ತುಮಕೂರು: ವಿನಾಯಕ ನಗರದ 3ನೇ ಕ್ರಾಸ್ ನಲ್ಲಿರುವ ಶ್ರೀಸಿದ್ದಿವಿನಾಯಕ ಸೇವಾ ಮಂಡಳಿಯ 2020-21ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷ ಜಿ.ಹೆಚ್. ಪರಮಶಿವಯ್ಯ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಗಣೇಶೋತ್ಸವವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಸಲು ಸಾಧ್ಯವಾಗಿಲ್ಲ, ಆದರೆ ಕೊರೊನಾ ಸಂಕಷ್ಟ ಸಮಯ ಸಂಪೂರ್ಣವಾಗಿ ಮುಗಿದ ನಂತರ ಯಥಾಪ್ರಕಾರ ಗಣೇಶೋತ್ಸವ ನಡೆಸಲು ಮಂಡಳಿ ಸಿದ್ಧವಿದೆ ಎಂದರು.
ಸಮುದಾಯ ಭವನದ ಅಭಿವೃದ್ಧಿಗೆ ಮಂಡಳಿ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ. ಬಹಳಷ್ಟು ದುರಸ್ಥಿ ಕಾರ್ಯದ ಅಗತ್ಯವಿದ್ದು, ಅದನ್ನೆಲ್ಲ ಪೂರ್ಣಗೊಳಿಸಿ, ಸಮುದಾಯ ಭವನದಲ್ಲಿ ನಡೆಯಲಿರುವ ಶುಭ ಕಾರ್ಯಗಳು, ವಿವಾಹ ಮಹೋತ್ಸವಗಳಿಗೆ ಅನುವು ಮಾಡಿಕೊಡಲಾಗುವುದು ಎಂದರು .
ಸಮುದಾಯ ಭವನದಲ್ಲಿ ಆವರಣದಲ್ಲಿ ರಸ್ತೆ ಡಾಂಬರೀಕರಣ ಮಾಡಲು ಸಹ ಮಂಡಳಿ ಮುಂದಾಗಿದೆ ಎಂದರು.
ಸಮುದಾಯ ಭವನದಲ್ಲಿ ಸರ್ವತೋಮುಖ ಅಭಿವೃದ್ಧಿಗೊಳಿಸುವಂತೆ ವಾರ್ಷಿಕ ಸಭೆಯಲ್ಲಿ ನಿರ್ದೇಶಕರು ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ನಾಗೇಶ್ ಹೆಚ್.ಆರ್., ಕಾರ್ಯದರ್ಶಿ ರಾಘವೇಂದ್ರರಾವ್, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಣ್ಣ ಸೇರಿದಂತೆ ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು.
ಯಥಾಪ್ರಕಾರ ಗಣೇಶೋತ್ಸವಕ್ಕೆ ಸಿದ್ಧ
Get real time updates directly on you device, subscribe now.
Next Post
Comments are closed.