ಮಧುಗಿರಿ ಕ್ಷೇತ್ರದ ಜನರ ಪ್ರೀತಿ ನನ್ನ ಮೇಲಿರಲಿ: ರಾಜೇಂದ್ರ

380

Get real time updates directly on you device, subscribe now.

ಮಧುಗಿರಿ: ಗಂಜಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 400 ಎಕರೆ ಪ್ರದೇಶಕ್ಕೆ ನಿರಂತರ ನೀರುಣಿಸುವ ತಲಪುರಿಗೆಯಲ್ಲಿ ಮುಚ್ಚಿ ಹೋಗಿದ್ದ ಕಾಲುವೆ ತೆಗೆಯುವ ಮೂಲಕ ರೈತರಿಗೆ ಅನುಕೂಲವಾಗುವ ಮಹತ್ಕಾರ್ಯಕ್ಕೆ ಕೆಎನ್‌ಆರ್‌ ಅಭಿಮಾನಿ ಬಳಗ, ಆರ್ ಆರ್‌ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್‌ ಪಕ್ಷದ ವತಿಯಿಂದ ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ ಜೆಸಿಬಿ ಚಾಲನೆ ಮಾಡುವ ಮೂಲಕ ಬುಧವಾರ ಚಾಲನೆ ನೀಡಿದರು.
ಗಂಜಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗಂಜಲಗುಂಟೆ ಗ್ರಾಮದಲ್ಲಿರುವ ವೀರಭದ್ರಸ್ವಾಮಿ ದೇವಾಲಯದ ಮುಂಭಾಗ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಬಿಜವಾರ ಕೆರೆ ಕೋಡಿ ಬಿದ್ದ ನಂತರ ಈ ಭಾಗದಲ್ಲಿ ತಲಪುರಿಕೆ ಗಳಿಗೆ ನೀರಿನ ಜೀವಕಳೆ ಉದ್ಭವಿಸುತ್ತದೆ, ಈ ತಲಪುರಿಗೆ ನೀರಿ ಮೋಟಾರ್‌ ಪಂಪ್ ಸೆಟ್‌ ಉಪಯೋಗಿಸದೆ ನೀರು ತನ್ನಂತಾನೆ ಉಕ್ಕುವ ನೀರನ್ನು ರೈತರು ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಗಂಜಲಗುಂಟೆ ಗ್ರಾಮದ ವೀರಭದ್ರ ಸ್ವಾಮಿ ದೇವಸ್ಥಾನದ ಬಳಿ ಈ ತಲಪುರಿಕೆ ಇದ್ದು ಅಲ್ಲಿಂದ ಮುಚ್ಚಿಹೋಗಿರುವ ಕಾಲುವೆ ಸ್ವಚ್ಛ ಗೊಳಿಸುವುದರಿಂದ ರೈತರಿಗೆ ಅನುಕೂಲ ಆಗಲಿದೆ, ರೈತರು ನೀರು ಸದುಪಯೋಗ ಪಡಿಸಿಕೊಂಡು ಯಾವುದೇ ಕಿತ್ತಾಟ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಳ್ಳಿ, ಅಮರಾವತಿ ಬಳಿಯ ಕಾಲುವೆ ತೆಗೆಸಲಾಗುವುದೆಂದರು.
2015 ರಲ್ಲಿ ಬಿಜವಾರ ಕೆರೆ ತುಂಬಿದಾಗ ಶಾಸಕರಾಗಿದ್ದ ಕೆ.ಎನ್‌.ರಾಜಣ್ಣ ಅವರು ಈ ಕಾಲುವೆ ತೆರವು ಗೊಳಿಸಿದ್ದರೆಂದು ಇಲ್ಲಿನ ರೈತರು ಹೇಳುತ್ತಾರೆ, ಮತ್ತೆ ಈಗ ಬಿಜವಾರ ಕೆರೆ ಕೋಡಿ ಹರಿದಿರುವುದರಿಂದ ತಲಪುರಿಕೆಗೆ ಮತ್ತೆ ಜೀವ ಬಂದಿದೆ, ಇದು ಒಂದು ವರ್ಷ ಹರಿಯಲಿದ್ದು, ಜಲಮೂಲಗಳ ಅಭಿವೃದ್ಧಿಗೆ ಶಾಸಕ ಕೆ.ಎನ್‌.ರಾಜಣ್ಣನವರು ತೆಗೆದುಕೊಳ್ಳವ ಮುತುವರ್ಜಿ ಫಲ ಜಯಮಂಗಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದ್ದರಿಂದ ಮೂವತ್ತು ವರ್ಷಗಳ ನಂತರ ದೊಡ್ಡಮಾಲೂರು ಕೆರೆ ತುಂಬಿರುವುದು ನಿದರ್ಶನವೆಂದರು.
ನಿಮ್ಮ ಪ್ರೀತಿ ವಿಶ್ವಾಸ ಇದೇ ರೀತಿ ನನ್ನ ಮೇಲಿರಲಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಅಣಿಯಾಗಬೇಕು, ವಿಧಾನಪರಿಷತ್‌ಗೆ ನನ್ನನ್ನು ಆಯ್ಕೆ ಮಾಡುವ ಮೂಲಕ ಒಂದು ಶಕ್ತಿ ತುಂಬಿದ್ದೀರಿ, ಪಕ್ಷಾತೀತವಾಗಿ ನನಗೆ ಸಹಕಾರ ನೀಡಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಮತ್ತು ಕೆ.ಎನ್‌.ರಾಜಣ್ಣನವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆಂದರು.
ಈ ವೇಳೆ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ ಬಾಬು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಎಸ್‌.ಆರ್‌.ರಾಜಗೋಪಾಲ್‌, ಗಂಜಲಗುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಎಪಿಎಂಸಿ ಮಾಜಿ ಮಾಜಿ ಅಧ್ಯಕ್ಷೆ ಮರಿಯಣ್ಣ, ವಿಎಸ್ಸೆಸ್ಸೆನ್‌ ಅಧ್ಯಕ್ಷ ಪಾಜೀಲ್‌, ಗ್ರಾಪಂ ಉಪಾಧ್ಯಕ್ಷೆ ಚೇತನಾ, ಸದಸ್ಯರಾದ ಮಾಲಾ, ನಾಗಭೂಷಣ, ರಾಮಚಂದ್ರಪ್ಪ, ಲಕ್ಷ್ಮಿನಾರಾಯಣ, ರಂಗರಾಜು, ಅಮರಾವತಿ ದಾಸೇಗೌಡ ವೀರೇಶ್‌, ಭಕ್ತರಹಳ್ಳಿ ವೀರನಾಗಪ್ಪ, ಜಿ.ಎನ್‌.ರವಿ, ತಿಮ್ಮಣ್ಣ, ಕೆ.ರಮೇಶ್‌, ಪಟೇಲ್‌ ರಾಮಣ್ಣ, ಬ್ಯಾಂಕ್‌ ರಾಮಚಂದ್ರಪ್ಪ, ಎಚ್‌.ಎಸ್‌.ನಾಗಭೂಷಣ, ರಂಗರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!