ಕನ್ನಡ ಧ್ವಜ ಸುಟ್ಟವರನ್ನು ಶಿಕ್ಷಿಸಿ

269

Get real time updates directly on you device, subscribe now.

ತುಮಕೂರು: ಬೆಳಗಾವಿಯಲ್ಲಿ ಕನ್ನಡ ಧ್ವಜ ಸುಟ್ಟಿ ಹಾಕಿರುವ ಹಾಗ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ಜಿಲ್ಲಾ ಶಾಖೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು, ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವಣ್ಣನವರ ಪ್ರತಿಮೆಗಳಿಗೆ ಹಾನಿ ಮಾಡಿರುವುದು ಮತ್ತು ಕನ್ನಡ ಧ್ವಜ ಸುಟ್ಟಿ ಹಾಕಿರುವುದನ್ನು ತೀವ್ರವಾಗಿ ಖಂಡಿಸಿರುವ ಪರಿಷತ್‌ನ ಜಿಲ್ಲಾ ಶಾಖೆ ಪದಾಧಿಕಾರಿಗಳು ಈ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ ಅವರ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಿಡಿಗೇಡಿಗಳು, ಸಮಾಜ ಘಾತುಕರು ನಡೆಸುತ್ತಿರುವ ಹೀನಾಯ ಕೃತ್ಯಗಳನ್ನು ಕರ್ನಾಟಕದಲ್ಲಿ ನೆಲೆಸಿರುವ ಮರಾಠ ಜನಾಂಗದವರು ಉಗ್ರವಾಗಿ ಖಂಡಿಸುವುದಾಗಿ ಪರಿಷತ್ ನ ಜಿಲ್ಲಾಧ್ಯಕ್ಷ ಟಿ.ಹೆಚ್. ಜನಾರ್ಧನ ಸೋನಾಲೆ ತಿಳಿಸಿದ್ದಾರೆ.
ಕನ್ನಡ ಧ್ವಜ ಸುಟ್ಟು ಹಾಕಿ, ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಆದಷ್ಟು ಬೇಗ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪರಿಷತ್ ನ ಗೌರವಾಧ್ಯಕ್ಷ ಆರ್‌.ನಾಗೇಶ್ ರಾವ್‌ ಗಾಯಕ್ವಾಡ್‌, ಪ್ರಧಾನ ಕಾರ್ಯದರ್ಶಿ ಟಿ.ವಿ.ಶ್ರೀನಿವಾಸರಾವ್‌ ಸಾಳುಂಕೆ, ಖಜಾಂಚಿ ಹರೀಶ್ ರಾವ್‌ ಮೋರೆ, ಬನಶಂಕರಿ ಬಾಬು, ಜಿ.ಆರ್‌.ರಮೇಶ್‌ ಶಿಂಧೆ, ಗಂಗೋಜಿರಾವ್‌ ನಲ್ಲೊಡೆ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!