ಸಾಹಿತ್ಯ ಸಂಸ್ಕಾರದ ಆತ್ಮಾನಂದ ನೀಡುತ್ತೆ

ತುಮಕೂರು ವಾರ್ತೆ-2022 ಕ್ಯಾಲೆಂಡ್ ಬಿಡುಗಡೆ । ಉದಯೋನ್ಮುಖ ಬರಹಗಾರರಿಗೆ ಶಾಲಿನಿ ಪುರಸ್ಕಾರ

142

Get real time updates directly on you device, subscribe now.

ತುಮಕೂರು: ಸಾಹಿತ್ಯ ಸಂಸ್ಕಾರ ನೀಡುತ್ತದೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯು ಮುಖದಿಂದ ಅಮೃತದ ಕಡೆಗೆ ನಡೆಯುತ್ತದೆ, ಪಶುತನವನ್ನು ನೀಗಿ ಮಾನವೀಯತೆ ನೀಡುತ್ತದೆ, ಮಾನವ ಸಾಹಿತ್ಯದಿಂದ ಆತ್ಮಾನಂದ ಪಡೆಯಬಹುದು ಎಂದು ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ತಿಳಿಸಿದರು.
ನಗರದ ತುಮಕೂರು ಕ್ಲಬ್ ನಲ್ಲಿ ತುಮಕೂರು ವಾರ್ತೆ ಸಹಯೋಗದಲ್ಲಿ ಆಯೋಜಿಸಿದ್ದ ಶಾಲಿನಿ ಪುರಸ್ಕಾರ – 2021 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕಾಡೆಮಿಗಳು, ಪರಿಷತ್ತು ಬೆಳೆದವರನ್ನು ಗೌರವಿಸಿದರೆ ಸಂಘ- ಸಂಸ್ಥೆಗಳು ಮತ್ತು ಪತ್ರಿಕೆಗಳು ಉದಯೋನ್ಮುಖರನ್ನು ಬೆಳೆಸುತ್ತದೆ, ಈ ನಿಟ್ಟಿನಿಲ್ಲಿ ಎಸ್.ಆರ್.ದೇವಪ್ರಕಾಶ್ ಅವರ ದತ್ತಿನಿಧಿಯಿಂದ ತುಮಕೂರು ವಾರ್ತೆ ಪತ್ರಿಕೆಯು ಉದಯೋನ್ಮುಖರನ್ನು ಗುರುತಿಸಿ, ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.
ಗ್ರಂಥ ಸಂಪಾದನೆ, ಸಾಹಿತ್ಯ ಕೃತಿ ರಚನೆ ಸೇರಿದಂತೆ ಜಿಲ್ಲೆಯಲ್ಲಿ ಸಾಹಿತ್ಯಿಕ ವಾತಾವರಣ ಹೆಚ್ಚಾಗಬೇಕಿದೆ, ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು, ಪುಸ್ತಕ ಕೊಂಡು ಓದುವ ಮೂಲಕ ಪ್ರಕಾಶಕರನ್ನು ಪ್ರೋತ್ಸಾಹಿಸಬೇಕು, ಕಾರ್ಯಾಗಾರ ಕಮ್ಮಟಗಳ ಮೂಲಕ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ನೀಡಬೇಕು, ಸಂಘ- ಸಂಸ್ಥೆಗಳು, ಮಠ- ಮಾನ್ಯಗಳು ಕಥೆ, ಕವನ, ವಿಮರ್ಶೆ, ಸಂಪಾದನೆ ಗ್ರಂಥಗಳನ್ನು ಹೊರತರಬೇಕು, ಇದರಲ್ಲಿ ಯುವಕರು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಆಗಬೇಕು ಎಂದರು.
ಶಾಸಕ ಜ್ಯೋತಿಗಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುದ್ದಿ ಮಾಧ್ಯಮಗಳು ಇಡೀ ಸಮಾಜವನ್ನು ಸುಧಾರಿಸುವ ಮತ್ತು ಆರೋಗ್ಯಕರವಾಗಿ ನಿರ್ಮಿಸುವಂತಹ ಜವಾಬ್ದಾರಿ ಹೊಂದಿದೆ, ಇತ್ತೀಚೆಗೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಸುದ್ದಿಗಳನ್ನು ತ್ವರಿತವಾಗಿ ನೀಡುವ ಸಲುವಾಗಿ ತನ್ನ ತನವನ್ನು ಕಳೆದುಕೊಳುತ್ತಿರುವುದು ವಿಷಾದನೀಯ ಎಂದರು.
