ಶಿರಾ ನಗರಸಭೆಗೆ ಶೇ.79.77 ರಷ್ಟು ಓಟಿಂಗ್

ಶಾಂತಿಯುತ ಮತದಾನ- ಮಾಜಿ ಸಚಿವ ಟಿಬಿಜೆ ಹಕ್ಕು ಚಲಾವಣೆ

267

Get real time updates directly on you device, subscribe now.


ಶಿರಾ: ಶಿರಾ ನಗರಸಭೆಗೆ ಸೋಮವಾರ ನಡೆದ ಮತದಾನವು ಶಾಂತಿಯುತವಾಗಿ ನಡೆಯಿತು, ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 5 ಗಂಟೆಯುವರೆಗೆ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ನಗರಸಭೆಗೆ ಒಟ್ಟು 31 ವಾರ್ಡ್ ಗಳಿಗೆ ನಿಗದಿಯಾಗಿದ್ದ ಮತದಾನಕ್ಕೆ ವಾರ್ಡ್ ನಂ. 21 ರ ಅಭ್ಯರ್ಥಿ ನಿಧನಹೊಂದಿದ ಹಿನ್ನೆಲೆಯಲ್ಲಿ 30 ವಾರ್ಡ್ಗಳಿಗೆ ಮಾತ್ರ ಮತದಾನ ನಡೆಯಿತು. ಒಟ್ಟು 43 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಪುರುಷ ಮತದಾರರು 23027, ಮಹಿಳಾ ಮತದಾರರು 23707 ಒಟ್ಟು 46736 ಮತದಾರರಿದ್ದು, ಇದರಲ್ಲಿ ಒಟ್ಟು ಶೇ.79.77 ರಷ್ಟು ಮತದಾನವಾಗಿದೆ.
ಮಾಜಿ ಸಚಿವರಿಂದ ಮತದಾನ: ನಗರಸಭೆ ಚುನಾವಣೆ ಪ್ರಯುಕ್ತ ವಾರ್ಡ್ ನಂ. 3 ರ ಮತಗಟ್ಟೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ದಂಪತಿ ಸಮೇತ ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದರು.

Get real time updates directly on you device, subscribe now.

Comments are closed.

error: Content is protected !!