ಮತಾಂತರ ನಿಷೇಧ ಕಾಯ್ದೆ ಪ್ರಸ್ತಾಪ ತರಲಿಲ್ಲ

ಬಿಜೆಪಿ ನಾಯಕರ ಆರೋಪಕ್ಕೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಿಡಿ

314

Get real time updates directly on you device, subscribe now.

ಶಿರಾ: ನಾಲ್ಕು ವರ್ಷದ ಹಿಂದೆ 2016 ರಲ್ಲಿ ಈ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿದ್ದೇ ಮತಾಂತರ ನಿಷೇಧ ಕಾಯ್ದೆ ಅನ್ನೋ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ, ಮತಾಂತರ ಕಾಯ್ದೆ ಬಗ್ಗೆ ಯಾವುದೇ ಪ್ರಸ್ತಾವನೆ ಇರಲಿಲ್ಲ, ಅಧಿಕಾರ ಕಳೆದು ಐದಾರು ವರ್ಷವಾಯ್ತು, ಈ ಬಗ್ಗೆ ನನಗೆ ನೆನಪಿಲ್ಲ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಈ ಹಿಂದೆಯೇ ಕಾಂಗ್ರೆಸ್‌ ಮತಾಂತರ ನಿಷೇಧ ಕಾಯ್ದೆ ತರಲು ಮುಂದಾಗಿದ್ದರು, ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಪ್ರಸ್ತಾವಣೆ ಸಲ್ಲಿಸಿದ್ದರು ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಜಯಚಂದ್ರ ಅವರು, ನಾನು ಕಾನೂನು ಮಂತ್ರಿಯಾಗಿದ್ದಾಗ ಹಲವು ಇಲಾಖೆಯಿಂದ ಶಿಫಾರಸ್ಸು ಬರುತ್ತವೆ, ಅವುಗಳನ್ನು ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿದ ಬಳಿಕ ಅಧಿಕೃತವಾಗಲಿದೆ, ಆದರೆ ಈಗಿನ ಮಂತ್ರಿಗಳು ಹೇಳುತ್ತಿದ್ದಾರೆ ಪ್ರಸ್ತಾವನೆ ಇತ್ತು ಅಂತ, ನಾವು ಅಧಿಕಾರದಲ್ಲಿ ಇದ್ದರು, ನಾವು ಸಚಿವ ಸಂಪುಟದ ಮುಂದೆ ಪ್ರಸ್ತಾಪ ತರಲಿಲ್ಲ ಶಿಫಾರಸ್ಸು ಮಾಡಿಲ್ಲ, ಯಾವ ಇಲಾಖೆ ಶಿಫಾರಸ್ಸು ಮಾಡಿದ್ದಾರೆಂದು ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಪಾರ್ಟಿಗೆ ಈ ಮತಾಂತರ ನಿಷೇಧ ಕಾಯ್ದೆಗಿಂತ ಮುಖ್ಯವಾದ ವಿಚಾರಗಳು ಇದ್ದವು, ಮಳೆ ಹಾನಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ, ಈ ಬಗ್ಗೆ ಚರ್ಚೆ ನಡೆಯಬೇಕಿತ್ತು, ಆದರೆ ಆ ಬಗ್ಗೆ ಮಾತನಾಡುತ್ತಿಲ್ಲ, ಬಿಜೆಪಿಯವರಿಗೆ ಸಮಾಜ ಒಡೆಯಬೇಕು, ಸಾಮರಸ್ಯ ಹಾಳು ಮಾಡುವುದು ಅವರ ಉದ್ದೇಶ ಎಂದು ಕಿಡಿಕಾರಿದರು.
ಮತಾಂತರ ನಿಷೇಧ ಕಾಯ್ದೆ ಯಾಕೆ ತರಲು ಹೋಗುತ್ತಿದ್ದೀರಾ ? ಇದರಲ್ಲಿ ರಾಜಕೀಯ ಮಾಡುವುದು ತರವಲ್ಲ, ನಿಮ್ಮ ನಾಟಕ, ಬಣ್ಣ ಬಯಲಾಗಿದೆ, ಜನರಿಗೆ ಭಯ ಬೀಳಿಸುವಂತಹ, ಇಕಟ್ಟಿಗೆ ಸಿಲುಕಿಸುವ ಕೆಲಸ ನಡೆಯುತ್ತಿದೆ, ಸಮಾಜದ ಸ್ವಾಸ್ಥತೆ ಹಾಳು ಮಾಡಲು ಕಾನೂನು ಇಲ್ಲ ಎಂದು ಜಯಚಂದ್ರ ಬಿಜೆಪಿ ನಡೆ ವಿರುದ್ಧ ಹರಿಹಾಯ್ದರು.

Get real time updates directly on you device, subscribe now.

Comments are closed.

error: Content is protected !!