ತುಮಕೂರಿನ ಸ್ಮಾರ್ಟ್ಸಿಟಿ ಅಭಿವೃದ್ಧಿ ಕುರಿತು ತುಮಕೂರು ವಾರ್ತೆ `ವಿಜಯನಡಿಗೆ’ ವಿಶೇಷ ಸಂಚಿಕೆಯೊಂದನ್ನು ರೂಪಿಸಿ, ಪಾಸಿಟೀವ್ ವರದಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದು ಶ್ಲಾಘಿಸಿದರು.
ಉದ್ಯಮಿ ಎಸ್.ಪಿ.ಚಿದಾನಂದ್ ಮಾತನಾಡಿ, ಎಲೆಕ್ಟ್ರಾನಿಕ್ ಮಾಧ್ಯಮಗಳ ಅಬ್ಬರದಲ್ಲಿ ಯುವ ಪೀಳಿಗೆಗೆ ಸಾಹಿತ್ಯದ ಒಲವು ರುಚಿಸುತ್ತಿಲ್ಲ, ಯುವಕರು ಸಾಹಿತ್ಯ, ಭಾಷೆ, ನಾಡಿನ ವಿಚಾರಗಳನ್ನು ತಿಳಿಯುವ ಸಂಯಮತೆ ಬೆಳೆಸಿಕೊಳ್ಳಬೇಕಿದೆ ಎಂದರು.
ಕವಿ ಬಿದಲೋಟಿ ರಂಗನಾಥ್, ಕವಿ ಮನೋಜ್ ಎಂ. ಮಕರಂದ, ಸಾಹಿತಿ ತುರುವೇಕೆರೆ ಪ್ರಸಾದ್, ಸಾಹಿತಿ ಎಂ.ಡಿ.ಚಂದ್ರೇಗೌಡ ನಾರಮ್ನಳ್ಳಿಗೆ ಅವರಿಗೆ ಶಾಲಿನಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರು ಹನಿಗವನ, ಕವಿತೆ ವಾಚನ ಮಾಡಿದರು.
ಉದ್ಯಮಿ ಡಾ.ವಿನಯ್ ಬಾಬು ತುಮಕೂರು ವಾರ್ತೆ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಪ್ರೊ.ಎಸ್.ಆರ್.ದೇವಪ್ರಕಾಶ್, ಶಾಲಿನಿ ದೇವಪ್ರಕಾಶ್, ಇನ್ನರ್ವೀಲ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷೆ ಪ್ರಿಯಾ ಪ್ರದೀಪ್ ಕುಮಾರ್, ಶ್ರೀ ಬಾಲಾಜಿ ಟ್ರಾನ್ಸ್ ಪೋರ್ಟ್ ಮಾಲೀಕರಾದ ರಾಮಕೃಷ್ಣ ಜಿ.ಎನ್., ತುಮಕೂರು ವಾರ್ತೆ ಸಂಪಾದಕ ಎಸ್.ಸುರೇಶ್ ವತ್ಸ, ವ್ಯವಸ್ಥಾಪಕ ಸಂಪಾದಕ ಎಚ್.ಎ.ಭಾರತೀಶ್, ಈಶ್ವರ್, ಸುಧಾಕರ್, ಪ್ರಸನ್ನದೊಡ್ಡಗುಣಿ, ವರಲಕ್ಷ್ಮಿ, ಜಿ.ಆರ್.ವಿಜಯ್ ಕುಮಾರ್, ಅನಿತ ಆರ್., ನಿರಂಜನ್ ನಾಯಕ ಮತ್ತಿತರರು ಇದ್ದರು.

ತಿಪಟೂರು ತಾಲ್ಲೂಕಿನ ಕೊಪ್ಪರಿದೊಡ್ಡಯ್ಯನಪಾಳ್ಯ ವಾಸಿ ದೇಶ ಕಾಯುವ ವೀರ ಯೋಧ ಹವಾಲ್ದಾರ್ ಜಯರಾಮ್ ನಾಯಕ್ ಈಚೆಗೆ ನಡೆದ ವಿಶೇಷ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿದ್ದು, ಅವರಿಗೆ ರಾಷ್ಟ್ರಪತಿ ಪದಕ ಘೋಷಣೆ ಆಗಿದೆ, ಜನವರಿ 26ಕ್ಕೆ ಪ್ರಶಸ್ತಿ ಪ್ರದಾನವಾಗಲಿದೆ. ಇದೇ ವೇಳೆ ಉದ್ಯಮಿ ಎಸ್.ಪಿ.ಚಿದಾನಂದ್ ಅವರು ಸನ್ಮಾನಿಸಿದರು.

Get real time updates directly on you device, subscribe now.

Comments are closed.

error: Content is protected !!