ಗ್ರಾಪಂನಲ್ಲಿ ದುರಾಡಳಿತಕ್ಕೆ ಸದಸ್ಯರ ಆಕ್ರೋಶ

394

Get real time updates directly on you device, subscribe now.

ಮಧುಗಿರಿ: ಗ್ರಾಪಂ ಅಧ್ಯಕ್ಷರ ಪತಿಯ ಮಧ್ಯಸ್ಥಿಕೆ ,ದುರಾಡಳಿತ ಲಂಚಾವತಾರ ತಾಂಡವ, ಅಭಿವೃದ್ಧಿ ಕಾರ್ಯಗಳು ಕುಂಠಿತ, ಇದೆಲ್ಲವನ್ನು ವಿರೋಧಿಸಿ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿಯ ಹದಿನೆಂಟು ಸದಸ್ಯರು ಗುರುವಾರ ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.
ಗ್ರಾಪಂ ಸದಸ್ಯೆ ವನಜಾಕ್ಷಿ ದಾಸೇಗೌಡ ಮಾತನಾಡಿ, ಅಧ್ಯಕ್ಷರು ಮತ್ತು ಪಿಡಿಒ ಅವರು ನರೇಗಾ ಕೆಲಸಗಳನ್ನು ಸರಿಯಾಗಿ ಮಾಡದೆ ಹದಿನೈದನೇ ಹಣಕಾಸು ಕ್ರಿಯಾಯೋಜನೆ ರಚಿಸದೆ ಸಾಮಾನ್ಯರ ಕೈಗೂ ಸಿಗದೆ ಸಾರ್ವಜನಿಕ ಕೆಲಸ ಯಾವುದೂ ಆಗುತ್ತಿಲ್ಲವೆಂದು ಆರೋಪಿಸಿದರು.
ಸದಸ್ಯ ಹನುಮಂತರಾಯಪ್ಪ ಮಾತನಾಡಿ, ಈ ಸಾಮಾನ್ಯ ಸಭೆಯನ್ನು ಹದಿನೆಂಟು ಸದಸ್ಯರು ಬಹಿಷ್ಕರಿಸಿದ್ದು ತಾಪಂ ಇಒ ಮತ್ತು ಜಿಪಂ ಸಿಇಒ ಅವರು ಸ್ಥಳ ತನಿಖೆ ನಡೆಸಿ ಸಾಮಾನ್ಯ ಜನರಿಗೆ ಕೆಲಸಗಳಾಗುವಂತೆ ಒತ್ತಾಯಿಸಿದರು.
ಸದಸ್ಯ ರಾಮಚಂದ್ರಪ್ಪ ಮಾತನಾಡಿ ನೀಲಿಹಳ್ಳಿಯಲ್ಲಿ ಗ್ರಾಮದಲ್ಲಿ ಕಳೆದ 1 ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದ್ದರೂ ಇಲ್ಲಿಯವರೆಗೂ ಅಧ್ಯಕ್ಷರಾಗಲಿ ಅಭಿವೃದ್ಧಿ ಅಧಿಕಾರಿಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮಾತನಾಡಿ, ನಾನು ಈ ಗ್ರಾಮ ಪಂಚಾಯಿತಿಗೆ ಬಂದು 3 ತಿಂಗಳಾಗಿದ್ದು 1 ಸಭೆ ನಡೆಸಿದ್ದೇನೆ, ಮತ್ತೊಂದು ಸಭೆ ನಡೆಸಲು ವಿಧಾನಪರಿಷತ್‌ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ, ನರೇಗಾ ಯೋಜನೆಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ವಾರ್ಡ್‌ ಸಭೆ ಮತ್ತು ಗ್ರಾಮಸಭೆ ನಡೆಸುವ ಸಲುವಾಗಿ ಸಾಮಾನ್ಯ ಸಭೆ ಕರೆಯಲಾಗಿತ್ತು, ಹಾಜರಿದ್ದ ಸದಸ್ಯರು ಅಭಿವದ್ಧಿ ಆಗಿಲ್ಲವೆಂಬ ನೆಪವೊಡ್ಡಿ ಬಹಿಷ್ಕರಿಸಿದ್ದಾರೆ, ನರೇಗಾ ಯೋಜನೆಯಡಿ ಕೆರೆಕಟ್ಟೆಗಳು ನೀರು ತುಂಬಿರುವುದರಿಂದ ಸ್ಥಳ ಪರಿಶೀಲನೆ ಮಾಡಿ ಕೆಲಸ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದರು.
ಗ್ರಾಮ ಪಂಚಾಯತ್‌ ಸದಸ್ಯರಾದ ಲಕ್ಷ್ಮಿದೇವಮ್ಮ, ಸಾಕಮ್ಮ, ಪುಟ್ಟಮ್ಮ, ಸತೀಶ್‌, ಸೌಮ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!