟುಂಬದವರಿಗೆ ವಿತರಿಸಿ ಮಾತನಾಡಿದರು.

Get real time updates directly on you device, subscribe now.

Comments are closed.

error: Content is protected !!