ಆನ್ ಲೈನ್‌ ವಂಚನೆ ಬಗ್ಗೆ ಎಚ್ಚರ ಅಗತ್ಯ

239

Get real time updates directly on you device, subscribe now.

ಕುಣಿಗಲ್‌: ಆನ್‌ ಲೈನ್‌ ವಂಚನೆ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದಿ ಪೋಷಕರಲ್ಲು ಅರಿವು ಮೂಡಿಸಿ ಸೈಬರ್‌ ಅಪರಾಧ ಪ್ರಕರಣ ನಿಯಂತ್ರಿಸಲು ಸಹಕರಿಸಬೇಕೆಂದು ಅಮೃತೂರು ಸಿಪಿಐ ಗುರುಪ್ರಸಾದ್‌ ಹೇಳಿದರು.
2021 ನೇ ಸಾಲಿನ ಅಪರಾಧ ಮಾಸಾಚರಣೆ ಹಿನ್ನೆಲೆಯಲ್ಲಿ ಹುಲಿಯೂರು ದುರ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಮಕ್ಕಳ ಕಾನೂನಿನ ಬಗ್ಗೆ, ರಸ್ತೆ ಸುರಕ್ಷತೆ ಬಗ್ಗೆ, ಆನ್‌ಲೈನ್‌ ವಂಚನೆ ಮೊಬೈಲ್ ನ ಅನಾನುಕೂಲತೆ, ಪೋಕ್ಸೋ ಕಾಯಿದೆ, ಉಚಿತ ಶಿಕ್ಷಣ ಕಾಯಿದೆ ಮತ್ತು 112 ಪೊಲೀಸ್‌ ಸೇವೆ, ಜಾನುವಾರು ಕಳ್ಳತನ, ಮನೆ ಕಳ್ಳತನದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಡಿಜಿಟಲ್‌ ಬ್ಯಾಂಕಿಂಗ್‌ ಹೆಚ್ಚು ಜನಜನಿತವಾಗಿದೆ, ಬಹುತೇಕರು ಬ್ಯಾಂಕಿಂಗ್‌ ವಹಿವಾಟನ್ನು ಮೊಬೈಲ್‌ ಮೂಲಕ ನಿರ್ವಹಿಸುತ್ತಾರೆ. ಬ್ಯಾಂಕ್‌ ವಿವರ ಕೇಳಿಕೊಂಡು ಬರುವ ಕರೆಗೆ ಉತ್ತರಿಸಿದೆ ಜಾಗರೂಕತೆ ವಹಿಸಬೇಕು ಎಂದರು.
ವಿದ್ಯಾರ್ಥಿಗಳು ಮೊಬೈಲ್‌ ಅಗತ್ಯತೆಗೆ ತಕ್ಕಂತೆ ಬಳಸಬೇಕು, ಮೊಬೈಲ್‌ ವಿವರಗಳನ್ನು ಅನಗತ್ಯವಾಗಿ ಹಂಚಿಕೊಳ್ಳಬಾರದು, ಕಾನೂನು ಬಾಹಿರ ಕೃತ್ಯಗಳು ಕಂಡು ಬಂದಲ್ಲಿ 112 ಸೇವೆಗೆ ಕರೆ ಮಾಡಿ ನೆರವು ಪಡೆಯಬೇಕು, ಅಪರಾಧ ಪ್ರಕರಣಗಳ ತಡೆಗಟ್ಟುವ ಜವಾಬ್ದಾರಿ ಯುವ ಜನತೆ ಮೇಲಿದೆ ಎಂಬುದು ಮರೆಯಬಾರದು ಎಂದರು.
ಸಭೆಯಲ್ಲಿ ಹುಲಿಯೂರು ದುರ್ಗ ಪಿಎಸ್‌ಐ ಚೇತನ್‌ ಕುಮಾರ್‌, ಕಾಲೇಜಿನ ಪ್ರಾಂಶುಪಾಲ ರಾಜಣ್ಣ ಇತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.

Get real time updates directly on you device, subscribe now.

Comments are closed.

error: Content is protected !!