ತೀತಾ ಜಲಾಶಯಕ್ಕೆ ಗಂಗಾಪೂಜೆ ಸಲ್ಲಿಸಿದ ಪರಂ

210

Get real time updates directly on you device, subscribe now.


ಕೊರಟಗೆರೆ: ಕರುನಾಡಿನ ಸುಪ್ರಸಿದ್ದ ಪ್ರವಾಸಿ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮೀದೇವಾಲಯಲದ ಸಮೀಪವೇ ಜಲಾಶಯಕ್ಕೆ ಬೋಟಿಂಗ್‌ ವ್ಯವಸ್ಥೆಯಾದರೆ ಪ್ರವಾಸಿಗರನ್ನು ಸೆಳೆಯಲಿದೆ, ಪ್ರವಾಸೋದ್ಯಮ ಇಲಾಖೆಯಿಂದ ತೀತಾ ಜಲಾಶಯದ ಅಭಿವೃದ್ಧಿಗೆ ವಿಶೇಷ ಅನುದಾನ ತರುತ್ತೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಕೊರಟಗೆರೆ ತಾಲೂಕು ಕಸಬಾ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ತೀತಾ ಜಲಾಶಯಕ್ಕೆ ಸಾವಿರಾರು ರೈತರ ಜೊತೆಗೂಡಿ ಗಂಗಾಪೂಜೆ ಮತ್ತು ಬಾಗಿನಾ ಅರ್ಪಿಸಿ ಮಾತನಾಡಿ, ಗೊರವನಹಳ್ಳಿ ಸಮೀಪದ ತೀತಾ ಜಲಾಶಯದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಮುಕ್ತಾಯವಾಗಿವೆ. ಯಾತ್ರ ಸ್ಥಳದ ಸಮೀಪ ಇರುವ ತೀತಾ ಜಲಾಶಯದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮತ್ತಷ್ಟು ಅನುದಾನ ತರುತ್ತೇನೆ, ತೀತಾ ಜಲಾಶಯ ಕೊರಟಗೆರೆ ಕ್ಷೇತ್ರದ ರೈತರ ಜೀವನಾಡಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೀತಾ ಜಲಾಶಯದ ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಗೊರವನಹಳ್ಳಿಯ ಮಹಾಲಕ್ಷ್ಮೀ, ತೀತಾ ಗ್ರಾಮದ ಬಸವಣ್ಣ, ಆಂಜನೇಯ, ಮೇಳಹಳ್ಳಿಯ ಲಕ್ಷ್ಮೀ, ವೀರಾಪುರದಗುಟ್ಟೆ ಲಕ್ಷ್ಮೀ, ಗಡ್ಡೋಬನಹಳ್ಳಿಯ ಮಾರಮ್ಮದೇವಿ, ತುಂಬುಗಾನಹಳ್ಳಿಯ ರಂಗನಾಥ, ತಿಮ್ಮನಹಳ್ಳಿಯ ಲಕ್ಷ್ಮೀನರಸಿಂಹ, ಟಿ.ವೆಂಕಟಾಪುರದ ಕದರಿ ನರಸಿಂಹ ಸ್ವಾಮಿಯ ಉತ್ಸವ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆ ಶಂಕರ್‌, ಅಶ್ವತ್ಥನಾರಾಯಣ್‌, ಯುವ ಅಧ್ಯಕ್ಷ ವಿನಯ್‌, ಗ್ರಾಪಂ ಸದಸ್ಯರಾದ ಸುಭಾಷ್‌, ಹರೀಶ್‌, ಮಂಜುನಾಥ, ಮುಖಂಡರಾದ ಜಗದೀಶ್‌, ಮಂಜುನಾಥ, ಮೈಲಾರಪ್ಪ, ಅರವಿಂದ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!