ಘನ ತ್ಯಾಜ್ಯ ಘಟಕ ಬೇರೆಡೆ ಸ್ಥಳಾಂತರಿಸಿ

259

Get real time updates directly on you device, subscribe now.


ಕುಣಿಗಲ್: ಗ್ರಾಮದ ಸಮೀಪ ಸ್ಥಾಪಿಸಲು ಉದ್ದೇಶಿಸಿರುವ ಘನ ತ್ಯಾಜ್ಯ ಘಟಕ ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಟಭಟನೆ ನಡೆಸಿ ಗ್ರಾಪಂ ಅಧ್ಯಕ್ಷರನ್ನು ಒತ್ತಾಯಿಸಿದ ಘಟನೆ ಎಡೆಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಧುರೆ ಗ್ರಾಮದಲ್ಲಿ ನಡೆದಿದೆ.
ಎಡೆಯೂರು ಗ್ರಾಮ ಪಂಚಾಯಿತಿಯ ಘನತ್ಯಾಜ್ಯ ವಿಲೇವಾರಿ, ಸಂಸ್ಕರಣ ಘಟಕವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮಧುರೆ ಗ್ರಾಮದಲ್ಲಿ ಗುರುತಿಸಲಾಗಿದೆ. ಇದನ್ನು ವಿರೋಧಿಸಿದ ಸ್ಥಳೀಯ ಗ್ರಾಮಸ್ಥರು ತ್ಯಾಜ್ಯ ವಿಲೇವಾರಿ ಘಟಕವು ಗ್ರಾಮದ ಪ್ರೌಢಶಾಲೆಯ, ಕಸ್ತೂರುಬಾ ವಸತಿ ಶಾಲೆಯ ಸಮೀಪದಲ್ಲಿದ್ದು ಶಾಲಾ ವಾತಾವರಣಕ್ಕೆ ತೊಂದರೆಯಾಗಲಿದೆ. ದಾಖಲೆಗಳ ಪ್ರಕಾರ ಗೊಕಟ್ಟೆ ಬದಿಯಲ್ಲೆ ಸದರಿ ಘಟಕ ನಿರ್ಮಾಣದ ಉದ್ದೇಶವಿದ್ದು ಗೊಕಟ್ಟೆಗೆ ನೀರು ಕುಡಿಯಲು ಬರುವ ಜಾನುವಾರುಗಳಿಗೆ ತೊಂದರೆ ಆಗಲಿದೆ, ಅಲ್ಲದೆ ಕೆರೆ ಸಂರಕ್ಷಣಾ ನಿಯಮಾವಳಿಗಳ ವಿರುದ್ಧವಾಗಿದೆ. ಸದರಿ ಘಟಕದ ಪಕ್ಕದಲ್ಲೆ ಕಾಲುವೆ ಇದ್ದು ತ್ಯಾಜ್ಯಗಳು ಕಾಲುವೆ ಬಿದ್ದು ಕಾಲುವೆ ನೀರು ಕಲುಷಿತಗೊಂಡು ಕೆರೆಯ ಪರಿಸರಕ್ಕೆ ಧಕ್ಕೆಯಾಗಲಿದೆ. ರಾಜ್ಯ ಹೆದ್ದಾರಿ 84ಕ್ಕೆ ಹೊಂದಿಕೊಂಡಂತೆ ಘಟಕ ನಿರ್ಮಾಣವಾಗುವ ಕಾರಣ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ತೊಂದರೆಯಾಗಲಿದೆ, ಯಾವುದೇ ಕಾರಣಕ್ಕೂ ಘಟಕ ಸ್ಥಾಪನೆ ಬೇಡ ಎಂದು ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ಅವರನ್ನು ಆಗ್ರಹಿಸಿದರು.
ಗ್ರಾಮಸ್ಥರ ಪರವಾಗಿ ಚೂಡಾಮಣಿ ವೆಂಕಟೇಶ್, ಲಕ್ಷ್ಮಣ ಸಹ ಅಧ್ಯಕ್ಷರನ್ನು ಒತ್ತಾಯಿಸಿದರು. ಅಧ್ಯಕ್ಷರು ಈ ನಿಟ್ಟಿನಲ್ಲಿ ಅಗತ್ಯ ಪ್ರಕ್ರಿಯೆ ನಡೆದಿವೆ, ಅದರೂ ಗ್ರಾಮಸ್ಥರ ಅಭಿಪ್ರಾಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಾಧ್ಯ ಇರುವ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಪ್ರಮುಖರಾದ ಕೃಷ್ಣ, ರವಿಕುಮಾರ, ಮಹೇಶ, ಗಂಗಣ್ಣ, ಅಲೋಕ, ಚನ್ನೇಗೌಡ್ರು, ಪಾಪಣ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!