ತುಮಕೂರು: ಕಾಂಗ್ರೆಸ್ ಪಕ್ಷದ ಉದಯದ ಹಿಂದೆ ಭಾರತದ ಸ್ವಾತಂತ್ರವೆಂಬ ಮಹತ್ವದ ಉದ್ದೇಶವಿತ್ತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ 137ನೇ ವರ್ಷದ ರಾಷ್ಟ್ರೀಯ ಕಾಂಗ್ರೆಸ್ ನ ಸಂಸ್ಥಾಪನಾ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ರಿಟಿಷರ ದಬ್ಬಾಳಿಕೆಗೆ ಒಳಗಾಗಿ ಕಷ್ಟಪಡುತ್ತಿದ್ದ ಭಾರತೀಯರಿಗೆ ಸ್ವಾತಂತ್ರ ಕಲ್ಪಿಸುವುದೇ ರಾಷ್ಟ್ರೀಯ ಕಾಂಗ್ರೆಸ್ ನ ಗುರಿಯಾಗಿತ್ತು. ಆದರೆ ಆನಂತರದಲ್ಲಿ ಅದನ್ನೊಂದು ಪಕ್ಷವಾಗಿ ನೋಂದಾಯಿಸಿ ದೇಶಕ್ಕೆ ಅಪಾರ ಕೊಡುಗೆ ನೀಡಲಾಯಿತು ಎಂದರು.
1885ರಲ್ಲಿ ಬ್ಯಾನರ್ಜಿ, ಎ.ಓ.ಹ್ಯೂಮ್, ನೆಹರು, ತಿಲಕ್ ರಂತಹವರು ಸೇರಿ ಬ್ರಿಟಿಷರ ದಾಸ್ಯದಿಂದ ಹೊರಬರಲು ಕಾಂಗ್ರೆಸ್ ಪಕ್ಷ ಹುಟ್ಟು ಹಾಕಿದರು. ಮಹಾತ್ಮಗಾಂಧಿ ಅವರ ಪ್ರವೇಶದ ನಂತರ ಕಾಂಗ್ರೆಸ್ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ, ಕರನಿರಾ ಕರಣ, ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ಹಲವಾರು ಹೋರಾಟ ಜರುಗಿದ್ದರ ಪರಿಣಾಮ ಭಾರತ ಸ್ವಾತಂತ್ರವಾಯಿತು. ಆದರೆ ನಾಥೂರಾಮ್ ಗೂಡ್ಸೆಯಂತಹ ವ್ಯಕ್ತಿ ಗಾಂಧಿಯನ್ನು ಕೊಂದರು, ಆದರೆ ಇಂದು ಬಿಜೆಪಿ ಮುಖಂಡರು ನಾಥೂರಾಮ್ ಗೂಡ್ಸೆಯವರನ್ನು ಪೂಜಿಸುತ್ತಾ ದೇಶದ ಜನರಿಗೆ ದೇಶ ಪ್ರೇಮ ಕಲಿಸಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಕಾಂಗ್ರೆಸ್ ಮುಖಂಡ ಗಂಗಾಧರ್ ಮಾತನಾಡಿ, 72 ಜನ ಪ್ರಮುಖರು ಸೇರಿ ಕಟ್ಟಿದ ಕಾಂಗ್ರೆಸ್ ಹೋರಾಟದಿಂದ ಕೇವಲ ರಾಜಕೀಯ ಸ್ವಾತಂತ್ರ ಮಾತ್ರ ದೊರೆಯಲಿಲ್ಲ, ಎಲ್ಲಾ ರೀತಿಯಿಂದ ಭಾರತೀಯರು ಸ್ವಾತಂತ್ರ ಪಡೆದರು, ನಮ್ಮದೇ ಆದ ಆರ್‌ಬಿಐ ಶಿಕ್ಷಣ ವ್ಯವಸ್ಥೆ, ಸಾರಿಗೆ ಎಲ್ಲವನ್ನು ಹೊಂದಲು ಸಾಧ್ಯವಾಯಿತು, ಶೂನ್ಯದಿಂದ ಇಂದಿನ ಭಾರತದ ಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ, ಇದನ್ನು ಪ್ರತಿ ಮನೆ ಮನೆಗೂ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಬೇಕಾಗಿದೆ, ಆ ಮೂಲಕ ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋ ರಾಜು, ಮೆಹಬೂಬ್ ಪಾಷ, ವಿಜಯಪ್ರಕಾಶ್, ವಿಜಯಕುಮಾರ್, ಮುಖಂಡರಾದ ನಟರಾಜು, ಸಂಜೀವಕುಮಾರ್, ಪ್ರಕಾಶ್, ಲಕ್ಷ್ಮಿ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ನದೀಂ, ಉಪಾಧ್ಯಕ್ಷ ಆದೀಲ್, ಗೀತಮ್ಮ, ಕವಿತಾ, ಮುಬೀನ ಇತರರು ಇದ್ದರು.
ಕಾಂಗ್ರೆಸ್ ಪಕ್ಷ ದೇಶಕ್ಕೆ ಅಪಾರ ಕೊಡುಗೆ ನೀಡಿದೆ
Get real time updates directly on you device, subscribe now.
Prev Post
Next Post
Comments are closed.