ಶಿರಾ: ಪ್ರಸ್ತುತ ನಗರಸಭೆ ಚುನಾವಣೆಯ 31 ವಾರ್ಡ್ ಗಳ ಪೈಕಿ 24 ರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಬುಕ್ಕಾಪಟ್ಟಣ ರಸ್ತೆಯಲ್ಲಿರುವ ಎಂಎಲ್ಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಅನುಮೋದನೆಗೆ ಹಾಜರಾತಿ ಕಡ್ಡಾಯ ಎಂದು ಸೂಚನೆ ಬಂದಿದ್ದರಿಂದ ನಾನು ಅಧಿವೇಶನದಲ್ಲಿ ಪಾಲ್ಗೊಂಡ್ದೆ, ನನ್ನ ಅನುಪಸ್ಥಿತಿಯಲ್ಲಿ ಅಭ್ಯರ್ಥಿಗಳು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಮತಯಾಚನೆ ಮಾಡಿದ್ದಾರೆ, ನಾನು ಕೂಡ ಏಳೆಂಟು ವಾರ್ಡ್ಗಳಲ್ಲಿ ಮತಯಾಚನೆ ಮಾಡಿದ್ದು, ನಾವು ಹೋದ ಕಡೆಯಲ್ಲಿ ಜನರು ಬಿಜೆಪಿಗೆ ಮತ ಹಾಕುವ ಉತ್ಸಾಹ ತೋರಿಸಿದ್ದಾರೆ, ಜನರ ಉತ್ಸಾಹ ನೋಡಿದ ಮೇಲೆ ನಮ್ಮ ಪಕ್ಷ ನಗರಸಭೆಯಲ್ಲಿ ಅಧಿಕಾರ ವಹಿಸಿಕೊಳ್ಳುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದರು.
ಇದೇ ವೇಳೆ ಬಿಜೆಪಿಯಿಂದ ನಗರ ಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಇ- ಆಡಳಿತದ ಮೂಲಕ ತ್ವರಿತ ಸೇವೆ, ಕಳ್ಳತನ ಮತ್ತು ಅಪರಾಧ ತಡೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಯುಜಿಡಿ ಉನ್ನತಿಕರಣ ಸೇರಿದಂತೆ ವಿವಿಧ ಅಂಶಗಳ ಮೂಲಕ ನಗರಾಭಿವೃದ್ಧಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ನಿಗಮ ಮಂಡಳಿ ಅಧ್ಯಕ್ಷರಾದ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್, ಎಂ.ಬಿ.ನಂದೀಶ್, ದಿಲೀಪ್ ಕುಮಾರ್, ಪ್ರಭಾಕರ್, ಮಾಲಿ ಮರಿಯಪ್ಪ, ಬಸವರಾಜು, ಚಂಗಾವರ ಮಾರಣ್ಣ, ಮುದಿಮಡು ಮಂಜುನಾಥ್ ರವಿಕುಮಾರ್, ಕೃಷ್ಣಮೂರ್ತಿ, ಲತಾ ಕೃಷ್ಣ ಇತರರು ಇದ್ದರು.
ಬಿಜೆಪಿಗೆ ನಗರಸಭೆ ಆಡಳಿತ: ರಾಜೇಶ್ ಗೌಡ
Get real time updates directly on you device, subscribe now.
Prev Post
Next Post
Comments are closed.