ಶಿರಾ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ನಗರಸಭೆ ಮತದಾನದಲ್ಲಿ ನಾಗರಿಕರು ಯಾರನ್ನು ಆಯ್ಕೆ ಮಾಡಿದ್ದಾರೆ ಎನ್ನುವ ಕುತೂಹಲಕ್ಕೆ ಗುರುವಾರ ತೆರೆ ಬೀಳಲಿದ್ದು, ಅಪರಾಹ್ನದ ವೇಳೆಗೆ ಅಧಿಕಾರ ಯಾರ ಪಾಲಾಗಲಿದೆ ಎನ್ನುವ ಸ್ಪಷ್ಟ ಚಿತ್ರಣ ಸಿಕ್ಕಲಿದೆ.
2013ರ ನಂತರ ಚುನಾವಣೆ ನಡೆದು ಚುನಾಯಿತ ಮಂಡಲಿಯ ಆಡಳಿತಾವಧಿ ಮುಗಿದು ಹೊಸ ಚುನಾವಣೆಗೆ ಮೂರು ವರ್ಷ ಕಾಯಬೇಕಾಗಿದ್ದು, ಇದರ ನಡುವೆ ನಗಣ್ಯವಾಗಿದ್ದ ಬಿಜೆಪಿ ಶಾಸಕ ಸ್ಥಾನ ಗಳಿಸುವ ಮೂಲಕ ಹುರುಪು ಪಡೆದಿದ್ದರೆ, ಮಾಜಿ ಶಾಸಕ ಬಿ.ಸತ್ಯನಾರಾಯಣ ಅವರ ಮರಣಾನಂತರ ಜೆಡಿಎಸ್ ಸ್ವಲ್ಪ ಮಟ್ಟಿನ ಹುಮ್ಮಸ್ಸು ಕಳೆದುಕೊಂಡಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದ ಕಾಂಗ್ರೆಸ್‌ಗೆ ಅಧಿಕಾರ ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
ಸೋಮವಾರ ಮತದಾನ ನಡೆದಿದ್ದು, ಮತ ಎಣಿಕೆ ದಿನ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳಲ್ಲಿ ತಳಮಳ ಉಂಟುಮಾಡಿದ್ದು, ಎದೆ ಬಡಿತ ಏರಿಸಿದೆ. ಮತ ಎಣಿಕೆಗಾಗಿ ತಾಲ್ಲೂಕು ಆಡಳಿತ ಸಿದ್ಧತೆ ನಡೆಸಿದ್ದು, ಮತ ಎಣಿಕೆಗಾಗಿ ಚುನಾವಣಾಧಿಕಾರಿಗೆ ಎರಡು ಟೇಬಲ್ ನಂತೆ ಒಟ್ಟು 12 ಟೇಬಲ್ ಗಳಲ್ಲಿ ವಾರ್ಡ್ ವಾರು ಮತಗಟ್ಟೆ ಸಂಖ್ಯೆವಾರು ಮೂರು ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ಮೊದಲೆರಡು ಟೇಬಲ್ ಗಳಲ್ಲಿ ಮೊದಲ ಸುತ್ತಿನಲ್ಲಿ 1,2 ನೇ ಮತಗಟ್ಟೆಯ ಮತ ಎಣಿಕೆ ನಡೆದರೆ, ಎರಡನೇ ಟೇಬಲ್‌ನಲ್ಲಿ 8 ಮತ್ತು 9ನೇ ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ. ಮೂರನೇ ಟೇಬಲ್‌ನಲ್ಲಿ 14, 15 ಮತ್ತು 16 ಮತಗಟ್ಟೆಗಳ ಮತ ಎಣಿಕೆ ನಡೆದರೆ, 4ನೇ ಟೇಬಲ್‌ನಲ್ಲಿ 21 ಮತ್ತು 22ನೇ ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ. 5ನೇ ಟೇಬಲ್‌ನಲ್ಲಿ 30,31 ಮತ್ತು 32,33ನೇ ಮತಗಟ್ಟೆಗಳ ಮತ ಎಣಿಕೆ ನಡೆದರೆ, 6ನೇ ಟೇಬಲ್‌ನಲ್ಲಿ 36 ಮತ್ತು 37, 38ನೇ ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ.
ಎರಡನೇ ಸುತ್ತಿನಲ್ಲಿ ಮೊದಲ ಟೇಬಲ್‌ನಲ್ಲಿ 3 ಮತ್ತು 4,5ನೇ ಮತಗಟ್ಟೆಗಳ ಮತ ಎಣಿಕೆ ನಡೆಯಲಿದ್ದು, 2ನೇ ಟೇಬಲ್‌ನಲ್ಲಿ 10 ಮತ್ತು 11,12ನೇ ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ. 3ನೇ ಟೇಬಲ್‌ನಲ್ಲಿ 17 ಮತ್ತು 18,19ನೇ ಮತಗಟ್ಟೆಗಳ ಮತ ಎಣಿಕೆ ನಡೆಯಲಿದ್ದು, 4ನೇ ಟೇಬಲ್ ನಲ್ಲಿ 23, 24 ಮತ್ತು 25, 26ನೇ ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ. 5ನೇ ಟೇಬಲ್ ನಲ್ಲಿ 34 ಮತ್ತು 35ನೇ ಮತಗಟ್ಟೆಗಳ ಮತ ಎಣಿಕೆ ನಡೆದರೆ, 6ನೇ ಟೇಬಲ್ ನಲ್ಲಿ 39,40 ಮತ್ತು 41,42ನೇ ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ.
ಮೂರನೇ ಸುತ್ತಿನಲ್ಲಿ 1ನೇ ಟೇಬಲ್ ನಲ್ಲಿ 6,7 ನೇ ಮತಗಟ್ಟೆಗಳ ಮತ ಎಣಿಕೆ ನಡೆದರೆ, 2ನೇ ಟೇಬಲ್ ನಲ್ಲಿ 13ನೇ ಮತಗಟ್ಟೆಯ ಮತ ಎಣಿಕೆ ನಡೆಯಲಿದೆ. 3ನೇ ಟೇಬಲ್ ನಲ್ಲಿ 20ನೇ ಮತಗಟ್ಟೆಯ ಮತ ಎಣಿಕೆ ನಡೆದರೆ, 4ನೇ ಟೇಬಲ್ ನಲ್ಲಿ 27,28ನೇ ಮತಗಟ್ಟೆಯ ಮತ ಎಣಿಕೆ ನಡೆಯಲಿದೆ. 6ನೇ ಟೇಬಲ್ ನಲ್ಲಿ 43 ಮತ್ತು 44ನೇ ಮತಗಟ್ಟೆಗಳ ಮತ ಎಣಿಕೆ ನಡೆಸುವ ಮೂಲಕ, ಒಟ್ಟಾರೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದ್ದು, ಹತ್ತು ಗಂಟೆ ವೇಳೆಗೆ ಎಲ್ಲಾ ವಾರ್ಡ್ ಗಳ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ.
Get real time updates directly on you device, subscribe now.
Prev Post
Next Post
Comments are closed.