ತುಮಕೂರು: ನಗರದ ಹೆಸರಾಂತ ವಕೀಲರಾದ ಟಿ.ಎಸ್.ವೆಂಕಟನಂಜಪ್ಪನವರು ಗುರುವಾರ ತಮ್ಮ ಮನೆಯಲ್ಲಿ ನಿಧನರಾದರು, ಅವರಿಗೆ 90 ವರ್ಷ ವಯಸ್ಸಾಗಿತ್ತು, ಅವರು ವಕೀಲಿಕೆಯಲ್ಲಿ ಸುಮಾರು 60 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿದ್ದರು. ಮೃತರಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದಾರೆ.
ಮಗ ಸುಬ್ರಹ್ರಣ್ಯ ಪ್ರಸಾದ್ ವಕೀಲರಾಗಿ ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ಈಗ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಮಗಳು ಗೃಹಿಣಿ.
ಟಿ.ಎಸ್.ವೆಂಕಟನಂಜಪ್ಪ ಅವರು ರೋಟರಿ ಅಧ್ಯಕ್ಷರಾಗಿ, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಹಲವು ಸಮಾಜಮುಖಿ ಕೆಲಸ ನಿರ್ವಹಿಸಿದ್ದಾರೆ, ಕೊರಟಗೆರೆ ತಾಲ್ಲೂಕಿನ ತಿಮ್ಮಸಂದ್ರದ ಶಾನುಭೋಗರ ಕುಟುಂಬದಲ್ಲಿ ಜನಿಸಿದ್ದರು, ಆಗರ್ಭ ಶ್ರೀಮಂತರಾಗಿದ್ದರೂ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಸದಾ ಬಡವರ, ನೊಂದವರ ಧ್ವನಿಯಾಗಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರ ಅಂತ್ಯಕ್ರಿಯೆ ನಗರದ ಗಾರ್ಡನ್ ರೋಡ್ ನಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿತು. ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಸಚಿವ ಸೊಗಡು ಶಿವಣ್ಣ, ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಡಾ.ಜಯರಾಮರಾವ್, ಹಿರಿಯ ವಕೀಲ ನರಸಿಂಹಯ್ಯ, ಎಸ್.ಎಂ.ಕೃಷ್ಣಮೂರ್ತಿ, ದೊಡ್ಡಮನೆ ಗೋಪಾಲಗೌಡ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.
ವೆಂಕಟನಂಜಪ್ಪ ನಿಧನ
Get real time updates directly on you device, subscribe now.
Next Post
Comments are closed.