ಚಿ.ನಾ.ಹಳ್ಳಿಯಲ್ಲಿ 800 ಮನೆ ನಿರ್ಮಾಣಕ್ಕೆ ಅನುಮೋದನೆ

377

Get real time updates directly on you device, subscribe now.


ಚೇತನ್
ಚಿಕ್ಕನಾಯಕನಹಳ್ಳಿ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಚಿಕ್ಕನಾಯಕನಹಳ್ಳಿ ಪಟ್ಟಣದ ವಿವಿಧ ಕೊಳಗೇರಿ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 800 ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಫಲಾನುಭವಿಗಳು ಕಡಿಮೆ ವಂತಿಕೆ ಮೊತ್ತದಲ್ಲಿ ಸ್ವಂತ ಮನೆ ತಮ್ಮದಾಗಿಸಿಕೊಳ್ಳಬಹುದಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಎ.ಕೆ.ಕಾಲೋನಿ, ಎ.ಡಿ.ಕಾಲೋನಿ, ಬಂಡಾರಿಹಟ್ಟಿ, ಸಿದ್ದೇಶ್ವರ ಮಠದ ಹತ್ತಿರ, ಮೊಹಮಡನ್ ಬ್ಲಾಕ್, ಮೋಚಿ ಕಾಲೋನಿ, ದಬ್ಬೆಗಟ್ಟ ಎ.ಕೆ.ಕಾಲೋನಿ, ಜೋಗಿಬಾವಿ ಸಂದು ಕೊಳಗೇರಿ ಪ್ರದೇಶಗಳಲ್ಲಿ ಎಸ್ಸಿ – 247, ಎಸ್ಟಿ -73, ಅಲ್ಪ ಸಂಖ್ಯಾತರು -243 ಇತರೆ 237 ಒಟ್ಟು 800 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಹಾಗೂ ಬ್ಯಾಂಕ್ ಸಾಲಸೌಲಭ್ಯದೊಂದಿಗೆ ಒಟ್ಟು 6.50 ಲಕ್ಷ ರೂ. ವೆಚ್ಚದಲ್ಲಿ 357 ಚ.ಅ ಮನೆ ನಿರ್ಮಾಣ ಮಾಡಿಕೊಡಲಾಗುತ್ತದೆ.
ಮನೆಗೆ ತಗುಲುವ ವೆಚ್ಚ : ಪ್ರತಿ ಮನೆ ನಿರ್ಮಾಣಕ್ಕೆ 6.50 ಲಕ್ಷ ನಿಗದಿಯಾಗಿದ್ದು, ಕೇಂದ್ರ ಸರ್ಕಾರದ ಅನುದಾನ ಎಲ್ಲಾ ವರ್ಗದವರಿಗೆ 1.50 ಲಕ್ಷ, ರಾಜ್ಯ ಸರ್ಕಾರದ ಅನುದಾನ 1.20 ಲಕ್ಷ ಒಟ್ಟು ಸರ್ಕಾರದ ಅನುದಾನ 2.70 ಸಾವಿರ ಮನೆಗೆ ಫಲಾನುಭವಿಗಳು 97500 ನೀಡಬೇಕಿದೆ, ಉಳಿದ 282500 ರೂ.ಗಳನ್ನು ಸಾಲ ಪಡೆದಲ್ಲಿ ಬಡ್ಡಿ ವಾರ್ಷಿಕ 6 ರಿಂದ 7 ರಷ್ಟು 20 ವರ್ಷಗಳ ಕಾಲಾವಧಿಗೆ ತುಂಬಬೇಕಾಗುವುದು.
ಮನೆಯ ವಿರ್ಸ್ತೀಣ 357 ಚ. ಅಡಿಗಳು, ಮನೆಯ ಅಳತೆ 18*20 ಅಡಿಗಳು, ಹಾಲ್ 9.5*11 , ರೂಂ 8*9.5, ಅಡುಗೆ ಮನೆ 9.5*5.5 , ಬಾತ್ ರೂಂ 8*4 , ಟಾಯ್ಲೆಟ್ 3.5*3.
ಪಟ್ಟಣದಲ್ಲಿ ಪ್ರಥಮ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಮನೆಗಳು ನಿರ್ಮಾಣವಾಗುತ್ತಿದ್ದು, ಫಲಾನುಭವಿಗಳು ಈ ಯೋಜನೆ ಸದುಪಯೋಗ ಪಡಿಸಿಕೊಂಡರೆ ಸ್ವಂತ ಮನೆ ನಿರ್ಮಾಣವಾಗುತ್ತದೆ.
ಈ ಯೋಜನೆಯ ಬಗ್ಗೆ ಕೆಲವರಿಗೆ ಅನುಮಾವಿದೆ, ಆದರೆ ಯೋಜನೆಯ ಕೆಲ ದಿನಗಳಲ್ಲಿಯೇ ಪ್ರಾರಂಭವಾಗಲಿದೆ, ಈಗಾಗಲೇ ಸಚಿವರಿಂದ ಗುದ್ದಲಿ ಪೂಜೆ ಸಹ ನಡೆದಿದೆ, ಆಸಕ್ತ ಫಲಾನುಭವಿಗಳು ಕೂಡಲೇ ಯೋಜನೆ ಬಳಸಿಕೊಳ್ಳಿ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 800 ಮನೆ ನಿರ್ಮಾಣವಾಗುತ್ತಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟು 2.70 ಸಾವಿರ ನೀಡುತ್ತಿದೆ. ಬ್ಯಾಂಕ್ ಸಾಲದ ಜೊತೆಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವ ಉತ್ತಮ ಯೋಜನೆಯಾಗಿದೆ. ಸಚಿವ ಜೆ.ಸಿ.ಮಾಧುಸ್ವಾಮಿಯವರ ವಿಶೇಷ ಆಸಕ್ತಿಯಿಂದ ಪಟ್ಟಣಕ್ಕೆ 800 ಮನೆ ಮಂಜೂರು ಆಗಿವೆ, ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಿಲಿ ಎಂದು ನಾಮ ನಿರ್ದೇಶಕ ಪುರಸಭೆ ಸದಸ್ಯ ಮಿಲಿಟರಿ ಶಿವಣ್ಣ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!